ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿವೆ ಅತ್ಯಾಧುನಿಕ ವೈಶಿಷ್ಟ್ಯ, ಖಾಸಗಿತನದ ಸುರಕ್ಷತೆ, ಆಕರ್ಷಕ ಬಣ್ಣಗಳ ಆಯ್ಕೆ

Last Updated 18 ಅಕ್ಟೋಬರ್ 2020, 12:23 IST
ಅಕ್ಷರ ಗಾತ್ರ

ಇನ್ನಾವುದೇ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿರದಂತಹ ಗುಣಲಕ್ಷಣಗಳನ್ನು ಈ ಎರಡೂ ಫೋನ್‌ಗಳು ಹೊಂದಿವೆ. ದೀರ್ಘಾವಧಿ ಚಾರ್ಜ್ ಉಳಿಯುವ ಬ್ಯಾಟರಿ, ಉತ್ಕೃಷ್ಟ ಡಿಸ್‌ಪ್ಲೇ, ಅತ್ಯುತ್ತಮ ಕ್ಯಾಮೆರಾಗಳು ಹಾಗೂ ಉನ್ನತ ಮಟ್ಟದ ಖಾಸಗಿತನ ಸುರಕ್ಷತೆಯ ಸೌಲಭ್ಯಗಳಿವೆ.

ಮಿಲೇನಿಯಲ್ಸ್‌ ಆದ ನಮಗೆ ಎಲ್ಲ ಸಮಯದಲ್ಲಿಯೂ ಸೆಲ್ಫಿ ತೆಗೆದುಕೊಳ್ಳುವುದು ಅಭ್ಯಾಸವಾಗಿ ಹೋಗಿದೆ. ಅದು ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಆಗಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲು  ಅಥವಾ ಸುಮ್ಮನೆ ನಮ್ಮಲ್ಲಿಯೇ ಉಳಿಸಿಕೊಳ್ಳಲು ಸಾಕಷ್ಟು ಸೆಲ್ಫಿಗಳಂತೂ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣದಿಂದಾದರೂ ಸರಿಯೇ ನಿಮ್ಮ ಖಾಸಗಿ ಚಿತ್ರಗಳನ್ನು ಬೇರೆಯವರು ನೋಡುತ್ತಿದ್ದರೆ ನಿಮಗೆ ಕಸಿವಿಸಿಯಾಗುತ್ತದೆ, ಅಲ್ಲವೇ? ನಮ್ಮ ಫೋನ್‌ಗಳನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಸ್ಕ್ರೀನ್‌ ಪಾಸ್‌ವರ್ಡ್‌ ಅಂತೂ  ಬಳಸುತ್ತೇವೆ, ಆದರೆ ಯಾರಾದರೂ ನಿಮ್ಮ ಫೋನ್‌ ಪಾಸ್‌ವರ್ಡ್‌ ಕೇಳಿದರೆ? ನೀವು ಹೇಗೆ ತಾನೇ ಅದನ್ನು ನಿರಾಕರಿಸುವಿರಿ?

ಅಥವಾ ನೀವು ಕೆಲವು ಸ್ಕ್ರೀನ್‌ಶಾಟ್‌ಗಳನ್ನು ತೆಗೆದಿಟ್ಟಿದ್ದು ಅವುಗಳನ್ನು ನಿಮ್ಮ ಆಪ್ತ ಸ್ನೇಹಿತರಿಗೆ ಮಾತ್ರವೇ ಕಳುಹಿಸಿರುತ್ತೀರ, ಆದರೆ ಅದೇ ಫೋನ್‌ನಲ್ಲಿ ನಿಮ್ಮ ಅಮ್ಮ ಯಾರಿಗೋ ಕರೆ ಮಾಡಬೇಕಾಗಿ ಕೇಳುತ್ತಾರೆ, ಅವುಗಳನ್ನು ಅಮ್ಮ ಏನಾದರೂ ನೋಡಿಬಿಟ್ಟರೆ ಎಂದು ಆತಂಕಕ್ಕೆ ಒಳಗಾಗುತ್ತೀರಾ?

ಆ ಕಾರಣದಿಂದಾಗಿಯೇ ನಿಮಗೆ ಆಲ್ಟ್‌ ಝಡ್‌ ಲೈಫ್‌ ಬೇಕಿರುವುದು. ಅಲ್ಲಿ ಯಾವುದೇ ಸಣ್ಣ ಚಿಂತೆಯೂ ಇಲ್ಲದಂತೆ ನಿಮ್ಮ ಸ್ವತಂತ್ರವನ್ನು ಪೂರ್ಣವಾಗಿ ಸವಿಯಬಹುದು! ಆಲ್ಟ್‌ ಝಡ್‌ ಲೈಫ್‌ನಲ್ಲಿ ನಿಮ್ಮ ಖಾಸಗಿ ಮಾಹಿತಿ ಖಾಸಗಿಯಾಗಿಯೇ ಉಳಿಯುತ್ತದೆ ಹಾಗೂ ನಿಮ್ಮ ಹೊರತಾಗಿ ಬೇರೆ ಯಾರಿಗೂ ಅದನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಸ್ಮಾರ್ಟ್‌ಫೋನ್‌ಗಳ ಮೂಲಕ ಆಲ್ಟ್‌ ಝಡ್‌ ಲೈಫ್‌ ಅನುಭವಿಸಬಹುದಾಗಿದೆ. ಸ್ಯಾಮ್‌ಸಂಗ್‌ ಮುಂಚಿನಿಂದಲೂ ಅದರ ಪ್ರೀಮಿಯಂ ವಿನ್ಯಾಸ ಮತ್ತು ಅತ್ಯಾಧುನಿಕ ಸೌಲಭ್ಯಗಳಿಂದ ಗುರುತಿಸಿಕೊಂಡಿದೆ, ಈಗ ಮತ್ತೊಮ್ಮೆ ಈ ಎರಡು ಸ್ಮಾರ್ಟ್‌ಫೋನ್‌ಗಳ ಮೂಲಕ ಮತ್ತಷ್ಟು ಮುಂದೆ ಸಾಗಿದೆ.  

ಆಲ್ಟ್‌ ಝಡ್‌ ಲೈಫ್‌ ಮಾರ್ಗ

ನಮ್ಮ ಫೋನ್‌ಗಳನ್ನು ಬೇರೆಯವರಿಗೆ ನೀಡದಿರಲು ಹಲವು ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ಸನ್ನಿವೇಶಗಳಂತೂ ನಮಗೆಲ್ಲರಿಗೂ ಎದುರಾಗಿರುತ್ತದೆ ಅಲ್ಲವೇ? ಇನ್ನಷ್ಟು ಸಂದರ್ಭಗಳಲ್ಲಂತೂ ನಿಮ್ಮ ಫೋನ್‌ನ್ನು ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಹಂಚಿಕೊಳ್ಳುವ ತೀವ್ರ ಒತ್ತಡಕ್ಕೆ ಸಿಲುಕಿರುತ್ತೀರ ಹಾಗೂ ನಿಮ್ಮ ಖಾಸಗಿ ಫೋಟೊಗಳನ್ನು ಯಾರಾದರೂ ನೋಡಿಬಿಟ್ಟರೆ ಎನ್ನುವ ಆತಂಕ ನಿರಂತರವಾಗಿ ಕಾಡಿರುತ್ತದೆ.

ಅದರ ಶಮನಕ್ಕಾಗಿಯೇ ಸ್ಯಾಮ್‌ಸಂಗ್‌ ಉದ್ಯಮದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಖಾಸಗಿತನ ಸುರಕ್ಷತೆಯ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಸ್ಯಾಮ್‌ಸಂಗ್‌ನ 'ಮೇಕ್‌ ಇನ್‌ ಇಂಡಿಯಾ' ಕಾರ್ಯಕ್ರಮದ ಭಾಗವಾಗಿ ಈ ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗಿದ್ದು, ಇದರಿಂದಾಗಿ ಬೇರೆಯವರೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್‌ ಹಂಚಿಕೊಳ್ಳುವಾಗ ನಿರಾತಂಕವಾಗಿ ಇರಬಹುದು.

ಫೋನ್‌ನ ಗ್ಯಾಲರಿ, ವಾಟ್ಸ್‌ಆ್ಯಪ್‌, ಬ್ರೌಸರ್‌ ಹಾಗೂ ಇತರೆ ಆ್ಯಪ್‌ಗಳ ಬಳಕೆಯಲ್ಲಿ ಖಾಸಗಿ ಸ್ಕ್ರೀನ್‌ನಿಂದ ಎಲ್ಲರಿಗೂ ಕಾಣಿಸಬಹುದಾದ ಪುಟಕ್ಕೆ ಕ್ಷಣಾರ್ಧದಲ್ಲಿ ಬದಲಿಸಿಕೊಳ್ಳಲು ಕ್ವಿಕ್‌ ಸ್ವಿಚ್‌ ಸಹಕಾರಿಯಾಗಿದ್ದು, ನೀವು ಫೋನ್‌ನ ಪವರ್‌ ಬಟನ್‌ ಎರಡು ಬಾರಿ ಒತ್ತಿದರೆ ಸಾಕು.
ನೀವು ಚಿತ್ರವೊಂದನ್ನು ನಿಮ್ಮ ಸ್ನೇಹಿತನಿಗೆ ತೋರಿಸುತ್ತಿರುವ ಸನ್ನಿವೇಶವನ್ನು ಊಹಿಸಿಕೊಳ್ಳಿ, ಅದೇ ಸಮಯದಲ್ಲಿ ನಿಮ್ಮ ಬಾಸ್‌ ನಿಮ್ಮತ್ತಲೇ ನಡೆದು ಬರುತ್ತಿದ್ದಾರೆ. ಫೋನ್‌ನಲ್ಲಿನ ಆ ಚಿತ್ರವನ್ನು ನಿಮ್ಮ ಬಾಸ್‌ ನೋಡುವುದು ನಿಮಗೆ ಬೇಕಿರುವುದಿಲ್ಲ. ಹಾಗಾದರೆ, ನೀವೇನು ಮಾಡುವಿರಿ?

ನಟಿ ರಾಧಿಕಾ ಮದನ್‌ ಅವರಿಂದ ಸಲಹೆ ಪಡೆಯಿರಿ, ಅವರೂ ಸಹ ಇಂಥದ್ದೇ ಸನ್ನಿವೇಶದಲ್ಲಿ ಸಿಲುಕಿದ್ದರು. ಅಲ್ಲಿ ಮುಂದೆ ಏನಾಯಿತು ಊಹಿಸುವಿರಾ? ಆಕೆ ಕ್ವಿಕ್‌ ಸ್ವಿಚ್‌ ಸೌಲಭ್ಯವನ್ನು ಬಳಸಿಕೊಂಡರು ಹಾಗೂ ಅವರ ಬಾಸ್‌ಗೆ ಅಲ್ಲಿನ ಏನಾಯಿತೆಂದು ತಿಳಿಯಲೇ ಇಲ್ಲ!

ಗ್ಯಾಲಕ್ಸಿ ಎ51 ಅಥವಾ ಎ71 ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್‌ಗೆ ನೀವು ಹೇಗೆ ಚಾಲನೆ ನೀಡಬಹುದೆಂದು ಈ ವಿಡಿಯೊ ನೋಡಿ ತಿಳಿಯಿರಿ.

ಫೋನ್‌ನಲ್ಲೇ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ 'ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌' ಮೂಲಕ ಖಾಸಗಿ ಗ್ಯಾಲರಿಯಲ್ಲಿ ಸುರಕ್ಷಿತವಾಗಿ ವರ್ಗಾಯಿಸಬೇಕಾದ ಫೋಟೊಗಳ ಸಲಹೆ  ನೀಡುತ್ತದೆ. ಮುಖಗಳು ಅಥವಾ ಚಿತ್ರಗಳನ್ನು ಆಯ್ಕೆ ಮಾಡಿ ನಿಗದಿ ಪಡಿಸುವ ಮೂಲಕ ಗ್ಯಾಲರಿಗೆ ಬರುವ ಚಿತ್ರಗಳಲ್ಲಿ ಖಾಸಗಿ ಫೋಲ್ಡರ್‌ಗೆ ವರ್ಗಾಯಿಸಬೇಕಾದ ಚಿತ್ರಗಳು ತಾನಾಗಿಯೇ ಆಯ್ಕೆಯಾಗುವಂತೆ ಮಾಡಬಹುದಾಗಿದೆ. ಬೇರೆ ಯಾರಿಗೂ ತೋರಿಸಲು ಇಷ್ಟವಿಲ್ಲದ ಚಿತ್ರಗಳನ್ನು ಖಾಸಗಿಯಾಗಿ ಉಳಿಸಿಕೊ‌ಳ್ಳಲು ಎಐ ನೆರವು ನೀಡುತ್ತದೆ.

ಈ ಸೌಲಭ್ಯಕ್ಕೆ ಚಾಲನೆ ನೀಡುವ ಕುರಿತು ತಿಳಿಯಲು ಈ ವಿಡಿಯೊ ನೋಡಿ.

ಅತ್ಯಾಧುನಿಕ ಕ್ಯಾಮೆರಾ ಫೀಚರ್‌ಗಳು

ಫೋನ್‌ ಮೂಲಕ ಫೋಟೊ ಕ್ಲಿಕ್ಕಿಸುವುದರಲ್ಲಿ ಸ್ಯಾಮ್‌ಸಂಗ್‌ ಹೊಚ್ಚ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿರುತ್ತದೆ. ಈ ಎರಡೂ ಮಾದರಿಯ ಫೋನ್‌ಗಳಲ್ಲಿ ಕ್ವಾಡ್‌ ಕ್ಯಾಮೆರಾ (ನಾಲ್ಕು ಕ್ಯಾಮೆರಾ) ಸೆಟ್‌ಅಪ್‌ ಇದೆ ಹಾಗೂ ಅತ್ಯಾಧುನಿಕ ಕ್ಯಾಮೆರಾ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಈ ಫೋನ್‌ಗಳಲ್ಲಿನ 'ಸಿಂಗಲ್‌ ಟೇಕ್‌' ಸೌಲಭ್ಯವು ಒಂದೇ ಸಲಕ್ಕೆ 7 ಫೋಟೊಗಳು ಹಾಗೂ 3 ವಿಡಿಯೊಗಳನ್ನು ಸೆರೆಹಿಡಿಯಲು ಅನುವಾಗುತ್ತದೆ. ಸ್ಟೈಲೈಜ್ಡ್ ಇಮೇಜ್‌ಗಳು, ಶಾರ್ಟ್‌ ವಿಡಿಯೊ, ಜಿಫ್‌ ಹಾಗೂ ಇನ್ನಷ್ಟು ಬಗೆಯ ಫೈಲ್‌ಗಳನ್ನು ಸಿಂಗಲ್‌ ಟೇಕ್‌ನಲ್ಲಿ ಪಡೆಯಬಹುದು. ವಿಶೇಷವೆಂದರೆ, ಆ ಎಲ್ಲ ಫೈಲ್‌ಗಳೂ ನಿಮಗೆ ಒಂದೇ ಆಲ್ಬಮ್‌ನಲ್ಲಿ ಲಭ್ಯವಾಗುತ್ತದೆ. ನೀವು ಫೋನ್‌ ಕ್ಯಾಮೆರಾ ತೆರೆದು ಸಿಂಗಲ್‌ ಟೇಕ್‌ ಆಯ್ಕೆ ಮಾಡಿ ಕ್ಲಿಕ್‌ ಮಾಡಿದರೆ ಸಾಕು, ಉಳಿದ ಎಲ್ಲವನ್ನೂ ಫೋನ್ ಮಾಡಿಕೊಳ್ಳುತ್ತದೆ.

ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಹೈಪರ್‌ಲ್ಯಾಪ್ಸ್‌ ವಿಡಿಯೊಗಳನ್ನು ತೆಗೆಯಲು 'ನೈಟ್‌ ಹೈಪರ್‌ಲ್ಯಾಪ್ಸ್‌' ಸೌಲಭ್ಯ ಸಹಕಾರಿಯಾಗಿದೆ. ನಿಮ್ಮ ಬಳಿ ಈ ಫೋನ್‌ ಇದ್ದರೆ, ಯಾವುದೇ ಸಂದರ್ಭವೂ ನಿಮ್ಮನ್ನು ಸಂಭ್ರಮಿಸುವುದರಿಂದ ತಡೆಯಲು ಆಗುವುದಿಲ್ಲ.

ಅಷ್ಟೇ ಅಲ್ಲದೆ, ಕ್ವಿಕ್‌ ವಿಡಿಯೊ ಸೌಲಭ್ಯವನ್ನೂ ಕ್ಯಾಮೆರಾದಲ್ಲಿ ಅಳವಡಿಸಲಾಗಿದೆ. ಯಾವುದೇ ಕ್ಷಣದಲ್ಲಿ ತಡ ಮಾಡದೆಯೇ ಕ್ಷಣಾರ್ಧದಲ್ಲಿ ಕ್ಯಾಮೆರಾ ತೆರೆದು ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳಲು ಕ್ವಿಕ್‌ ವಿಡಿಯೊ ಫೀಚರ್‌ ಉಪಯುಕ್ತವಾಗಿದೆ. ಕ್ಯಾಮೆರಾ ಬಟನ್ ಒತ್ತಿ ಹಿಡಿದರೆ ಸಾಕು, ವಿಶೇಷ ಸಂದರ್ಭವನ್ನು ಕ್ವಿಕ್‌ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿರುತ್ತದೆ.

ಸೆಲ್ಫಿ ಕ್ಯಾಮೆರಾದಲ್ಲಿ ಒಬ್ಬರಿಗಿಂತ ಹೆಚ್ಚು ಜನರನ್ನು ಸೆರೆ ಹಿಡಿಯಲು ಪ್ರಯತ್ನ ಮಾಡುತ್ತಿರುವಿರಾ? ಸಮಸ್ಯೆಯೇ ಇಲ್ಲ! ಸ್ಮಾರ್ಟ್‌ ಸೆಲ್ಫಿ ಆ್ಯಂಗಲ್‌ ಸೌಲಭ್ಯವು ತಾನಾಗಿಯೇ ವೈಡ್‌–ಆ್ಯಂಗಲ್‌ ಮೋಡ್‌ಗೆ ಬದಲಿಸಿಕೊಳ್ಳುತ್ತದೆ ಹಾಗೂ ನೀವು ಪ್ರತಿ ಬಾರಿಯೂ ಅತ್ಯುತ್ತಮ ಸೆಲ್ಫಿ ತೆಗೆದುಕೊಳ್ಳಬಹುದು.

ನಿಮ್ಮ ಫೋಟೊಗಳ ಮೆರುಗು ಹೆಚ್ಚಿಸಲು 'ಕಸ್ಟಮ್‌ ಫಿಲ್ಟರ್‌' ಸಹಾಯ ಮಾಡುತ್ತದೆ. ಫೋಟೊಗಳಲ್ಲಿ ಹಿನ್ನೆಲೆಯನ್ನು ಬ್ಲರ್‌ ಎಫೆಕ್ಟ್‌ ಮೂಲಕ ಬದಲಿಸುವುದು ಅಥವಾ ಬಣ್ಣ ಬದಲಿಸುವುದೂ ಸಾಧ್ಯವಿದೆ.

ಗ್ಯಾಲಕ್ಸಿ ಎ51 ಫೋನ್‌ನಲ್ಲಿ ವಿಡಿಯೊ ರೆಕಾರ್ಡ್‌ ಮಾಡುತ್ತಲೇ ಕ್ಯಾಮೆರಾ ಸ್ವಿಚ್‌(*) ಮಾಡುವ ಸೌಲಭ್ಯವಿದೆ. ಹಿಂದಿನ ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡುವಾಗ ಮುಂದಿನ ಕ್ಯಾಮೆರಾಗೆ ಸ್ವಿಚ್ ಮಾಡಿಕೊಂಡು ನೀವು ಮಾತನಾಡುವುದನ್ನೂ ರೆಕಾರ್ಡ್ ಮಾಡಿಕೊಳ್ಳಬಹುದು,  ಮತ್ತೆ ಹಿಂದಿನ ಕ್ಯಾಮೆರಾಗೆ ಬದಲಿಸಬಹುದು. ಇದು ಉಪಯುಕ್ತವಲ್ಲವೇ?

ಇನ್ನೂ ಈ ಫೋನ್‌ಗಳಲ್ಲಿ ಎಐ ಗ್ಯಾಲರಿ ಜೂಮ್‌ ಸೌಲಭ್ಯವೂ ಇದೆ. ಇದರಿಂದ ಕಡಿಮೆ ರೆಸಲ್ಯೂಷನ್‌ ಇರುವ ಚಿತ್ರಗಳ ಗುಣಮಟ್ಟ ಹೆಚ್ಚಿಸಬಹುದಾಗಿದೆ.

ಕ್ಯಾಮೆರಾ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ, ಗ್ಯಾಲಕ್ಸಿ ಎ51 ಫೋನ್‌ನಲ್ಲಿ 48 ಮೆಗಾಪಿಕ್ಸೆಲ್‌ ಪ್ರೈಮರಿ ಸೆನ್ಸರ್‌, 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಲೆನ್ಸ್‌, 5 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹಾಗೂ 5 ಮೆಗಾಪಿಕ್ಸೆಲ್‌ ಮ್ಯಾಕ್ರೊ ಲೆನ್ಸ್‌ ಅಳವಡಿಸಲಾಗಿದೆ. ಸೆಲ್ಫಿಗಾಗಿ  32 ಮೆಗಾಪಿಕ್ಸೆಲ್‌ ಕ್ಯಾಮೆರಾ ಇದೆ.

ಗ್ಯಾಲಕ್ಸಿ ಎ71 ಫೋನ್‌ನಲ್ಲಿ 64 ಮೆಗಾಪಿಕ್ಸೆಲ್‌ ಲೆನ್ಸ್‌, 12 ಮೆಗಾಪಿಕ್ಸೆಲ್‌ ಅಲ್ಟ್ರಾ–ವೈಡ್‌ ಲೆನ್ಸ್‌ ಜೊತೆಗೆ 123 ಡಿಗ್ರಿ ವೀಕ್ಷಣೆ ಕೋನ, 5 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹಾಗೂ 5 ಮೆಗಾಪಿಕ್ಸೆಲ್‌ ಮ್ಯಾಕ್ರೊ ಕ್ಯಾಮೆರಾ ಇದೆ. ಮುಂದೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

(* ಗ್ಯಾಲಕ್ಸಿ ಎ51ರಲ್ಲಿ ಮಾತ್ರ ಲಭ್ಯ)

ಹೆಚ್ಚುವರಿ ಸುರಕ್ಷತೆಗಾಗಿ ಸ್ಯಾಮ್‌ಸಂಗ್‌ ನಾಕ್ಸ್‌

ಖಾಸಗಿತನವು ಮುಖ್ಯವಾಗಿರುವುದರಿಂದ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಹಾಗಾಗಿಯೇ ಸ್ಯಾಮ್‌ಸಂಗ್‌ ಹಲವು ಹಂತಗಳ ಡಿಫೆನ್ಸ್‌ ಗ್ರೇಡ್‌ ಸುರಕ್ಷತಾ ವ್ಯವಸ್ಥೆ 'ನಾಕ್ಸ್‌' ಮೂಲಕ ಹೆಚ್ಚುವರಿ ಸುರಕ್ಷತೆ ಒದಗಿಸುತ್ತಿದೆ. ಸ್ಮಾರ್ಟ್‌ಫೋನ್‌ನ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಎರಡರಲ್ಲಿಯೂ ನಾಕ್ಸ್‌ ವ್ಯವಸ್ಥೆ ಅಳವಡಿಸಲಾಗಿದೆ. ನಾಕ್ಸ್‌ ಮಾಹಿತಿಯನ್ನು ಎನ್‌ಕ್ರಿಪ್ಟ್‌ ಮಾಡುತ್ತದೆ ಮತ್ತು ಸುರಕ್ಷಿತವಾಗಿಡುತ್ತದೆ. ಅತ್ಯಂತ ಮಹತ್ವದ ದಾಖಲೆಗಳು, ಸ್ಯಾಮ್‌ಸಂಗ್‌ ಪೇ ವಹಿವಾಟುಗಳು, ಪಾಸ್‌ವರ್ಡ್‌ಗಳು, ಫೋಟೊ ಹಾಗೂ ವಿಡಿಯೊಗಳು ಮತ್ತು ಫೋನ್‌ ವ್ಯವಸ್ಥೆಯ ಸ್ಥಿತಿಯನ್ನು ಕಾಪಾಡುತ್ತದೆ.

ಇನ್ನೂ ಏನೆಲ್ಲ ವೈಶಿಷ್ಟ್ಯಗಳಿವೆ?

ಪಂಚ್‌ ಹೋಲ್‌ ಕ್ಯಾಮೆರಾ ಇರುವ ಗ್ಯಾಲಕ್ಸಿ ಎ71, 7.7  ಮಿಮೀನಷ್ಟು ತೆಳುವಾಗಿದೆ. ಈ ವರ್ಗದ ಫೋನ್‌ಗಳಲ್ಲಿಯೇ ಗ್ಯಾಲಕ್ಸಿ ಎ71 ಅತ್ಯಂತ ತೆಳುವಾದ ಫೋನ್‌ ಆಗಿದೆ. ಎರಡೂ ಫೋನ್‌ಗಳು ಅತ್ಯಾಕರ್ಷವಾಗಿದ್ದು, ಪ್ರಿಸಮ್‌ ಕ್ರಷ್‌ ವೈಟ್‌, ಪ್ರಿಸಮ್‌ ಕ್ರಷ್ ಬ್ಲ್ಯಾಕ್‌, ಪ್ರಿಸಮ್‌ ಕ್ರಷ್‌ ಬ್ಲೂ ಹಾಗೂ ಹೇಜ್ ಕ್ರಷ್‌ ಸಿಲ್ವರ್‌ ಬಣ್ಣಗಳಲ್ಲಿ ಸಿಗಲಿವೆ.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳನ್ನು ರಿಟೇಲ್‌ ಮಳಿಗೆಗಳಲ್ಲಿ, ಸ್ಯಾಮ್‌ಸಂಗ್‌ ಡಾಟ್‌ ಕಾಮ್‌ ಹಾಗೂ ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್ಸ್‌ ಮೂಲಕ ಖರೀದಿಸಬಹುದಾಗಿದೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT