ಪಾಪು ಬಾಯಲ್ಲಿ ಬಾಪು ಮಾತು

7

ಪಾಪು ಬಾಯಲ್ಲಿ ಬಾಪು ಮಾತು

Published:
Updated:
Deccan Herald

ಬೆಂಗಳೂರು: ಸಮಗ್ರ ಕರ್ನಾಟಕದ ಪರಿಕಲ್ಪನೆ ನಮ್ಮ ಸರ್ಕಾರಕ್ಕೆ ಅರಿವಾಗಬೇಕು. ಆಗ ಗಾಂಧಿ ಕನಸು ನನಸಾಗಿಸಬಹುದು. 

– ಇದು ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಮಾತು. 

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಶ್ರಯದಲ್ಲಿ ‘ಬಾ ಬಾಪು’ 150ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು ಶೀರ್ಷಿಕೆಯ ಸಂವಾದದಲ್ಲಿ ಸೋಮವಾರ ಅವರು ಮಾತನಾಡಿದರು. ಬೇರೆ ಬೇರೆ ಶಾಲೆಗಳ ಮಕ್ಕಳು ಕುತೂಹಲದ ಪ್ರಶ್ನೆ ಕೇಳಿದರು. ಬಾಪು ಮತ್ತು ಪಾಪು ಸಂವಾದದ ಝಲಕ್‌ ಹೀಗಿದೆ.

‘10ನೇ ವಯಸ್ಸಿನವನಿದ್ದಾಗ ಗಾಂಧೀಜಿ ಅವರು ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿದರು. ಅಂದೇ ವಿದೇಶಿ ಬಟ್ಟೆಗಳನ್ನು ತ್ಯಜಿಸಿದೆ. ನನಗೆ ಖಾದಿ ಬಟ್ಟೆಯನ್ನೇ ಕೊಡಿ. ಇಲ್ಲವಾದರೆ ಗೊಮ್ಮಟನಂತಿರಬೇಕಾಗುತ್ತದೆ ಎಂದು ಹಿರಿಯರ ಮೇಲೆ ಒತ್ತಡ ಹೇರಿದೆ. ಅಂದಿನಿಂದ ಇಂದಿನವರೆಗೂ ನಾನು ಖಾದಿ ಬಟ್ಟೆಯನ್ನೇ ತೊಡುತ್ತಿದ್ದೇನೆ. ಮನಸ್ಸು ಮಾಡಿದರೆ ಇದ್ಯಾವುದೂ ಕಷ್ಟವಲ್ಲ. ಖಾದಿಯ ಒಂದು ಬಟ್ಟೆಯಾದರೂ ನಿಮ್ಮ ಬಳಿಯಿರಲಿ’. 

* ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನು ನಾಥೂರಾಮ ಗೋಡ್ಸೆ ಏಕೆ ಕೊಂದ?

ಪಾಪು: ನೋಡಿ ರಾಜಕಾರಣಿಗಳು ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಬೇಕಾದ ಕಥೆ ಕಟ್ಟುತ್ತಾರೆ. ಭಾರತ ಕೆಟ್ಟು ಹೋಗಲು ಗಾಂಧೀಜಿಯೇ ಕಾರಣ ಎಂದವರೂ ಇದ್ದಾರೆ. ದೇಶ ವಿಭಜನೆಯ ಕಾಲದಲ್ಲಿ ಇಲ್ಲಿಂದ ತೆರಳುವ ಮುಸ್ಲಿಮರಿಗೆ ಇಂತಿಷ್ಟು ನಗದು ಕೊಡಬೇಕು ಎಂದು ಗಾಂಧಿ ಪ್ರತಿಪಾದಿಸಿದ್ದರು. ಇಂಥ ಹಲವು ಕಾರಣಗಳನ್ನು ಹಲವರು ಹೇಳುತ್ತಾರೆ. ಆದರೆ, ಅದ್ಯಾವುದೂ ಆ ಕೃತ್ಯವನ್ನು ಸಮರ್ಥಿಸುವಂಥದ್ದಲ್ಲ. 

* ನೀವು ಹೇಗೆ ಇಷ್ಟೆಲ್ಲಾ ಬರೆಯುತ್ತೀರಿ?

– ನನ್ನ ದಿನಚರಿ ಆರಂಭವಾಗುವುದೇ ಬರವಣಿಗೆಯಿಂದ

* ನಿಮ್ಮ ಆರೋಗ್ಯದ ಗುಟ್ಟು?

– ಕಡಿಮೆ ತಿನ್ನಿ. ಹೆಚ್ಚು ದಿನ ಬಾಳುತ್ತೀರಿ. 

‘ಎಸ್‌. ನಿಜಲಿಂಗಪ್ಪ ಅವರನ್ನು ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಬೇಕು. ಆಗಲೇ ನಾನು ಬಸವಶ್ರೀ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧ.

ಪ್ರೊ.ಶಾಂತಿನಾಥ ದಿಬ್ಬದ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಲೋಹಿತ ನಾಯ್ಕ ಸಂವಾದ ನಡೆಸಿಕೊಟ್ಟರು. ಡಾ.ಪೂಡೆ ಪಿ.ಕೃಷ್ಣ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !