ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,800 ಕೋಟಿ ಹೂಡಿಕೆ ನಿರೀಕ್ಷೆ

ಇನ್ವೆಸ್ಟ್‌ ಕರ್ನಾಟಕ: ಕೃಷಿ, ಆಹಾರ ಸಂಸ್ಕರಣೆಗೆ ಆದ್ಯತೆ
Last Updated 23 ಜನವರಿ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್‌ ಕರ್ನಾಟಕ – 2016’ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣೆಯನ್ನು ಆದ್ಯತಾ ವಲಯ ಎಂದು ಗುರುತಿಸಿರುವ ರಾಜ್ಯ ಸರ್ಕಾರ, ಈ ಕ್ಷೇತ್ರದ ₹ 2,800 ಕೋಟಿ ಮೌಲ್ಯದ ಯೋಜನೆಗಳಿಗೆ ಬಂಡವಾಳ ಆಕರ್ಷಿಸಲು ಮುಂದಾಗಿದೆ.

ತಂತ್ರಜ್ಞಾನ ಪಾರ್ಕ್‌: ಖಾಸಗಿ ಸಹಭಾಗಿತ್ವದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಸಮೀಪ ಅಕ್ಕಿ ತಂತ್ರಜ್ಞಾನ ಪಾರ್ಕ್‌ಗೆ 300 ಎಕರೆ ಜಾಗ ಗುರುತಿಸಲಾಗಿದೆ.  ₹122 ಕೋಟಿ ಹೂಡಿಕೆಗೆ ಅವಕಾಶವಿದೆ.

ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಭತ್ತ ಬೆಳೆಗಾರರಿಗೆ ಮಾರುಕಟ್ಟೆ ಯಾಗಿಯೂ ಈ ಪಾರ್ಕ್‌ ಕೆಲಸ ಮಾಡಲಿದೆ ಎಂದು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಣೆಬೆನ್ನೂರಿನ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ₹ 111 ಕೋಟಿ ವೆಚ್ಚದ ಮುಸುಕಿನ ಜೋಳ ತಂತ್ರಜ್ಞಾನ ಪಾರ್ಕ್‌ ಆರಂಭಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT