ಕೋವಿಡ್ ಶುರುವಾದಾಗಿನಿಂದ ಬಹುತೇಕರು ತಮ್ಮ ಸೌಂದರ್ಯದ ಕಾಳಜಿ ಮಾಡುವುದನ್ನು ನಿಲ್ಲಿಸಿದ್ದಾರೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಇನ್ನೇಕೆ ಕ್ರೀಮ್, ಪೌಡರ್ ಬಳಕೆ ಎಂದುಕೊಂಡು ಸುಮ್ಮನಾಗುವವರು ಇದ್ದಾರೆ. ಈ ರೀತಿಯ ಆಲಸ್ಯದಿಂದ ಸೌಂದರ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಬ್ಯೂಟಿಪಾರ್ಲರ್‌ಗೂ ಹೋಗದೆ, ಮನೆಯಲ್ಲೂ ಕಾಳಜಿ ಮಾಡದೆ ಇರುವುದರಿಂದ ತ್ವಚೆಯ ಕಾಂತಿ ಕುಂದುವುದರೊಂದಿಗೆ ಕಲೆ, ಟ್ಯಾನ್, ಮೊಡವೆಯಂತಹ ಸಮಸ್ಯೆಗಳೂ ಹೆಚ್ಚುತ್ತಿವೆ.
ಕ್ರೀಮ್ ಹಚ್ಚಿ: ಕಚೇರಿಗೆ ಹೋಗುವಾಗ ಯಾವ ರೀತಿ ತ್ವಚೆಯ ಬಗ್ಗೆ ಆಸ್ಥೆ ವಹಿಸಿ ತಯಾರಾಗುತ್ತಿದ್ದೀರೋ ಮನೆಯಲ್ಲೂ ಹಾಗೇ ತಯಾರಾಗಿ. ಪ್ರತಿದಿನ ತಪ್ಪದೇ ಫೇಸ್‌ಕ್ರೀಮ್ ಹಚ್ಚಿಕೊಳ್ಳಿ. ಆಯಾಯ ಋತುಮಾನಕ್ಕೆ ಹೊಂದುವಂತಹ ಕ್ರೀಮ್ ಬಳಸುವುದು ಅಗತ್ಯ.
ಸಾಕಷ್ಟು ನೀರು ಕುಡಿಯಿರಿ: ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಯಾವುದೇ ಇರಲಿ, ಎಲ್ಲ ಕಾಲದಲ್ಲೂ ಸಾಕಷ್ಟು ನೀರು ಕುಡಿಯಿರಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ನೀರು ಚರ್ಮದ ಆರೋಗ್ಯಕ್ಕೆ ಉತ್ತಮ ಮದ್ದು.
ಆಗಾಗ ಮುಖ ತೊಳೆಯಿರಿ: ಹೊರಗೆಲ್ಲೂ ಹೋಗುತ್ತಿಲ್ಲ ಮನೆಯೊಳಗೇ ಇದ್ದೇವೆ, ದೂಳು–ಹೊಗೆ ತಾಕುತ್ತಿಲ್ಲ ಎಂಬ ಕಾರಣಕ್ಕೆ ಯಾವಾಗಲೋ ಒಮ್ಮೆ ಮುಖ ತೊಳೆಯುವುದು ಸರಿಯಲ್ಲ. ಪ್ರತಿದಿನ ಫೇಸ್‌ವಾಷ್ ಅಥವಾ ಸೋಪ್‌ನಿಂದ ಎರಡು ಬಾರಿ ಮುಖ ತೊಳೆದುಕೊಳ್ಳಿ. ತಣ್ಣೀರಿನಿಂದ ಮುಖ ತೊಳೆಯುವುದು ಉತ್ತಮ. ಹೆಚ್ಚು ರಾಸಾಯನಿಕವಲ್ಲದ ಫೇಸ್‌ಕ್ರೀಮ್ ಬಳಸಿ. ನೀಡಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.