ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯಾದಲ್ಲಿ ಸೌಂದರ್ಯ ರಾಜಕಾರಣ

Last Updated 7 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಮಿನುಗುವ ಚರ್ಮ, ಹೊಳೆವ ಕಣ್ಣು, ತುಟಿಗೊಂದಿಷ್ಟು ಬಣ್ಣ, ಕಣ್ಣಿಗೆ ಕಪ್ಪಿನ ಅಂಚು, ನುಣುಪಿನ ಕೂದಲು ಜತೆಗೊಂದಿಷ್ಟು ನವಿರು ಬಣ್ಣ.. ಯಾವುದಾದರೂ ಒಂದು ಸರಿಯಿಲ್ಲದಿದ್ದರೂ ದೊಡ್ಡ ಕೊರತೆ ಎಂಬಂತೆ ವರ್ತಿಸುವ ಸಮಾಜ. ಮಗಳ ಹುಟ್ಟಿದ ದಿನಕ್ಕೆ ಪ್ಲಾಸ್ಟಿಕ್ ಸರ್ಜರಿ ಕೂಪನ್ ಉಡುಗೊರೆ ನೀಡುವ ಪೋಷಕರು. ಇದು ದಕ್ಷಿಣ ಕೊರಿಯಾದ ಹೆಣ್ಣು ಮಕ್ಕಳ ಸದ್ಯದ ಸ್ಥಿತಿ!

ದೇಹದ ಪ್ರತಿ ಅಂಗಾಂಗ ತಿದ್ದಿತೀಡಿ ಗೊಂಬೆಯಂತೆ ಆಗುವವರೆಗೂ ಬಿಡದೇ ಮುಖದ ಅಂಗಾಂಗವನ್ನೂ ಕತ್ತರಿಸಿ ಹೊಂದಿಸುವ ಬಾಹ್ಯ ಸೌಂದರ್ಯ ಆರಾಧಕರು ಇಲ್ಲಿಯವರು. ಸಣ್ಣ ವಯಸ್ಸಿನಿಂದಲೇ ಇಲ್ಲಿನ ಹೆಣ್ಣುಮಕ್ಕಳು ಉದ್ದ ಮೂಗು, ಮೊಡವೆ ಇಲ್ಲದ ಚರ್ಮ, ಗುಂಗುರು ಇಲ್ಲದ ನೇರ ಕೂದಲು, ನೀಳ ಕಾಲು ಹೊಂದಲೇ ಬೇಕೆನ್ನುವ ಉಮೇದಿಗೆ ಬೀಳುತ್ತಾರೆ.

ಅದಕ್ಕೆ ತಕ್ಕಂತೆ ದಕ್ಷಿಣ ಕೊರಿಯಾದ ಸೌಂದರ್ಯವರ್ಧಕ ಉತ್ಪನ್ನಗಳ ಉದ್ಯಮವೂ ಬೆಳೆದು ನಿಂತಿದೆ. ಜಗತ್ತನಲ್ಲಿ ‘ಕೆ–ಬ್ಯೂಟಿ’ ಸೌಂದರ್ಯವರ್ಧಕ ಉತ್ಪನ್ನಗಳು ಹೆಸರುವಾಸಿಯಾಗಿವೆ. ‘ಕೆ–ಬ್ಯೂಟಿ’ ಎಂದರೆ ಅದೊಂದು ಸೌಂದರ್ಯ ವರ್ಧನೆ ಸಂಸ್ಕಾರ ಎನ್ನುವಂತಾಗಿದೆ. ‘ಕೆ–ಬ್ಯೂಟಿ’ ಹಂತಗಳು ಗಾಬರಿ ಹುಟ್ಟಿಸುತ್ತವೆ.

ಮುಖಕ್ಕೆ ಸ್ಕ್ರಬಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಇವು ಸಾಧಾರಣವಾಗಿ ಮಾಡುವಂಥವು ಆದರೆ ‘ಕೆ–ಬ್ಯೂಟಿ’ಯಲ್ಲಿ ಏನಿಲ್ಲವೆಂದರೂ 10ರಿಂದ 15 ಹಂತವಿದೆ. ಡಬಲ್ ಕ್ಲೆನ್ಸಿಂಗ್, ಫೇಸ್‌ಮಾಸ್ಕ್, ಮೂರು ಬಗೆಯ ಮಾಯಿಶ್ಚರೈಸಿಂಗ್ ಕ್ರೀಂ, ಫೇಸ್ ಸೆರೆಂ, ಸನ್ ಬ್ಲಾಕ್, ಎಸೆನ್ಸ್‌ ಆಯಿಲ್, ಚರ್ಮದ ನೆರಿಗೆ ತಡೆಯುವ ಕ್ರೀಂ ಹೀಗೆ ಪಟ್ಟಿ ಬೆಳೆಯುತ್ತದೆ. ಜಗತ್ತಿನಾದ್ಯಂತ ಸಿನಿಮಾ, ನಟನಟಿಯರು ಸೇರಿದಂತೆ ನಮ್ಮ ಬಾಲಿವುಡ್ ಮಂದಿಯೂ ಸೋಶಿಯಲ್ ಮೀಡಿಯಾದಲ್ಲಿ ‘ಕೆ–ಬ್ಯೂಟಿ’ ಚಾಲೆಂಜ್ ತೆಗೆದುಕೊಂಡು ದಿನ 10ರಿಂದ 15 ಹಂತ ಕ್ರೀಂಗಳನ್ನು ಹಚ್ಚಿ ಹೊಳೆವ ತಮ್ಮ ಮಖವನ್ನು ತೊರುತ್ತಿದ್ದಾರೆ.

‘ಸಾಫ್ಟ್‌ ಇನ್‌ಫ್ಲುಯೆನ್ಸ್‌’: ‘ಕೆ–ಬ್ಯೂಟಿ’ ಜಗತ್ತಿನ ಮೇಲೆ ಬೀರಿರುವ ಪ್ರಭಾವವೂ ದೊಡ್ಡಮಟ್ಟದು. ಅಣುಬಾಂಬ್ ಇಟ್ಟುಕೊಂಡು ಪ್ರಭಾವಿ ರಾಷ್ಟ್ರ ಎಂದು ಹೆದರಿಸಿ ಹೆಸರು ಮಾಡುತ್ತಿರುವ ರಾಷ್ಟ್ರಗಳ ನಡುವೆ ನಮ್ಮದು ‘ಸಾಫ್ಟ್‌ ಇನ್‌ಫ್ಲುಯೆನ್ಸ್‌’ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿದೆ ದಕ್ಷಿಣ ಕೊರಿಯಾ.

‘ಕಿಮ್ ಜಾಂಗ್ ಉನ್’ ಮುಖ ಚಿತ್ರವಿರುವ ಶೀಟ್‌ ಮಾಸ್ಕ್‌

ಕಿಮ್ ಜೊಂಗ್ ಉನ್ ಬ್ಯೂಟಿ ಲೈನ್‌:ಜಾಗತಿಕವಾಗಿ ‘ಕೆ–ಬ್ಯೂಟಿ’ ಹೆಚ್ಚಿದ ಕಿಚ್ಚು ಹೆಚ್ಚು ತಟ್ಟಿದ್ದು ದಕ್ಷಿಣ ಕೊರಿಯಾಗೆ. ‘ಕೆ–ಬ್ಯೂಟಿ’ ಬೆಳವಣಿಗೆ, ಪ್ರಸಿದ್ದಿ ಕಂಡು ದಕ್ಷಿಣ ಕೊರಿಯಾದ ವರಿಷ್ಠ ನಾಯಕ ಕಿಮ್ ಜೊಂಗ್ ಉನ್ ತಮ್ಮ ನೆಲದಲ್ಲೂ ಸೌಂದರ್ಯ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಆಸಕ್ತಿ ತೋರಿದ್ದಾರೆ.

ಸಾಂಪ್ರದಾಯಿಕ ನಡವಳಿಕೆಯ ಉತ್ತರ ಕೊರಿಯಾ ಈ ನಿಲುವಿನಿಂದ ಬಹುದೊಡ್ಡ ಸಂಸ್ಕೃತಿಕ ಬದಲಾವಣೆ ಎದುರು ನೋಡಲಿದೆ. ‘ಕೆ–ಬ್ಯೂಟಿ’ಯಲ್ಲಿ ಇರುವಂತೆಯೇ ಹಲವು ಕ್ಲೆನ್ಸಿಂಗ್, ಫೇಸ್‌ಮಾಸ್ಕ್, ಮಾಯಿಶ್ಚರೈಸಿಂಗ್ ಕ್ರೀಂ, ಫೇಸ್ ಸೆರೆಂ, ಸನ್ ಬ್ಲಾಕ್, ಎಸೆನ್ಸ್‌ ಆಯಿಲ್‌ಗಳನ್ನು ಪರಿಚಯಿಸುತ್ತದೆ. ‘ಕಿಮ್ ಜೊಂಗ್ ಉನ್’ ಮುಖ ಚಿತ್ರವಿರುವ ಶೀಟ್‌ ಮಾಸ್ಕ್‌ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಸೌಂದರ್ಯ ಉತ್ಪನ್ನಗಳ ಕಳ್ಳಸಾಗಣೆ
ದಕ್ಷಿಣ ಕೊರಿಯಾದ ಸೌಂದರ್ಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿ ಇವೆ. ‘ಕೆ–ಬ್ಯೂಟಿ’ ಹೆಸರಿನಲ್ಲಿ ಕಳೆದ ವರ್ಷದಿಂದ ದಕ್ಷಿಣ ಕೊರಿಯಾ ಪಡೆದ ಮನ್ನಣೆ ಸಂಪ್ರದಾಯವಾದಿ ಉತ್ತರ ಕೊರಿಯಾಗೆ ನುಂಗಲಾರದ ತುತ್ತಾಗಿದೆ. ಉತ್ತರ ಕೊರಿಯಾ ಮಹಿಳೆಯರು ಹೆಚ್ಚು ಮೇಕಪ್ ಬಳಸುವಂತಿಲ್ಲ, ತುಂಡು ಬಟ್ಟೆ ತೊಡುವಂತಿಲ್ಲ ಎಂಬ ಕಟ್ಟಾಜ್ಞೆ ಇಲ್ಲಿನ ಮಹಿಳೆಯರು ಸೌಂದರ್ಯ ಲೋಕದಿಂದ ಸಂಪೂರ್ಣ ವಿಮುಖರಾಗುವಂತೆ ಮಾಡಿತ್ತು.

