ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

3 ತಿಂಗಳಲ್ಲಿ 9 ಕೋಟಿ ಜನ ವಿಮಾನ ಪ್ರಯಾಣ

Published 17 ಮೇ 2024, 18:22 IST
Last Updated 17 ಮೇ 2024, 18:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ದೇಶದ ವಿಮಾನ ನಿಲ್ದಾಣಗಳ ಮೂಲಕ 9.7 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಮಾಸ್ಟರ್‌ಕಾರ್ಡ್‌ ಎಕನಾಮಿಕ್ಸ್‌ ಇನ್‌ಸ್ಟಿಟ್ಯೂಟ್‌ ವರದಿ ತಿಳಿಸಿದೆ.

ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರ್ಗದಲ್ಲಿ ಹಿಂದೆಂದೂ ಇಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿಲ್ಲ ಎಂದು ಹೇಳಿದೆ.

ಪ್ರವಾಸೋದ್ಯಮಕ್ಕೆ ಮೀಸಲಾದ ಏಷ್ಯಾ–ಪೆಸಿಫಿಕ್‌ ಪ್ರದೇಶದಲ್ಲಿರುವ 13 ಪ್ರವಾಸಿ ಮಾರುಕಟ್ಟೆಗಳು ಸೇರಿದಂತೆ ವಿಶ್ವ 74 ಮಾರುಕಟ್ಟೆಗಳ ವಿಸ್ತಾರಕ್ಕೆ ಇದರಿಂದ ನೆರವಾಗಲಿದೆ ಎಂದು ಹೇಳಿದೆ.

‘ಒಂದು ದಶಕದ ಹಿಂದೆ ವರ್ಷವೊಂದರಲ್ಲಿ ಇಷ್ಟು ಸಂಖ್ಯೆಯ ಪ್ರಯಾಣಿಕರು ವಿಮಾನಗಳಲ್ಲಿ ಸಂಚರಿಸುತ್ತಿದ್ದರು. ಸದ್ಯ ಒಂದು ತ್ರೈಮಾಸಿಕದಲ್ಲೇ ದಾಖಲೆಯ ಸಂಖ್ಯೆಯಲ್ಲಿ ಪಯಣಿಸಿದ್ದಾರೆ’ ಎಂದು ವರದಿ ವಿವರಿಸಿದೆ.

ಕಳೆದು ಐದು ವರ್ಷಗಳಿಗೆ ಹೋಲಿಸಿದರೆ ದೇಶೀಯ ಮಾರ್ಗದಲ್ಲಿ ಶೇ 21ರಷ್ಟು ಹಾಗೂ ಅಂತರರಾಷ್ಟ್ರೀಯ ಮಾರ್ಗದಲ್ಲಿ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.

ಎಲ್ಲಿಗೆ ಹೆಚ್ಚು ಪಯಣ?:

2019ರ ಅಂಕಿಅಂಶಗಳಿಗೆ ಹೋಲಿಸಿದರೆ ಜ‍ಪಾನ್‌ಗೆ ಪಯಣಿಸುವವರ ಸಂಖ್ಯೆಯಲ್ಲಿ ಶೇ 53ರಷ್ಟು ಏರಿಕೆಯಾಗಿದೆ. ವಿಯೆಟ್ನಾಂಗೆ ತೆರಳುವವರ ಸಂಖ್ಯೆಯಲ್ಲಿ ಶೇ 248ರಷ್ಟು ಹೆಚ್ಚಳವಾಗಿದೆ. ಡಾಲರ್‌ ಮೌಲ್ಯದಲ್ಲಿ ಏರಿಕೆ ನಡುವೆಯೂ ಅಮೆರಿಕಕ್ಕೆ ತೆರಳುವವರ ಸಂಖ್ಯೆಯಲ್ಲಿ ಶೇ 59ರಷ್ಟು ವೃದ್ಧಿಯಾಗಿದೆ.  

ಆಮ್‌ಸ್ಟರ್‌ಡ್ಯಾಂ, ಸಿಂಗಪುರ, ಲಂಡನ್‌, ಫ್ರಾಕ್‌ಫರ್ಟ್‌ ಹಾಗೂ ಮೆಲ್ಬರ್ನ್‌ ಭಾರತೀಯ ಪ್ರವಾಸಿಗರ ನೆಚ್ಚಿನ ಪ್ರಮುಖ ತಾಣಗಳಾಗಿವೆ ಎಂದು ವರದಿ ತಿಳಿಸಿದೆ. 

‘ಏಷ್ಯಾ–ಪೆಸಿಫಿಕ್‌ ಪ್ರದೇಶದ ಜನರಿಗೆ ಪ್ರವಾಸಕ್ಕೆ ತೆರಳಬೇಕೆಂಬ ತುಡಿತ ಹೆಚ್ಚಿರುತ್ತದೆ. ಪ್ರವಾಸದ ಮೂಲಕ ಅವರು ಜೀವನದಲ್ಲಿ ಮರೆಯಲಾಗದ ಅನುಭವ ಪಡೆಯುತ್ತಾರೆ. ಆದರೆ, ಪ್ರವಾಸೋದ್ಯಮ ಅಧಿಕಾರಿಗಳು, ಪ್ರವಾಸಿ ಮಾರ್ಗದರ್ಶಿಗಳು, ಆತಿಥ್ಯ ಹಾಗೂ ಆಹಾರ ವೆಚ್ಚವು ದುಬಾರಿ ವಿಷಯವಾಗಿದೆ’ ಎಂದು ಮಾಸ್ಟರ್‌ಕಾರ್ಡ್‌ನ (ಏಷ್ಯಾ–ಪೆಸಿಫಿಕ್‌ ) ಮುಖ್ಯ ಅರ್ಥಶಾಸ್ತ್ರಜ್ಞ ಡೇವಿಡ್‌ ಮನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT