ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿಗೆ ತಂದಿದೆ. ಇದರನ್ವಯ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ನೀಡಬೇಕಾಗುತ್ತದೆ. ಅಂದರೆ, ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷ ಎಂದು ನಿಗದಿಪಡಿಸಲಾಗಿದೆ. ಈ ಅವಧಿ ಮೀರಿದ ವಾಹನಗಳಿಗೆ ಕ್ಷಮತಾ ಪರೀಕ್ಷೆಯ ಪ್ರಮಾಣಪತ್ರ ಲಭಿಸುವುದಿಲ್ಲ. ಹೀಗಾಗಿ ಬಳಕೆಯಿಂದ ಹಿಂಪಡೆದು ಗುಜರಿಗೆ ನೀಡಬೇಕಾಗುತ್ತದೆ.

ಯಾವ ಉದ್ದೇಶ?

ಪರಿಸರ ಸ್ನೇಹಿ, ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ಮತ್ತು ಮಾಲಿನ್ಯ ನಿಯಂತ್ರಣ, ತೈಲ ಆಮದಿನ ಮೇಲೆ ಅವಲಂಬನೆ ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ.

51 ಲಕ್ಷ ವಾಹನ ಗುಜರಿಗೆ!

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನೀತಿಯಿಂದಾಗಿ, 20 ವರ್ಷಕ್ಕೂ ಹಳೆಯ 51 ಲಕ್ಷ ಲಘು ಮೋಟಾರು ವಾಹನಗಳು ಗುಜರಿ ಸೇರಲಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇದನ್ನೂ ಓದಿ:Union Budget 2021 Highlights: ಕೇಂದ್ರ ಬಜೆಟ್ನ ಪ್ರಮುಖ ಅಂಶಗಳು

ವಾಹನ ಉದ್ಯಮಕ್ಕೆ ಉತ್ತೇಜನ

ಹಳೆಯ ವಾಹನವನ್ನು ಗುಜರಿಗೆ ಹಾಕುವ ನೀತಿಯಿಂದ, ವಾಹನ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹೊಸ ತಂತ್ರಜ್ಞಾನದ, ಮಿತ ಇಂಧನ ಮತ್ತು ಪುನರ್ಬಳಕೆಯ, ಕಡಿಮೆ ಮಾಲಿನ್ಯ ಹೊಂದಿರುವ ವಾಹನ ತಯಾರಿಕೆಗೆ ಉತ್ತೇಜನ ದೊರೆಯಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ:Budget 2021: ಹಳೆ ವಾಹನಗಳ ವಿಲೇವಾರಿಗೆ ಹೊಸ ನೀತಿ, ಏನಿದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.