ದಕ್ಷಿಣ ಕೊರಿಯಾದ ‘ಕೆ–ಬ್ಯೂಟಿ’ ಉತ್ಪನ್ನಗಳನ್ನು ಬಳಸುವಂತಿಲ್ಲ ಎಂಬ ಆಜ್ಞೆಯನ್ನೂ ಮೀರಿ ಕಳ್ಳಸಾಗಣೆ ಮೂಲಕ ತಮಗೆ ಬೇಕಾದ ಉತ್ಪನ್ನಗಳನ್ನು ತರಿಸಿಕೊಳ್ಳುತ್ತಿದ್ದಾರೆ.

‘ನನ್ನ ಜೀವನವನ್ನು ಒತ್ತೆ ಇಟ್ಟು ದಕ್ಷಿಣ ಕೊರಿಯಾಗೆ ಬಂದೆ. ಮೇಕಪ್ ಉತ್ಪನ್ನಗಳ ಮೇಲಿನ ನನ್ನ ವ್ಯಾಮೋಹವೇ ಇದ್ದಕ್ಕೆ ಕಾರಣ. ನಾನು ಮೊದಲ ಬಾರಿ ಸೌಂದರ್ಯ ಉತ್ಪನ್ನಗಳ ಕಳ್ಳಸಾಗಣೆ ಮಾಡುವಾಗ ಸಿಕ್ಕಿ ಬಿದ್ದೆ. ಕೆಲ ಯೋಧರು ಮನೆಗೆ ಬಂದು ನನ್ನ ಬಗ್ಗೆ ವಿಚಾರಿಸಿದರು. ಆದರೆ ನನ್ನ ಅಣ್ಣ ನನ್ನ ಬಗ್ಗೆ ಮಾಹಿತಿ ನೀಡದೆ, ತಾನು ಬಂಧಿಯಾದ. ಇಂದಿಗೂ ಅವನು ಯಾವುದೋ ಗುಪ್ತ ಸೇನಾ ಬಂಧಿಖಾನೆಯಲ್ಲಿ ಇದ್ದಾನೆ. ಅವನು ಬದುಕಿದ್ದಾನೆ ಎಂಬ ನಂಬಿಕೆ ನನಗಿಲ್ಲ’ ಎನ್ನುತ್ತಾರೆ ಸೌಂದರ್ಯ ಉತ್ಪನ್ನಗಳ ಕಳ್ಳಸಾಗಣೆ ಮಾಡುವ ಡಾನ್ಬಿ ಕಿಮ್.

ಡಾನ್ಬಿ ಕಿಮ್ ಮೊದಲ ಬಾರಿ ಮೇಕ್‌ ಅಪ್‌ ಉತ್ಪನ್ನಗಳ ಕಳ್ಳಸಾಗಣೆ ಮಾಡಿದ್ದು 14 ವರ್ಷದವಳಿದ್ದಾಗ. ಮೊದಲು ಲಿಪ್‌ಸ್ಟಿಕ್ ಮೇಲಿನ ಮೋಹಕ್ಕೆ ಕಳ್ಳಸಾಗಣೆ ಆರಂಭಿಸಿದ್ದು, ಈಗ ಮೇಕ್‌ಅಪ್‌ ಮಾಡಿಕೊಳ್ಳುವುದು ಸ್ವತಂತ್ರ ಪಡೆವ ನೈತಿಕ ಶಕ್ತಿ. ‘ಮೇಕ್‌ಅಪ್‌ ನನ್ನಲ್ಲಿನ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ’ ಎನ್ನುತ್ತಾರೆ.

ಡಾನ್ಬಿ ಕಿಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT