ವಸತಿ ನಿರ್ಮಾಣ ಯೋಜನೆಗಳ ವಿಳಂಬ ತಡೆಯಲು ಕೇಂದ್ರ ಸರ್ಕಾರವು 2019ರಲ್ಲಿ ಕೈಗೆಟಕುವ ದರದ ಮನೆಗಳ ವಿಶೇಷ ನಿಧಿಯನ್ನು (ಎಸ್ಡಬ್ಲ್ಯುಎಎಂಐಎಚ್) ಸ್ಥಾಪಿಸಿತ್ತು. ಅದು ಯಶಸ್ವಿಯಾಗಿರುವುದರಿಂದ ಈ ಬಜೆಟ್ನಲ್ಲಿ ಎಸ್ಡಬ್ಲ್ಯುಎಎಂಐಎಚ್–2 ನಿಧಿ ಸ್ಥಾಪಿಸುವ ಘೋಷಣೆ ಮಾಡಲಾಗಿದೆ.

‘ಈ ಯೋಜನೆ ಯಶಸ್ವಿಯಾಗಿರುವುದರಿಂದ ಹೊಸ ನಿಧಿ ಸ್ಥಾಪಿಸಲಾಗುವುದು. ₹15 ಸಾವಿರ ಕೋಟಿ ಮೊತ್ತದ ಈ ನಿಧಿಯನ್ನು ಬಳಸಿ ಸುಮಾರು ಒಂದು ಲಕ್ಷ ಮನೆಗಳ ನಿರ್ಮಾಣ ಕೆಲಸ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಹಣಕಾಸು ಸಚಿವರು ಹೇಳಿದರು.

ಅಪೂರ್ಣಗೊಂಡಿದ್ದ 50 ಸಾವಿರ ಮನೆಗಳನ್ನು ಕಳೆದ ಐದು ವರ್ಷಗಳಲ್ಲಿ ಈ ನಿಧಿಯಡಿ ನೆರವು ಪಡೆದು ಪೂರ್ಣಗೊಳಿಸಲಾಗಿದೆ. ಮನೆ ಖರೀದಿಸಿದವರಿಗೆ ಕೀಗಳನ್ನು ಹಸ್ತಾಂತರಿಸಲಾಗಿದೆ. 2025ರಲ್ಲಿ ಇನ್ನೂ 40 ಸಾವಿರ ಮನೆಗಳ ನಿರ್ಮಾಣ ಕೆಲ ಪೂರ್ಣಗೊಳಿಲಾಗುವುದು ಎಂದು ಮಾಹಿತಿ ನೀಡಿದರು.

ಕೈಗೆಟಕುವ ದರದಡಿ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಈ ನಿಧಿಯಡಿ ಡೆವಲಪರ್ಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.
.Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮುಖ್ಯಾಂಶಗಳು .Income Tax 2025 | ₹12 ಲಕ್ಷದವರೆಗೆ ತೆರಿಗೆ ವಿನಾಯಿತಿ: Slab ವಿವರ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.