ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಖಾಸಗಿತನದ ಸುರಕ್ಷತೆಯ ಎಲ್ಲ ಸಂಕಟಗಳಿಗೆ ಸ್ಯಾಮ್‌ಸಂಗ್‌ನ 'ಕ್ವಿಕ್‌ ಸ್ವಿಚ್‌' ಮತ್ತು 'ಕಂಟೆಂಟ್‌ ಸಜೆಷನ್ಸ್‌' ಪರಿಹಾರ!

Last Updated 30 ಸೆಪ್ಟೆಂಬರ್ 2020, 18:05 IST
ಅಕ್ಷರ ಗಾತ್ರ

ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್‌ ಗಮನದಲ್ಲಿರಿಸಿಕೊಂಡು ಈ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಇವುಗಳು ಬಳಕೆದಾರರಿಗೆ ಖಾಸಗಿತನದ ಸಂಪೂರ್ಣ ಸುರಕ್ಷತೆ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಇದನ್ನು ಊಹಿಸಿಕೊಳ್ಳಿ: ನೀವು ನಿಮ್ಮ ಕಚೇರಿಯಲ್ಲಿದ್ದೀರ, ಸಹೋದ್ಯೋಗಿಗಳು ನಿಮ್ಮ ಸುತ್ತಲೂ ನಿಂತು ಎಲ್ಲರೂ ನಿಮ್ಮ ಫೋನ್ ನೋಡುತ್ತಿದ್ದಾರೆ. ಬಾಸ್‌ ಬಗ್ಗೆ ನೀವು ಸೃಷ್ಟಿಸಿರುವ ಮೀಮ್‌ ನೋಡಿ ಅವರಿಗೆಲ್ಲ ನಗು ತಡೆಯಲು ಸಾಧ್ಯವೇ ಆಗುತ್ತಿಲ್ಲ. ನಿಮಗೂ ಸಹ ಒತ್ತರಿಸಿ ಬರುತ್ತಿರುವ ನಗು ತಡೆಯೋಕೆ ಆಗುತ್ತಿಲ್ಲ.

ದಿಢೀರನೆ ನಿಮ್ಮ ಬಾಸ್‌ ಕಾಣಿಸಿಕೊಳ್ಳುತ್ತಾರೆ ಹಾಗೂ ನೀವು ತಟಸ್ಥರಾಗಿ ನಿಂತಿರುತ್ತೀರಿ. ಥಟ್ಟನೆ ನಿಮಗೆ ತಲೆಯೊಳಗೆ ನುಸುಳುವ ಯೋಚನೆ: ಅವರು ನನ್ನ ಫೋನ್‌ ಕೊಡುವಂತೆ ಕೇಳಿದರೆ ಏನು ಮಾಡುವುದು? ಮುಂದೇನು?

ಇಂಥ ಸಂದರ್ಭಗಳಲ್ಲಿ ತಕ್ಷಣದಲ್ಲೇ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಮ್‌ ಇರುವ ಸ್ಕ್ರೀನ್‌ನಿಂದ ಅದು ಕಾಣಿಸದಿರುವ ಸ್ಕ್ರೀನ್‌ಗೆ ಬದಲಾಯಿಸುವಂತಹ ಸೌಲಭ್ಯ ಇದ್ದರೆ ನಿಮಗೆ ಇಷ್ಟವಾಗುದಿಲ್ಲವೇ? ಖಂಡಿತವಾಗಿಯೂ ಹೇಳುತ್ತೇವೆ ನಿಮಗೆ ಇಷ್ಟವಾಗುತ್ತದೆ!

ಕ್ವಿಕ್‌ ಸ್ವಿಚ್‌: ಎರಡು ಬಾರಿ ಒತ್ತಿದ್ದರೆ ಸಾಕು ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತ

ಸ್ಯಾಮ್‌ಸಂಗ್‌ ಅತ್ಯಾಧುನಿಕ ಆವಿಷ್ಕಾರವಾದ ಕ್ವಿಕ್‌ ಸ್ವಿಚ್‌ ಪರಿಚಯಿಸಿದೆ. ಇದರಿಂದಾಗಿ ಕ್ಷಣಾರ್ಧದಲ್ಲೇ ಖಾಸಗಿ ಫೋಲ್ಡರ್‌ನಿಂದ ಎಲ್ಲರಿಗೂ ಕಾಣಿಸಬಹುದಾದ ಗ್ಯಾಲರಿಗೆ ಬದಲಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ನೀವು ಪವರ್‌ ಕೀ ಎರಡು ಬಾರಿ ಒತ್ತಿದರೆ ಸಾಕು. ಹೌದು, ಅಷ್ಟೇ ಸುಲಭ ಇದು!

ನಟಿ ರಾಧಿಕಾ ಮದನ್‌ ಈ ಸೌಲಭ್ಯವನ್ನು ಅನುಕೂಲಕಾರಿಯಾಗಿ ಹೇಗೆ ಬಳಸಿಕೊಂಡರು ಎಂಬುದು ಇಲ್ಲಿದೆ, ನೋಡಿ.

ಗ್ಯಾಲಕ್ಸಿ ಎ51 ಮತ್ತು ಎ71 ಮಾದರಿ ಫೋನ್‌ಗಳಲ್ಲಿ ಕ್ವಿಕ್‌ ಸ್ವಿಚ್‌ ಲಭ್ಯವಿದೆ. ಈ ಸೌಲಭ್ಯ ವಾಟ್ಸ್‌ಆ್ಯಪ್‌ಗೂ ಬಳಸಬಹುದಾಗಿದೆ, ಇದರೊಂದಿಗೆ ಬ್ರೌಸರ್‌ ಹಾಗೂ ಇತರೆ ಆ್ಯಪ್‌ಗಳಿಗೂ ಅನ್ವಯಿಸಬಹುದು.

ಕ್ವಿಕ್‌ ಸ್ವಿಚ್‌ ಸೌಲಭ್ಯದ ಕಾರ್ಯಾಚರಣೆ ಹೇಗೆ ಅನುಷ್ಠಾನಗೊಳಿಸುವುದು? ಈ ಕೆಳಗಿನ ವಿಡಿಯೊ ನೋಡಿ ತಿಳಿಯಿರಿ:

ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್‌ ಸದಾ ನಡೆಸಿರುವ ಹುಡುಕಾಟಕ್ಕೆ 'ಕ್ವಿಕ್‌ ಸ್ವಿಚ್‌' ಉತ್ತರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಸರಳ, ಸುಲಭ ಬಳಕೆ, ಅನುಕೂಲಕರ ಹಾಗೂ ಅಗತ್ಯವಿರುವ ಯಾವುದೇ ಸಮಯದಲ್ಲಿ ತಕ್ಷಣವೇ ಕ್ವಿಕ್‌ ಸ್ವಿಚ್‌ ಬಳಸಬಹುದಾಗಿದೆ. ಇದನ್ನು ನಿಮ್ಮ ವೈಯಕ್ತಿಕ ಬದುಕಿನ ಗೌಪ್ಯ ಲಾಕರ್‌ ರೀತಿಯಲ್ಲಿ ನೀವು ಬಳಸಬಹುದಾಗಿದೆ.

ತಮ್ಮ ಸ್ಮಾರ್ಟ್‌ಫೋನ್‌ನ್ನು ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಕಾಲ ಈಗ ಮುಗಿದಿದೆ. 'ಅವರು ನಮ್ಮ ಫೋನ್‌ನಲ್ಲಿ ತಿಳಿಯಬಾರದ ಮಾಹಿತಿ ಅಥವಾ ಸಂದೇಶಗಳನ್ನು ಏನಾದರೂ ನೋಡಿದರೆ?' ಎಂಬ ಪ್ರಶ್ನೆ ಸಹಜವಾಗಿ ಫೋನ್‌ ಬಳಕೆದಾರರ ಯೋಚನೆಗಳಲ್ಲಿ ಓಡಾಡುತ್ತಿರುತ್ತದೆ. ಈ ಎಲ್ಲದಕ್ಕೂ ಹಾಗೂ ಇನ್ನೂ ಹಲವು ತಳಮಳಗಳಿಗೆ ಕ್ವಿಕ್‌ ಸ್ವಿಚ್‌ ಪರಿಹಾರವಾಗಿದೆ.

ಇನ್ನೂ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳ ಸೆಕ್ಯೂರ್‌ ಫೋಲ್ಡರ್‌ನಲ್ಲಿ ಸಂಗ್ರಹಿಸಲಾಗಿರುವ ಆ್ಯಪ್‌ಗಳ ಖಾಸಗಿ ಆವೃತ್ತಿಗಳು ಸ್ಯಾಮ್‌ಸಂಗ್‌ ನಾಕ್ಸ್‌ನಿಂದ ರಕ್ಷಿಸಲ್ಪಟ್ಟಿರುತ್ತವೆ.

ಕ್ವಿಕ್‌ ಸ್ವಿಚ್‌ ಕಾರ್ಯಾಚರಣೆ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಆತಂಕಕ್ಕೆ ಒಳಗಾಗದೆ ಯಾರಿಗೆ ಬೇಕಾದರೂ ಕೊಡಬಹುದು. ನಿಮ್ಮ ಫೋನ್‌ ಲಾಕ್‌ ಮಾಡುವುದನ್ನು ಮರೆತು ಬಿಟ್ಟರೇ, ಭಯ ಪಡುವುದು ಬೇಡ! ನಿಮ್ಮ ಖಾಸಗಿ ಮಾಹಿತಿ ನಿಮಗೆ ಬಿಟ್ಟು ಬೇರೆ ಯಾರಿಗೂ ಸಿಗದಂತೆ ಕ್ವಿಕ್‌ ಸ್ವಿಚ್‌ ಖಾತರಿ ನೀಡುತ್ತದೆ.

ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌–ನಿಮಗೆ ಅಗತ್ಯವೆಂದು ಎಂದೂ ಯೋಚಿಸಿರದಂತಹ ಅನ್ವೇಷಣೆ

ಸ್ಯಾಮ್‌ಸಂಗ್‌ನ ಖಾಸಗಿ ಮಾಹಿತಿ ಸುರಕ್ಷತೆ ಅನ್ವೇಷಣೆಗಳಲ್ಲಿ ಇನ್ನಷ್ಟು ಅಡಕವಾಗಿದೆ. ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಫೀಚರ್‌ 'ಸಾಧನದಲ್ಲಿಯೇ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ)' ಸೌಲಭ್ಯವಾಗಿದ್ದು, ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ 71 ಫೋನ್‌ಗಳಲ್ಲಿ ಖಾಸಗಿತನದ ಸಂಪೂರ್ಣ ಸುರಕ್ಷತೆ ನೀಡುತ್ತದೆ. ಮುಂಚಿತವಾಗಿ ನಿಗದಿ ಪಡಿಸುವ ಮುಖ ಅಥವಾ ವ್ಯಕ್ತಿಯ ಚಿತ್ರಗಳ ಆಧಾರದ ಮೇಲೆ ಸೆಕ್ಯೂರ್‌ ಫೋಲ್ಡರ್‌ಗೆ ವರ್ಗಾಯಿಸಬೇಕಾದ ಫೋಟೊಗಳ ಸಲಹೆಯನ್ನು ಕಂಟೆಂಟ್‌ ಸಜೆಷನ್ಸ್‌ ನೀಡುತ್ತದೆ.

ಇನ್ನಷ್ಟು ತಿಳಿಯಲು ಈ ವಿಡಿಯೊ ನೋಡಿ.

ನೀವು ಯಾವತ್ತಿಗೂ ತಿಳಿಸದಿರುವ ಪಾರ್ಟಿಯಲ್ಲಿ ತೆಗೆದಿರುವ ಚಿತ್ರಗಳನ್ನು ನಿಮ್ಮ ಸೋದರಿ ನೋಡುವ ಸಂದರ್ಭ ಎದುರಾದರೆ? ಈ ಸೌಲಭ್ಯವು ಖಂಡಿತವಾಗಿಯೂ ನಿಮ್ಮ ರಕ್ಷಣೆಗೆ ಬರುತ್ತದೆ.

ಮಧ್ಯಮ ಶ್ರೇಣಿಯ ಮಾದರಿಗಳಲ್ಲಿ ಮುನ್ನಡೆಯುತ್ತಿದೆ ಸ್ಯಾಮ್‌ಸಂಗ್‌

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳ ಮೂಲಕ ಯಾವುದೇ ವ್ಯಕ್ತಿ ಒತ್ತಡದಿಂದ ಮುಕ್ತವಾಗಿ ಆಲ್ಟ್‌ ಝಡ್‌ ಲೈಫ್‌ ಅನುಭವಿಸಬಹುದು. ನಿಮ್ಮ ಖಾಸಗಿ ವಲಯ ನಿಮ್ಮದಾಗಿಯೇ ಉಳಿಯುತ್ತದೆ, ಇದಕ್ಕಾಗಿ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್ ಕಂಟೆಂಟ್‌ ಸಜೆಷನ್ಸ್‌ಗೆ ಧನ್ಯವಾದಗಳು ಹೇಳಬೇಕು.
    
ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್‌ ಗಮನದಲ್ಲಿಟ್ಟುಕೊಂಡೆ ಈ ಸೌಲಭ್ಯಗಳನ್ನು ಪರಿಚಯಿಸಲಾಗಿದ್ದು, ಇವು ಬಳಕೆದಾರರಿಗೆ ಖಾಸಗಿತನದ ಸಂಪೂರ್ಣ ಸುರಕ್ಷತೆ ಹಾಗೂ ಮನಸ್ಸು ನೆಮ್ಮದಿಯಾಗಿರುವಂತೆ ಮಾಡುತ್ತವೆ. ವೈಯಕ್ತಿಕವಾದುದು ಹಾಗೂ ವೃತ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಗ್ರಹವಾಗಿರುತ್ತವೆ, ಈ ನಡುವೆ ಖಾಸಗಿ ಬದುಕನ್ನು ಖಾಸಗಿಯಾಗಿಯೇ ಉಳಿಸಿಕೊಳ್ಳುವುದು ಸದಾ ಸವಾಲಿನ ವಿಷಯವೇ ಆಗಿರುತ್ತದೆ. ಅದರಲ್ಲೂ ಸದಾ ಎಲ್ಲರೊಂದಿಗೆ ಬೆರೆತಿರುವ ನಮ್ಮ ಸಂಸ್ಕೃತಿಯಲ್ಲಿ ಖಾಸಗಿತನದ ಸುರಕ್ಷತೆ ಸವಾಲಾಗುತ್ತದೆ. ಈ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ಸ್ಯಾಮ್‌ಸಂಗ್‌ ದೊಡ್ಡ ಪರಿಹಾರವನ್ನೇ ಒದಗಿಸಿದಂತಾಗಿದೆ.

ಪ್ರಸ್ತುತ ಜಗತ್ತಿನ ನಿತ್ಯ ಬದುಕಿನಲ್ಲಿ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ಗಳು ಅಪ್ಪಟ ಬಹುಪಯೋಗಿ ಜೊತೆಗಾರನಂತೆ ಆಗಿವೆ. ಈ ಫೋನ್‌ಗಳೊಂದಿಗೆ ಬದುಕು ಸಂಭ್ರಮಿಸುತ್ತಿದೆ, ಸಂಪೂರ್ಣ ಸ್ವತಂತ್ರವಾಗಿದೆ. ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಮಾದರಿಗಳತ್ತ ಮುನ್ನಡೆಯಿರಿ ಹಾಗೂ ಮತ್ತೆ ಹಿಂದಿರುಗಿ ನೋಡಲು ಕಾರಣಗಳೇ ಇಲ್ಲವಾಗುತ್ತವೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT