ಬಂಗಾರದ ಒಡವೆ ತೊಡಬೇಕೆಂಬ ಹಂಬಲ ಯಾವ ಹೆಣ್ಣಿಗೆ ತಾನೇ ಇರದು? ಚಿನ್ನದ ಬೆಲೆ ಗಗನಮುಖಿಯಾಗಿರುವ ಈ ತುಟ್ಟಿ ಕಾಲದಲ್ಲಿ, ಜೇಬು ಗಟ್ಟಿ ಇಲ್ಲದವರು ಅದನ್ನು ಕೊಳ್ಳುವುದಾದರೂ ಹೇಗೆ? ಕನಕಾಂಗಿಯರ ಈ ಕನಲಿಕೆಗೆ, ಹೆಚ್ಚು ಚಿನ್ನ ಬೇಡದ, ಆದರೆ ಅತ್ಯಾಕರ್ಷಕವಾಗಿ ಕಾಣುವ ಲೈಟ್‌ವೇಟ್ ಬಂಗಾರದ ಆಭರಣಗಳು ‘ಚಿನ್ನದಂತಹ’ ಉತ್ತರ ಕೊಡುತ್ತವೆ. ಬನ್ನಿ, ಅಂತಹ ಆಭರಣಗಳ ಕಡೆಗೊಂದು ದೃಷ್ಟಿ ಹಾಯಿಸಿ ಬರೋಣ.