ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2021 - ಆರ್ಥಿಕ ಕುಸಿತ ಮರೆತ ಹಣಕಾಸು ಸಚಿವೆ: ಕಾಂಗ್ರೆಸ್ ಟೀಕೆ

Last Updated 1 ಫೆಬ್ರುವರಿ 2021, 10:00 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2021–22ನೇ ಹಣಕಾಸು ವರ್ಷದ ಬಜೆಟ್‌ ಅನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಹಣಕಾಸು ಸಚಿವರು ಆರ್ಥಿಕ ಕುಸಿತವನ್ನು ಮರೆತಿದ್ದಾರೆ, ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

‘ಬಜೆಟ್ ನಿರಾಶಾದಾಯಕ. ಹಣಕಾಸು ಬೆಳವಣಿಗೆ ಮತ್ತು ಗ್ರಾಹಕ ಬೇಡಿಕೆ ವೃದ್ಧಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಇಲ್ಲ. ಬೇಡಿಕೆಯನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿಗೆ ದಿಟ್ಟ ಬಜೆಟ್‌ನ ಅಗತ್ಯವಿದೆ. ದುರ್ಬಲ ವರ್ಗಗಳಿಗೆ ಹೆಚ್ಚು ನೇರ ವರ್ಗಾವಣೆಯ ಅವಶ್ಯಕತೆ ಇದೆ’ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ.

‘ಜಿಡಿಪಿ ಬೆಳವಣಿಗೆ ದರ ಸತತ 37ನೇ ತಿಂಗಳು ಕುಸಿದಿದೆ. ಇದು 1991ರ ನಂತರದ ಅತಿದೊಡ್ಡ ಬಿಕ್ಕಟ್ಟಾಗಿದೆ. ಇದನ್ನು ಹಣಕಾಸು ಸಚಿವರು ಮರೆತಿದ್ದಾರೆ. ಇವರು ಆರ್ಥಿಕತೆಯನ್ನು ಬೆಳೆಸುವುದಲ್ಲ, ಕುಟುಂಬದ ಸ್ವತ್ತನ್ನೇ ಮಾರಾಟ ಮಾಡುತ್ತಾರೆ’ ಎಂದು ಮನೀಷ್ ತಿವಾರಿ ವ್ಯಂಗ್ಯವಾಡಿದ್ದಾರೆ.

‘ಇದೊಂದು ತಪ್ಪು ರೋಗ ನಿರ್ಣಯದಿಂದ ಕೂಡಿದ ತಪ್ಪು ಪ್ರಿಸ್ಕ್ರಿಪ್ಷನ್’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT