ಮಂಗಳವಾರ, ಮಾರ್ಚ್ 21, 2023
28 °C

ಅಮೃತ ಕಾಲದ ಬಜೆಟ್‌ಗೆ 'ಸಪ್ತರ್ಷಿ' ಮಾರ್ಗದರ್ಶನ: ಏನಿದು? ಇಲ್ಲಿದೆ ವಿವರಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಇದು ಅಮೃತ ಕಾಲದ ಮೊದಲ ಬಜೆಟ್. ವಿಶ್ವವು ಭಾರತೀಯ ಆರ್ಥಿಕತೆಯನ್ನು ಪ್ರಕಾಶಮಾನವಾದ ನಕ್ಷತ್ರವೆಂದು ಗುರುತಿಸಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ ಅನ್ನು ಬಣ್ಣಿಸಿದ್ದಾರೆ.

ಭಾರತವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಮುಂದಿನ 25 ವರ್ಷಗಳನ್ನು ಅಭಿವೃದ್ಧಿಯ ‘ಅಮೃತ ಕಾಲ’ವೆಂದು ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಸದ್ಯ, ಇಂದು ಮಂಡನೆಯಾಗಿರುವ ಈ ಬಜೆಟ್‌ ‘ಅಮೃತ ಕಾಲ’ದ ಮೊದಲ ಬಜೆಟ್‌ ಎಂದು ನಿರ್ಮಲಾ ಉಲ್ಲೇಖಿಸಿದ್ದಾರೆ.

ಬಜೆಟ್ 2023: ನಿಮ್ಮ ಆದಾಯ ತೆರಿಗೆ ಲೆಕ್ಕಾಚಾರ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಆರ್ಥಿಕತೆ ಕುರಿತ ತಮ್ಮ ದೃಷ್ಟಿಕೋನವನ್ನು ವಿವರಿಸಿದ ನಿರ್ಮಲಾ, ಸರ್ಕಾರಕ್ಕೆ ಮಾರ್ಗದರ್ಶನ ನೀಡಬಲ್ಲ 'ಸಪ್ತರ್ಷಿ' ಎಂಬ ಏಳು ಪ್ರಮುಖ ಕ್ಷೇತ್ರಗಳನ್ನು ಪ್ರಸ್ತಾಪಿಸಿದರು.

1. ಸಮಗ್ರ ಅಭಿವೃದ್ಧಿ
2. ಅಂತಿಮ ಗುರಿ ತಲುಪುವುದು
3. ಮೂಲಸೌಕರ್ಯ ಮತ್ತು ಹೂಡಿಕೆ
4. ಸಾಮರ್ಥ್ಯ ಅನ್ವೇಷಣೆ
5. ಹಸಿರು ಅಭಿವೃದ್ಧಿ
6. ಯುವ ಶಕ್ತಿ
7. ಹಣಕಾಸು ವಲಯ

ಅಮೃತ ಕಾಲದ ಪರಿಕಲ್ಪನೆಯು ಮೂಲಸೌಕರ್ಯ, ಉತ್ಪಾದನೆ, ಡಿಜಿಟಲ್ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಒಳಗೊಂಡಿದೆ. ಅದು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಿಸಲಿದೆ. ಆರ್ಥಿಕತೆಯನ್ನು ಜಾಗತಿಕವಾಗಿ ಮೂರನೇ ಸ್ಥಾನಕ್ಕೇರಿಸಲಿದೆ. ಅಂತಹ ಬೆಳವಣಿಗೆಯನ್ನು ಸಾಧಿಸಲು ನಾವೀನ್ಯತೆ ಮತ್ತು ಸುಧಾರಣೆ ಎಂಬುದು ಪ್ರಮುಖ ಸಾಧನವಾಗಲಿದೆ ಎಂದೂ ನಿರ್ಮಲಾ ಇದೇ ವೇಳೆ ಹೇಳಿದ್ದಾರೆ.

2023-24ರ ಬಜೆಟ್ ಅಮೃತ ಕಾಲಕ್ಕೆ ನೀಲನಕ್ಷೆಯನ್ನು ನೀಡುತ್ತದೆ ಎಂದು ನಿರ್ಮಲಾ ಅಭಿಪ್ರಾಯಪಟ್ಟರು.

ಇವುಗಳನ್ನೂ ಓದಿ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು