ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

Livspace Reviews: ಮನೆಯ ಒಳಾಂಗಣ ಅಗತ್ಯಗಳಿಗೆ ಒಂದೇ ಮಳಿಗೆ

Last Updated 31 ಮಾರ್ಚ್ 2023, 10:43 IST
ಅಕ್ಷರ ಗಾತ್ರ

ಮನೆಯ ಒಳಾಂಗಣಕ್ಕಾಗಿ ಯಾಕೆ ಲಿವ್‌ಸ್ಪೇಸ್‌ ಆರಿಸಬೇಕು? ಗ್ರಾಹಕರು ತಮ್ಮ ಮನೆಯ ಒಳಾಂಗಣ ಮತ್ತು ನವೀಕರಣದ ಅನುಭವವನ್ನು ಲಿವ್‌ಸ್ಪೇಸ್‌ನೊಂದಿಗೆ ಹಂಚಿಕೊಳ್ಳುತ್ತಾರೆ.

ಒಳಾಂಗಣ ವಿನ್ಯಾಸ ಕ್ಷೇತ್ರದ ದಂತಕಥೆಯಾಗಿರುವ ಆಲ್ಬರ್ಟ್‌ ಹ್ಯಾಡ್ಲೀ ಅವರು ಹೇಳುತ್ತಾರೆ- "ಒಳಾಂಗಣ ವಿನ್ಯಾಸದ ಸಾರವೆಂದರೆ ಅದು ಜನರ ಬಗ್ಗೆ ಹಾಗೂ ಅವರು ಹೇಗೆ ಜೀವಿಸುತ್ತಾರೆ ಎಂಬ ಬಗ್ಗೆ ಆಗಿದೆ". ಸರಳವಾಗಿ ಹೇಳುವುದಾದರೆ ಒಳಾಂಗಣ ವಿನ್ಯಾಸವು ನೀವು ಜೀವಿಸುವ ವಿಧಾನವನ್ನೇ ಪ್ರೀತಿಸುವುದು-2014ರಿಂದೀಚೆಗೆ Livspace ಮನೆಯ ಮಾಲಕರಿಗೆ ಇದೇ ದೃಷ್ಟಿಕೋನವನ್ನು ಸಾಧಿಸಲು ನೆರವಾಗುತ್ತಿದೆ. ಲಿವ್‌ಸ್ಪೇಸ್‌ ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಮುಂಚೂಣಿಯ ಗೃಹ ಒಳಾಂಗಣ ವಿನ್ಯಾಸ ಮತ್ತು ನವೀಕರಣ ಸೇವಾದಾರ ಕಂಪನಿಯಾಗಿದೆ. ಲಿವ್‌ಸ್ಪೇಸ್‌ ವೈಯುಕ್ತಿಕಗೊಳಿಸಿದ ಮಾರುಕಟ್ಟೆ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಾ ಒಳಾಂಗಣ ವಿನ್ಯಾಸಕಾರರು, ಮಾರಾಟಗಾರರು, ಗ್ರಾಹಕರನ್ನು ಬೆಸೆಯುವ ಮೂಲಕ ವಿನ್ಯಾಸದಿಂದ ಅಳವಡಿಕೆ ವರೆಗಿನ ಪೂರ್ಣ ಅಗತ್ಯಗಳನ್ನು ಪೂರೈಸುತ್ತದೆ.

ನಿಮ್ಮ ಖರ್ಚಂದಾಜಿನ ಒಳಗೆ ಬರುವಂತೆ ಪರಿಪೂರ್ಣವಾದ ವಿನ್ಯಾಸ ರೂಪಿಸುವುದರಿಂದ ಹಿಡಿದು ಸಮರ್ಪಕವಾದ ವಸ್ತುಗಳನ್ನು ಆಯ್ಕೆ ಮಾಡಿ, ಸೂಕ್ತವಾದ ಪೀಠೋಪಕರಣಗಳನ್ನು ಆರಿಸುವಲ್ಲಿ ವರೆಗೆ ಅದೊಂದು ಸಮಗ್ರವಾದ ಪ್ರಕ್ರಿಯೆಯಾಗಿರುತ್ತದೆ. ನಿಮ್ಮ ಮನೆಯ ಒಳಾಂಗಣವನ್ನು ವಿನ್ಯಾಸಗೊಳಿಸುವುದು ಬಹುವಿಧ ಹಂತಗಳಿಂದ ಕೂಡಿದ್ದು, ವಿನ್ಯಾಸದ ಪರಿಕಲ್ಪನೆ, ಮಾರಾಟಗಾರರ ಆಯ್ಕೆ, ಸೇವಾಭಾಗಿದಾರರ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಇದೊಂದು ನಿರ್ಧಾರ ತೆಗೆದುಕೊಳ್ಳುವ ನಿರಂತರ ಪ್ರಕ್ರಿಯೆಯಾಗಿದ್ದು, ಯಾವಾಗಲೂ ಇಲ್ಲಿ ಪ್ರತಿ ಹೆಜ್ಜೆಯಲ್ಲೂ ಯಾವುದಾದರೂ ಹೊಸತನ್ನು ಸೇರಿಸಿಕೊಳ್ಳಬೇಕಾಗಿರುತ್ತದೆ. ಮನೆಯ ಒಳಾಂಗಣ ವಿನ್ಯಾಸದ ಪೂರ್ಣ ಪ್ರಕ್ರಿಯೆ ಹಾಗೂ ನವೀಕರಣವನ್ನು ಯಾವುದೇ ಕಷ್ಟಗಳಿಲ್ಲದ ಭಾವನೆಯೊಂದಿಗೆ ಕೈಗೊಳ್ಳುವುದಕ್ಕೆ ಲಿವ್‌ಸ್ಪೇಸ್‌ ಒಂದೇ ಉತ್ತಮ ಆಯ್ಕೆ.

ಒಳಾಂಗಣ ವಿನ್ಯಾಸಕ್ಕೆ Livspace ಆಯ್ಕೆ ಹೇಗೆ ಯೋಗ್ಯ?

ಮನೆಯ ಒಳಾಂಗಣ ವಿನ್ಯಾಸ ರೂಪಿಸುವ ಬಗ್ಗೆ ನಾವು ಸಮಾಲೋಚಿಸುವಾಗ ಕಾರ್ಯಯೋಗ್ಯ, ನಿರ್ವಹಣೆ ಮಾಡಬಲ್ಲ, ಸೊಗಸಾದ ಮತ್ತು ಮಿತವ್ಯಯದ ವಿನ್ಯಾಸಗಳನ್ನು ಪಡೆಯುವುದು ಅತ್ಯಂತ ಸೃಜನಶೀಲ, ವಿವರ ಬಯಸುವ ಕಣ್ಣುಗಳಿಗೂ ಸಹ ಕಠಿಣ ಕಾರ್ಯವಾಗಿದೆ. ಅನೇಕರಿಗೆ, ಮನೆ ಅತ್ಯಂತ ದುಬಾರಿ ಹೂಡಿಕೆಯಾಗಿದೆ. ಅದಕ್ಕಾಗಿಯೇ ವೃತ್ತಿಪರ ಸಹಾಯಕ್ಕಾಗಿ ಒಳಾಂಗಣ ವಿನ್ಯಾಸಕರನ್ನು ನೇಮಿಸಿಕೊಳ್ಳುವುದು ಎಷ್ಟು ಹೆಚ್ಚುವರಿ ಮಿತವ್ಯಯಕಾರಿ ಎಂಬ ಪ್ರಶ್ನೆಗಳು ಹುಟ್ಟುತ್ತವೆ.

ಒಳಾಂಗಣ ವಿನ್ಯಾಸವು ಕಲೆ ಮತ್ತು ವಿಜ್ಞಾನದ ಸೂಕ್ಷ್ಮ ಸಮತೋಲನವಾಗಿದ್ದು, ಉತ್ತಮ interior designerಗೆ ಅವೆರಡನ್ನು ಹೇಗೆ ಒಟ್ಟುಗೂಡಿಸಬೇಕೆಂದು ಅರಿವಿರುತ್ತದೆ. ನೂತನ ಆವಿಷ್ಕಾರೀ ವಿನ್ಯಾಸ ಪರಿಕಲ್ಪನೆಗಳು, ಶ್ರೇಷ್ಠ ಗುಣಮಟ್ಟದ ಉತ್ಪನ್ನಗಳ ಪಟ್ಟಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ, ಲಿವ್‌ಸ್ಪೇಸ್ ವಿನ್ಯಾಸ ತಂಡವು ನಿಮ್ಮ ಮನೆಗೆ ತಜ್ಞತೆಯಸ್ಪರ್ಶವನ್ನು ಒದಗಿಸುತ್ತದೆ. ಲಿವ್‌ಸ್ಪೇಸ್ ತಂಡವು ದೇಶದ ಅತ್ಯುತ್ತಮ interior designerಗಳನ್ನು ಹೊಂದಿದ್ದು, ಅವರು ನಿಮ್ಮ ಶೈಲಿ ಮತ್ತು ಸ್ಥಳಕ್ಕೆ ಹೊಂದಿಕೆಯಾಗುವ ವಿನ್ಯಾಸಗಳನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡಿ ನಿಮ್ಮ ಕನಸಿನ ಮನೆಯನ್ನು ನನಸಾಗಿಸುತ್ತಾರೆ.

Livspace Reviews: ಮನೆಯ ಒಳಾಂಗಣ ಅಗತ್ಯಗಳಿಗೆ ಒಂದೇ ಮಳಿಗೆ

ಉತ್ತಮ ವಿನ್ಯಾಸಕಾರನೆಂದರೆ ಹೊಂದಿಕೊಳ್ಳುವವನು ಮತ್ತು ನಿಮ್ಮ ಯೋಚನಾ ಶೈಲಿಗೆ ತಮ್ಮ ವಿನ್ಯಾಸ ಯೋಚನೆಗಳನ್ನು ಬೆಸೆಯುತ್ತಾ ಒಗ್ಗಿಕೊಳ್ಳಲು ಪ್ರಯತ್ನಿಸುವವನು. ಲಿವ್‌ಸ್ಪೇಸ್‌ನ ವೃತ್ತಿಪರ ವಿನ್ಯಾಸಕರ ಮತ್ತು ಉತ್ತಮ ತರಬೇತಿ ಪಡೆದ ಯೋಜನಾ ವ್ಯವಸ್ಥಾಪಕರ ತಂಡವು ಅದನ್ನು ಕಾರ್ಯಸಾಧ್ಯವಾಗಿಸುವುದು! ಮೆಚ್ಚುಗೆಯ Livspace reviewsಗಳನ್ನು ನೀಡಿರುವ ಕೆಲವು ಗ್ರಾಹಕರನ್ನು ಬೇಕಾದರೆ ಕೇಳಿ.

ಲಿವ್‌ಸ್ಪೇಸ್‌ ಒಳಾಂಗಣ ವಿನ್ಯಾಸಕಿಯಾಗಿರುವ ನೇಹಾ ಅವರು ಪೂನಂ ಮತ್ತು ಅರ್ನವ್‌ ಅವರ ಗುರುಗ್ರಾಮ್‌ನ 3ಬಿಎಚ್‌ಕೆ ಫ್ಲಾಟ್‌ಗಾಗಿ ಕ್ಲೀನ್, ವೈಟ್ ಬೇಸ್ ಒಳಗೊಂಡಿರುವ ಅದ್ಭುತವಾದ ವಿನ್ಯಾಸ ಯೋಜನೆಯನ್ನು ರೂಪಿಸಿದರು. ಈಗ ಪೂನಮ್‌ ಮತ್ತು ಅರ್ನವ್‌ ಅವರ ಮನೆಯನ್ನು ನೋಡಿದಾಗ ಅದು ಮನೆ ಮಾಲಕರ ಹರ್ಷಯುತ ಭಾವವನ್ನು ಪ್ರತಿಬಿಂಬಿಸುವ ಮೂಲಕ ಬ್ರ್ಯಾಂಡ್‌ನ ಜಾಣ್ಮೆಯನ್ನು ಪರಿಚಯಿಸುತ್ತದೆ. "ನಾವು ಹೋಟೆಲ್‌ನಂತಹ ಮನೆಯನ್ನೆಂದೂ ಬಯಸಲಿಲ್ಲ ಹಾಗೂ ಯಾವ ರೀತಿಯ ವಸ್ತುಗಳು ಬೇಕು ಅಥವಾ ಪೂರ್ಣತೆ ಬೇಕೆಂಬ ಅರಿವೂ ಇರಲಿಲ್ಲ. ಇಂತಹ ವಿಚಾರದ ಬಗ್ಗೆ ಮಾರ್ಗದರ್ಶನವನ್ನು ನಾವು ಲಿವ್‌ಸ್ಪೇಸ್‌ ಆಯ್ಕೆ ಮಾಡುವ ವೇಳೆ ಬಯಸಿದ್ದೆವು. ನನ್ನ ಪ್ರಕಾರ ವಿನ್ಯಾಸಕಾರರ ಕೌಶಲ್ಯವು ನಮ್ಮ ಪರಿಪೂರ್ಣ ಗೃಹದ ಪರಿಕಲ್ಪನೆಯನ್ನು ಅರಿತುಕೊಳ್ಳುವುದು ಹಾಗೂ ಅದನ್ನು ವಾಸಯೋಗ್ಯ ಮನೆಯಾಗಿ ಪರಿವರ್ತಿಸುವುದರಲ್ಲಿ ಇದೆ. ನಮ್ಮ ವಿಚಾರದಲ್ಲಿ ಅದು ಬಣ್ಣಗಳದ್ದಾಗಿತ್ತು. ದಕ್ಷತೆಯಿಂದ ತೊಡಗಿ ಅಲಂಕಾರದ ವರೆಗೆ ಎಲ್ಲವನ್ನೂ ಅದು ಒಳಗೊಂಡಿದೆ". ಅದು ಲಾಲಿತ್ಯಪೂರ್ಣವಾಗಿ ವಿನ್ಯಾಸಗೊಂಡ ಪೂಜಾ ಘಟಕವಾಗಲಿ, ಅಥವಾ ಕನಸಿನ modular kitchen design ಆಗಲಿ, "ನಾನು ನನ್ನ ಮನೆಯತ್ತ ನೋಡುವಾಗ ನನಗೆ ಆನಂದವಾಗುತ್ತದೆ" ಎಂದು ಖುಷಿ ವ್ಯಕ್ತಪಡಿಸುತ್ತಾರೆ ಪೂನಂ.

Livspace Reviews: ಮನೆಯ ಒಳಾಂಗಣ ಅಗತ್ಯಗಳಿಗೆ ಒಂದೇ ಮಳಿಗೆ

ಲಿವ್‌ಸ್ಪೇಸ್‌ನೊಂದಿಗೆ ನೀವು ಜೀವಿಸುವ ವಿಧಾನವನ್ನು ಪ್ರೀತಿಸಿ

ವಿನ್ಯಾಸ ಹಾಗೂ ಸೇವಾ ಕೊಡುಗೆಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. . Livspace Modular Interiors ಎನ್ನುವುದು ಮೊಡ್ಯುಲರ್‌ ಕಿಚನ್‌, ಕಪಾಟು, ಟಿವಿ ಯುನಿಟ್‌ ಮತ್ತಿತರ ವಿಷಯಗಳಿಗೆ ಮಿತವ್ಯಯಕಾರಿ ಆಯ್ಕೆಯಾಗಿದ್ದು ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ಶ್ರೇಣಿಯನ್ನು ಸಜ್ಜುಗೊಳಿಸಲಾಗಿದೆ. ಇನ್ನೊಂದೆಡೆ ಲಿವ್‌ಸ್ಪೇಸ್‌ ಪೂರ್ಣ ಗೃಹ ಒಳಾಂಗಣವು ತಮ್ಮ ಸ್ಥಳವನ್ನು ಪ್ರಾರಂಭದಿಂದ ಕೊನೆವರೆಗೆ ಪೂರ್ಣವಾಗಿ ಬದಲಾಯಿಸಲು ಬಯಸುವ ಮಾಲಕರಿಗಾಗಿ ಇದೆ. ಡ್ಯುರಾಬಿಲ್ಡ್‌ ಕ್ಯಾಬಿನೆಟ್‌, ಅಕ್ವಾಬ್ಲಾಕ್‌, ಆಂಟಿ ಬಬ್ಲ್‌ ತಂತ್ರಜ್ಞಾನದಂತಹ ಅತ್ಯಾಧುನಿಕ ಉನ್ನತ ತಂತ್ರಜ್ಞಾನಗಳ ಬಳಕೆಯು ವಸ್ತುಗಳ ಶ್ರೇಷ್ಠ ಗುಣಮಟ್ಟವನ್ನು ಬಳಕೆ ಮಾಡುವಲ್ಲಿ ಹಾಗೂ ಸುದೀರ್ಘ ಅವಧಿಗೆ ಅವು ಬಾಳಿಕೆ ಬರಿಸುವಲ್ಲಿ ನೆರವಾಗುತ್ತದೆ. ಅದಕ್ಕಾಗಿ ಭಾರತದ 30ಕ್ಕೂ ಅಧಿಕ ನಗರಗಳಲ್ಲಿ ಇರುವ ಲಿವ್‌ಸ್ಪೇಸ್‌ ಅನುಭವ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಯಾವ ರೀತಿ ನಿಮ್ಮ ವಿನ್ಯಾಸ ಯೋಜನೆಗಳು ನಿಜಜೀವನದಲ್ಲಿ ಕಾಣಿಸಬಹುದು ಎನ್ನುವುದನ್ನು ಮನಗಾಣಬಹುದು, ಹಾಗೂ ಉತ್ಪನ್ನಗಳನ್ನು ಅರಿತುಕೊಳ್ಳಬಹುದು.

ನಿಮ್ಮ ಬೆನ್ನಿಗಿದೆ ಲಿವ್‌ಸ್ಪೇಸ್‌

ಲಿವ್‌ಸ್ಪೇಸ್‌ನ ಮೊಡ್ಯುಲರ್‌ ಪರಿಹಾರಗಳು ನಿಮ್ಮ ಮನೆಯ ಸೌಂದರ್ಯವನ್ನು ಉತ್ತಮಗೊಳಿಸುವುದಷ್ಟೇ ಅಲ್ಲ, ಸ್ಥಳದ ಬಳಕೆ ಹಾಗೂ ಕಾರ್ಯವನ್ನೂ ಉತ್ತೇಜಿಸುತ್ತದೆ. ಲಿವ್‌ಸ್ಪೇಸ್‌ 10 ವರ್ಷಗಳ ವಾರಂಟಿ, ಪಾರದರ್ಶಕ ದರ ನಿಗದಿ ವಿಧಾನ, ವೈಯುಕ್ತಿಕಗೊಳಿಸಿರುವ ವಿನ್ಯಾಸದ ಆಯ್ಕೆಯಂತಹ ಸುರಕ್ಷಿತ ಸಹಕಾರಗಳನ್ನು ಲಿವ್‌ಸ್ಪೇಸ್‌ ಒದಗಿಸುತ್ತದೆ. ಲಿವ್‌ಸ್ಪೇಸ್‌ ದತ್ತಾಂಶ ವಿಜ್ಞಾನ, ಆಲ್ಗಾರಿದಂ, ಕೈಗಾರಿಕಾ ವಿನ್ಯಾಸದಂತಹ ಸಂಯೋಜನೆಯನ್ನು ಬಳಕೆ ಮಾಡುವ ಮೂಲಕ ಗ್ರಾಹಕರಿಗೆ ಎಲ್ಲ ವಿಧದ ಕೊಠಡಿಗಳಿಗೂ ವೈವಿಧ್ಯಮಯ ಒಳಾಂಗಣ ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ಎಲ್ಲ ರೀತಿಯ ವೆಚ್ಚಗಳಿಗೂ ಯೋಗ್ಯವಾಗುವಂತಹ ತನ್ನ ಗುರಿಯ ಮೂಲಕ ಲಿವ್‌ಸ್ಪೇಸ್‌ ಹೊಂದಾಣಿಕೆಯ ಇಎಂಐ ಪಾವತಿ ಆಯ್ಕೆ, ಬೆಲೆಗೆ ತಕ್ಕ ಆಯ್ಕೆ ಗ್ಯಾರಂಟಿಯಂತಹ ಹಲವಾರು ವಿಧದ ಬೆಲೆ ಪ್ರಯೋಜನಗಳನ್ನು ಒದಗಿಸುತ್ತದೆ, ತನ್ಮೂಲಕ ಯೋಜನೆಯುದ್ದಕ್ಕೂ ಪಾರದರ್ಶಕತೆಯನ್ನು ಕಾಪಾಡುತ್ತದೆ.

ಲಿವ್‌ಸ್ಪೇಸ್ ಸೊಗಸಾದ ಹಾಗೂ ಸುರಕ್ಷಿತ ಮನೆ ಒಳಾಂಗಣಗಳನ್ನು ಒದಗಿಸುವುದನ್ನೇ ತಮ್ಮ ಉನ್ನತ ಧ್ಯೇಯವನ್ನಾಗಿ ಮಾಡಿಕೊಂಡಿದೆ, ಮತ್ತು ಹೆಚ್ಚಿನ Livspace reviews ಆನ್‌ಲೈನ್‌ನಲ್ಲಿ ಹೇಳುವುದು ಇದನ್ನೇ ಆಗಿದೆ. ಬೆಂಗಳೂರಿನ ರಾಹುಲ್ ವರ್ಮಾ ಅವರು ಐಷಾರಾಮಿ, ವಾಸ್ತು-ಅನುಸರಣೆಯ ಒಳಾಂಗಣ ವಿನ್ಯಾಸಕ್ಕಾಗಿ ಹುಡುಕುತ್ತಿದ್ದರು. ಲಿವ್‌ಸ್ಪೇಸ್ ಒಳಾಂಗಣ ವಿನ್ಯಾಸಕಾರರಾದ ಅಮಿತ್ ಮಲ್ಹೋತ್ರಾ, ಶ್ವೇತಾ ಸಿಂಗಾರವೇಲು ಮತ್ತು ಕೌಶಲ್ ಮೋದಿ ಈ ಕಾರ್ಯವನ್ನು ಕೈಗೆತ್ತಿಕೊಂಡರು. ಅವರು ವಾಸ್ತು ಶಿಫಾರಸು ಮಾಡಲ್ಪಟ್ಟ ಬಣ್ಣಗಳು ಮತ್ತು ಮಾದರಿಗಳನ್ನು ವಿಭಿನ್ನ ತೆಳುಗೊಳಿಸಿದ ವರ್ಣಗಳ ಪದರ ಹಾಗೂ ಕೊನೆಯ ಲೇಪನದೊಂದಿಗೆ ಸಂಯೋಜಿಸಿ, ವಾಸ್ತು ಮಾನದಂಡಗಳಿಗೆ ಸಂಪೂರ್ಣ ಅನುಗುಣವಾಗಿ ಅತ್ಯಾಧುನಿಕ ನೋಟವನ್ನು ತಂದರು.

ತಮ್ಮ ಒಳಾಂಗಣದ ಬಗ್ಗೆ ರಾಹುಲ್‌ ಹೇಳಿದ್ದು ಹೀಗೆ: "ಲಿವ್‌ಸ್ಪೇಸ್‌ ಜೊತೆಗಿನ ನಮ್ಮ ಅನುಭವದಲ್ಲಿ ಎದ್ದು ಕಾಣುವಂಥ ಒಂದು ವಿಚಾರವೆಂದರೆ ಅವರು ಭರವಸೆ ನೀಡಿದ್ದ ಅವಧಿಯೊಳಗೇ ಕೆಲಸ ಪೂರ್ಣಗೊಳಿಸಿರುವುದು. ಕೆಲಸದ ಗುಣಮಟ್ಟವೂ ಉತ್ತಮವಾಗಿತ್ತು ಹಾಗೂ ವಿನ್ಯಾಸಕಾರರು ನಾವು ತುರ್ತಾಗಿ ಹೇಳುತ್ತಿದ್ದ ಸಣ್ಣ ಪುಟ್ಟ ನಿರ್ದಿಷ್ಟ ಬದಲಾವಣೆಗಳನ್ನೂ ಸೇರಿಸಿಕೊಂಡಿದ್ದಾರೆ"

Livspace Reviews: ಮನೆಯ ಒಳಾಂಗಣ ಅಗತ್ಯಗಳಿಗೆ ಒಂದೇ ಮಳಿಗೆ

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ಫಿನಿಶಿಂಗ್, ಟ್ರೆಂಡಿ ವಿನ್ಯಾಸಗಳು ಮತ್ತು ಗುಣಮಟ್ಟದ ಮಾಡ್ಯೂಲ್‌ಗಳನ್ನು ಒದಗಿಸುವಲ್ಲಿ ಕಂಪನಿಯು ದೃಢವಾಗಿ ನಂಬಿರುವಂತೆ, ಬಳಕೆದಾರರು ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಲಿವ್‌ಸ್ಪೇಸ್‌ನ ಪರಿಣಿತ ವೃತ್ತಿಪರರಿಂದ ಉಚಿತ ಕ್ವೋಟ್ ಪಡೆಯಲು ಫಾರ್ಮ್ ಭರ್ತಿ ಮಾಡಬಹುದು. ಪಾವತಿಸಬೇಕಾದ ಶೇಕಡಾವಾರು ಮೊತ್ತದೊಂದಿಗೆ ಒಪ್ಪಂದಕ್ಕೆ ಮುದ್ರೆ ಒತ್ತಿದ ಮೇಲೆ ಅಸಾಧಾರಣ ವಿನ್ಯಾಸ ರೂಪಿಸುವ ನಮ್ಮ ತಂಡವು ಕಾರ್ಯ ನಿರ್ವಹಿಸುವಾಗ ನೀವು ಆರಾಮವಾಗಿ ವಿಶ್ರಾಂತಿ ಪಡೆಯಿರಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT