ಡಿ.25ಕ್ಕೆ ಬಿಡುಗಡೆಗೆ ಸಜ್ಜಾದ ಅರ್ಜುನ್ ಜನ್ಯಾ ನಿರ್ದೇಶನದ ಸಿನಿಮಾ, ವಿಶ್ವದರ್ಜೆಯ ತಂತ್ರಜ್ಞಾನ ಬಳಕೆ, ಫ್ಯಾಂಟಸಿ ಕಥೆಗೆ ಅದ್ದೂರಿ ಸಿಜಿ ವರ್ಕ್ ಸಾಥ್!

ಬೆಂಗಳೂರು : ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಲ್ಟಿಸ್ಟಾರರ್ ಸಿನಿಮಾ 45 ತನ್ನ ಅದ್ದೂರಿ ಗ್ರಾಫಿಕ್ಸ್ ವರ್ಕ್ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. ಕೆನಡಾ ಮೂಲದ ಮಾರ್ಝ್ಸ್ ವಿಎಫ್ಎಕ್ಸ್ ತಂತ್ರಜ್ಞಾನ ತಂಡದ ಸ್ಪರ್ಶದೊಂದಿಗೆ ಸಿನಿಮಾ ಸಿದ್ಧವಾಗಿದ್ದು, ವಿಭಿನ್ನ ಸ್ವರೂಪದಲ್ಲಿ ಕಥೆ ಹೇಳುವ ಪ್ರಯತ್ನಕ್ಕಿಳಿದಿದ್ದಾರೆ ನಿರ್ದೇಶಕ ಜನ್ಯಾ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ವಿಶ್ವದರ್ಜೆಯ ಗ್ರಾಫಿಕ್ ಪ್ರಯೋಗ ಹೊಂದಿದ ಸಿನಿಮಾ ಸಿದ್ಧವಾಗಿ ಬಿಡುಗಡೆಯಾಗುತ್ತಿದೆ. ಬ್ಲ್ಯಾಕ್ ಪ್ಯಾಂಥರ್, ದಿ ಮ್ಯಾಟ್ರಿಕ್ಸ್ ಮತ್ತು ಆಂಟ್-ಮ್ಯಾನ್ನಂತಹ ಬ್ಲಾಕ್ಬಸ್ಟರ್ಗಳಿಗೆ ಚಿತ್ರಗಳಿಂದ ಹೆಸರುವಾಸಿಯಾದ ಜಸ್ಟಿನ್ನಂತಹ ತಜ್ಞರ ನೇತೃತ್ವದ MARZ ಸಹಯೋಗ ಚಿತ್ರಕ್ಕೆ ವಿಶ್ವದರ್ಜೆಯ ತಾಂತ್ರಿಕ ಸ್ಪರ್ಶ ನೀಡಿದೆ ಎಂದು ಚಿತ್ರತಂಡ ಹೆಮ್ಮೆಯಿಂದ ತಿಳಿಸಿದೆ. ಜತೆಗೆ, ಇತ್ತೀಚಿಗೆ ವಿಎಫ್ಎಕ್ಸ್ ತಂಡದ ಜಸ್ಟಿನ್ 45 ಸಿನಿಮಾದಲ್ಲಿ ವಿಎಫ್ಎಕ್ಸ್ ಕುರಿತು ಮಾತನಾಡಿ 'ಇಡೀ ಸಿನಿಮಾ ಅತ್ಯದ್ಭುತವಾಗಿ ಮೂಡಿಬಂದಿದೆ. ವಿಶೇಷವಾಗಿ ಕೆಲ ಸೀಕ್ವೆನ್ಸ್ಗಳು ಅತ್ಯಾಕರ್ಷಕವಾಗಿವೆ. ಭಾರತೀಯ ಸಿನಿಮಾಗಳಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ರಯೋಗ ನಡೆಯುತ್ತಿರುವುದು ಖುಷಿ ನೀಡಿದೆ' ಎಂದು ಸಂತಸ ವ್ಯಕ್ತಪಡಿಸಿದ್ದರು. ಕಳೆದ ಆಗಸ್ಟ್ನಲ್ಲೇ ಬಿಡುಗಡೆಯಾಗಬೇಕಿದ್ದ ಸಿನಿಮಾ ವಿಎಫ್ಎಕ್ಸ್ ಕೆಲಸಗಳಿಂದಾಗಿ ಡಿ.25ರ ಕ್ರಿಸ್ಮಸ್ಗೆ ತೆರೆಗೆ ಬರುತ್ತಿದೆ. ನಿರ್ಮಾಪಕರಾದ ಉಮಾ ರಮೇಶ್ ರೆಡ್ಡಿಯವರ ಸೂರಜ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಸಿದ್ಧವಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

ಸ್ಟಾರ್ಗಳ ಸಮಾಗಮ!

ಸ್ಯಾಂಡಲ್ವುಡ್ನ ಮ್ಯೂಸಿಕ್ ಮಾಂತ್ರಿಕ ಎಂದೇ ಕರೆಸಿಕೊಳ್ಳುವ ಅರ್ಜುನ್ ಜನ್ಯಾ ತಮ್ಮ ಮೊದಲ ನಿರ್ದೇಶನದ ಸಿನಿಮಾದಲ್ಲೇ ಮಲ್ಟಿಸ್ಟಾರರ್ ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಮೂವರಿಗೂ ಸಮನಾದ ಸ್ಕ್ರೀನ್ ಪ್ರೆಸೆನ್ಸ್ ಇರಲಿದೆ. ವಿಶೇಷ ಪಾತ್ರದಲ್ಲಿ ಸುಧಾರಣಿ ನಟಿಸಲಿದ್ದಾರೆ. ಜತೆಗೆ, ಖ್ಯಾತ ನಟರಾದ ರಾಜೇಂದ್ರನ್, ಜಿಶು ಸೆಂಗುಪ್ತ, ಕೌಸ್ತುಭ ಮಣಿ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಸಿನಿಮಾ ಕುರಿತಂತೆ ಮಾತನಾಡಿರುವ ಶಿವಣ್ಣ ಮತ್ತು ಉಪ್ಪಿ, 'ಸಿನಿಮಾ ನಿರೀಕ್ಷೆ ಮೀರಿ ಪ್ರೇಕ್ಷಕರನ್ನು ರಂಜಿಸಲಿದೆ. ಈ ಸಿನಿಮಾ ಬಳಿಕ ಅರ್ಜುನ್ ಜನ್ಯಾ ನಿರ್ದೇಶಕರಾಗಿ ಹೊಸ ಛಾಪು ಮೂಡಿಸಲಿದ್ದಾರೆ' ಎಂದು ನಿರ್ದೇಶನದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

https://drive.google.com/file/d/1J73uFAkcUpJzQRjVF3PuzhWy_ZhPJ2gR/view?usp=drive_link

ಕಥೆಯೆಡೆಗೆ ಕುತೂಹಲ!

ಸಿನಿಮಾದ ಮೊದಲ ಝಲಕ್ ಬಿಡುಗಡೆಯಾದ ದಿನದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ 45ರ ಕಥೆ ಏನೆಂದು ಪ್ರೇಕ್ಷಕರಲ್ಲಿ ನಿರೀಕ್ಷೆಗಳು ಸೃಷ್ಟಿಯಾಗಿವೆ. ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಕಾಂಬಿನೇಶನ್, ಅದ್ದೂರಿ ವಿಎಫ್ಎಕ್ಸ್ ಸೇರಿ ವಿಭಿನ್ನ ಹಾಡಿನ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ತನ್ನ ಟ್ರೇಲರ್ ಮೂಲಕ ಹೊಸ ಕುತೂಹಲ ತೆರೆದಿಟ್ಟಿದೆ. ಟ್ರೇಲರ್ನಲ್ಲಿನ ಶಿವಣ್ಣರ ಲೇಡಿ ಗೆಟಪ್ ಸಹ ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾದ ಈ ಪ್ರಯೋಗಗಳು ಯಾವ ಕಾರಣಕ್ಕೆ ಇರಲಿವೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಒಟ್ಟಾರೆ 45ರ ಕಥೆ ಏನು ಎನ್ನುವ ನಿರೀಕ್ಷೆಯಲ್ಲಿ ಪ್ರೇಕ್ಷಕರು ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸಿನಿಮಾ ಕುರಿತು ಮಾತನಾಡಿರುವ ನಿರ್ದೇಶಕ ಅರ್ಜುನ್ ಜನ್ಯಾ, 'ವೈಯಕ್ತಿಕವಾಗಿ ಚಿತ್ರರಂಗದಲ್ಲಿ ಹೆಚ್ಚು ಇಷ್ಟಪಡುವ ಸ್ಟಾರ್ಸ್ಗೆ ನಿರ್ದೇಶನ ಮಾಡಿದ್ದು ಸಾಕಷ್ಟು ಖುಷಿ ನೀಡಿದೆ. ತುಂಬಾ ಇಷ್ಟ ಪಟ್ಟು ಈ ಸಿನಿಮಾ ಮಾಡಿದ್ದೇವೆ. '45' ಸಿನಿಮಾ ಕನ್ನಡದಲ್ಲಿ ವಿಭಿನ್ನ ಸ್ವರೂಪದಲ್ಲಿ ನಿರ್ಮಿಸಲಾಗಿರುವ ಫ್ಯಾಂಟಸಿ ಸಿನಿಮಾ. ಶಿವಣ್ಣ, ಉಪ್ಪಿ, ರಾಜ್ಬಿಶೆಟ್ಟಿಯವರ ನಟನೆಯ ಮೂಲಕ ಹೊಸದೊಂದು ಕಥೆ ಹೇಳುವ ಪ್ರಯತ್ನ ಮಾಡಿದ್ದೇನೆ. ಕನ್ನಡದಲ್ಲಿ ವಿಭಿನ್ನ ಪ್ರಯೋಗವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.