ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸ ವಾರಣಾಸಿ ಫೆಮಿನಾ ಮಿಸ್ ಇಂಡಿಯಾ-2020: ಯಾರು ಈ ಸುಂದರಿ?

Last Updated 11 ಫೆಬ್ರುವರಿ 2021, 12:38 IST
ಅಕ್ಷರ ಗಾತ್ರ

ಮುಂಬೈ:ನಗರದಲ್ಲಿಫೆಬ್ರುವರಿ 10ರಂದು (ಬುಧವಾರ) ರಾತ್ರಿ ನಡೆದ ಫೆಮಿನಾ ಮಿಸ್ ಇಂಡಿಯಾ-2020 ಸೌಂದರ್ಯ ಸ್ಪರ್ಧೆಯಲ್ಲಿ ಮಾನಸ ವಾರಣಾಸಿ ಅವರು ʼಮಿಸ್ ಇಂಡಿಯಾ-2020ʼ ಕಿರೀಟ ಮುಡಿಗೇರಿಸಿಕೊಂಡರು.

ಸುಂದರಿಮಾನಸ, ಅಂತಿಮ ಸುತ್ತಿನಲ್ಲಿದ್ದ ವಿವಿಧ ರಾಜ್ಯಗಳ ಒಟ್ಟು 14 ಪ್ರತಿಸ್ಪರ್ಧಿಗಳ ಸವಾಲನ್ನುಮೀರಿ ಪ್ರಶಸ್ತಿ ಜಯಿಸಿದರು. ಹರಿಯಾಣದ ಮಣಿಕಾ ಶಿಯೋಕಂದ್‌ ಅವರು ಮಿಸ್‌ ಗ್ರ್ಯಾಂಡ್‌ ಇಂಡಿಯಾ-2020 ಹಾಗೂ ಉತ್ತರ ಪ್ರದೇಶದ ಮಾನ್ಯಸಿಂಗ್‌ ಅವರು ಮಿಸ್‌ ಇಂಡಿಯಾ-2020 ರನ್ನರ್ಸ್‌ ಅಪ್‌ ಆಗಿ ಹೊರಹೊಮ್ಮಿದರು. ಈ ಮೂವರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಾಲಿವುಡ್‌ ನಟಿ-ನಟರಾದ, ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್‌, ಪುಲ್ಕಿತ್‌ ಸಾಮ್ರಾಟ್‌ ಹಾಗೂ ವಸ್ತ್ರವಿನ್ಯಾಸಕ ಜೋಡಿ ಫಲ್ಗುಣಿ ಮತ್ತು ಶೇನ್‌ ಪೀಕಾಕ್‌ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸದ್ಯ ಮಾನಸ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಿಸ್‌ ವರ್ಲ್ಡ್‌-2020 ಸ್ಪರ್ಧೆಯಲ್ಲಿಭಾರತವನ್ನು ಪ್ರತಿನಿದಿಸಲುಸಜ್ಜಾಗುತ್ತಿದ್ದಾರೆ.

ಯಾರು ಈ ಮಾನಸ ವಾರಣಾಸಿ?
ಮಾನಸ ಹುಟ್ಟಿದ್ದು,ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ.ಇಲ್ಲಿನವಾಸವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದಿಕೊಂಡಿರುವಅವರು ಸದ್ಯ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಯೋಗ ಹವ್ಯಾಸ ರೂಢಿಸಿಕೊಂಡಿರುವ ಆಕೆಗೆ ಭರತನಾಟ್ಯ ಮತ್ತು ಸಂಗೀತವೆಂದರೆ ಅಚ್ಚುಮೆಚ್ಚು.

ಬಾಲ್ಯದಲ್ಲಿ ನಾಚಿಕೆ ಸ್ವಭಾವದವರಾಗಿದ್ದ ಮಾನಸ ಅವರನ್ನು ಪ್ರಭಾವಿಸಿದ ಪ್ರಮುಖ ಮೂವರು ಮಹಿಳೆಯರೆಂದರೆ ಆಕೆಯ ತಾಯಿ,ಅಜ್ಜಿ ಮತ್ತು ಸಹೋದರು ಎಂಬುದನ್ನು ಮಿಸ್‌ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವಸುಂದರಿಪ್ರಿಯಾಂಕಾ ಚೋಪ್ರಾ ಅವರಿಂದಲೂ ಸ್ಫೂರ್ತಿ ಪಡೆದಿರುವುದಾಗಿ ಹೇಳಿಕೊಳ್ಳುವ 23 ವರ್ಷದ ಈ ಸುಂದರಿ, 'ಪ್ರಿಯಾಂಕಾ ಚೋಪ್ರಾ ನನ್ನ ಕಣ್ಣಿಗೆಮುಂಚೂಣಿಯಲ್ಲಿ ಕಾಣುತ್ತಾರೆ. ಏಕೆಂದರೆ ಆಕೆ ಅನ್ವೇಷಕಿ. ತಮ್ಮ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಸಂಗೀತ, ಸಿನಿಮಾ, ಹೂಡಿಕೆ, ಸಾಮಾಜಿಕ ಕಾರ್ಯ ಮತ್ತು ಇನ್ನಿತರ ಹಲವು ಕ್ಷೇತ್ರಗಳಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ಅವರ ಬಹುಮುಖತೆ ಮತ್ತು ಸಾಮರ್ಥ್ಯವೇ ನನಗೆಸ್ಫೂರ್ತಿʼ ಎಂದಿದ್ದಾರೆ.

ಸಂಕೇತ ಭಾಷೆಯನ್ನೂ ಕಲಿತಿರುವ ಮಾನಸ, 'ನಾನು ಸಂಕೇತ ಭಾಷೆಯನ್ನೂ ಕಲಿತಿದ್ದೇನೆ. ಏಕೆಂದರೆ ಕಲಿಯುವುದು ನನಗೆ ಸಂತಸ ನೀಡುತ್ತದೆ. ನಾನು ಈ ಭಾಷೆಯನ್ನು ಕಲಿಯಲಾರಂಭಿಸಾಗ ನನ್ನಲ್ಲಿ ಕುತೂಹಲ ಕೆರಳಿಸಿತು. ಆದರೆ ನನ್ನ ಕಣ್ಣುಗಳಲ್ಲಿ ಆಲಿಸುವುದನ್ನು ಕಲಿತಾಗ ಕಿವುಡುತನದ ಸೌಂದರ್ಯದ ಅರಿತುಕೊಂಡೆʼ ಎಂದು ಈ ಹಿಂದೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT