ಗುರುವಾರ , ನವೆಂಬರ್ 14, 2019
22 °C

ಆಯ-ವ್ಯಯದ ಲೆಕ್ಕ ಪತ್ರ: ಸರ್ಕಾರದ ಖಜಾನೆಗೆ ಹೆಚ್ಚು ಆದಾಯ ತೆರಿಗೆಯಿಂದ!

Published:
Updated:

ನವದೆಹಲಿ: ಸರ್ಕಾರದ ಆಯ ವ್ಯಯದ ಲೆಕ್ಕ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರದ ಖಜಾನೆಗೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯಿಂದ ಒಂದು ರೂಪಾಯಿಯ ಲೆಕ್ಕಾಚಾರದಲ್ಲಿ 68 ಪೈಸೆ ಬರುತ್ತದೆ ಎಂದಿದ್ದಾರೆ. ಅದೇ ವೇಳೆ ಖರ್ಚುಗಳಲ್ಲಿ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು ಶೇ. 23ರಷ್ಟಿದೆ.

ಬಜೆಟ್‌ನಲ್ಲಿ ನಿರ್ಮಲಾ ನೀಡಿದ ಮಾಹಿತಿ ಪ್ರಕಾರ ಜಿಎಸ್‌ಟಿಯಿಂದಾಗಿ ಶೇ.19 ರೂಪಾಯಿ ಗಳಿಕೆಯಾಗುತ್ತಿದೆ. ಕಾರ್ಪೊರೇಟ್ ತೆರಿಗೆಯಿಂದ ಶೇ. 21  ಗಳಿಕೆಯಾಗುತ್ತಿದ್ದು ಪಡೆಯುವಿಕೆ ಮತ್ತು ಇತರ ಭಾದ್ಯತೆಗಳಿಂದ ಶೇ.21ರಷ್ಟು ಗಳಿಕೆಯಾಗುತ್ತಿದೆ.

ತೆರಿಗೆಯೇತರ ಆದಾಯದಿಂದ ಶೇ.9 , ಕೇಂದ್ರ ಅಬಕಾರಿ ಸುಂಕದಿಂದ ಶೇ. 8, ಕಸ್ಟಮ್ಸ್ ನಿಂದ ಶೇ. 4, ಮತ್ತು  ಸಾಲಯೇತರ ವರಮಾನದಿಂದ ಶೇ.3 ರಷ್ಟು ಗಳಿಕೆಯಾಗುತ್ತಿದೆ.

ಖರ್ಚು ವೆಚ್ಚದ ಲೆಕ್ಕ ನೋಡುವುದಾದರೆ ಕೇಂದ್ರ ವಲಯದ ಯೋಜನೆಗಳಿಗೆ ಶೇ. 13 , ಬಡ್ಡಿ ಪಾವತಿ ಶೇ.18, ಕೇಂದ್ರ ವಲಯದ ಯೋಜನೆಗಳಿಗೆ ಶೇ. 13 ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಶೇ.9 ರಷ್ಟು ಖರ್ಚು ಮಾಡಲಾಗುತ್ತದೆ.

ಪ್ರತಿಕ್ರಿಯಿಸಿ (+)