ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2024 | ಆತಿಥ್ಯ, ಮನರಂಜನೆ, ಸಚಿವರ ವೇತನಕ್ಕೆ ₹1,249 ಕೋಟಿ ಮೀಸಲು

Published 1 ಫೆಬ್ರುವರಿ 2024, 11:50 IST
Last Updated 1 ಫೆಬ್ರುವರಿ 2024, 11:50 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಇತರ ಖರ್ಚುಗಳಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ, ದೇಶಕ್ಕೆ ಭೇಟಿ ನೀಡುವ ಅತಿಥಿಗಳ ಆತಿಥ್ಯ ಮತ್ತು ಮನರಂಜನೆ, ಸಚಿವರು, ಸಂಪುಟ ಕಾರ್ಯದರ್ಶಿಗಳ ವೆಚ್ಚಗಳಿಗೆ ₹ 1,248.91 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

ಕಳೆದ ಬಾರಿಯ ಬಜೆಟ್‌ನಲ್ಲಿ ₹1803.01 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ಬಾರಿ ₹554.1 ಕೋಟಿ ಅನುದಾನ ಕಡಿತಗೊಳಿಸಲಾಗಿದೆ.

ಸಚಿವ ಸಂಪುಟದ ವೆಚ್ಚಕ್ಕಾಗಿ ಒಟ್ಟು ₹832.81 ಕೋಟಿ (2023-24ರಲ್ಲಿ ₹1289.28 ಕೋಟಿ) ನೀಡಲಾಗಿದ್ದು, ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯಕ್ಕೆ ₹200 ಕೋಟಿ (ಕಳೆದ ಬಜೆಟ್‌ನಲ್ಲಿ ₹299.30 ಕೋಟಿ) ಹಂಚಿಕೆ ಮಾಡಲಾಗಿದೆ.

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ ₹76.20 ಕೋಟಿ (2023-24ರಲ್ಲಿ ₹75 ಕೋಟಿ) ಮೀಸಲಿಟ್ಟಿದ್ದು, ಸಂಪುಟ ಕಾರ್ಯದರ್ಶಿಗಳ ವೆಚ್ಚಕ್ಕೆ ₹70 ಕೋಟಿ (2023-24ರಲ್ಲಿ ₹70.28 ಕೋಟಿ) ನೀಡಲಾಗಿದೆ. ಪ್ರಧಾನಮಂತ್ರಿ ಕಾರ್ಯಾಲಯದ ಖರ್ಚು ವೆಚ್ಚಕ್ಕೆ ₹65.30 ಕೋಟಿ (ಕಳೆದ ಬಜೆಟ್‌ನಲ್ಲಿ ₹62.65 ಕೋಟಿ) ಮೀಸಲಿಡಲಾಗಿದೆ.

ಮಾಜಿ ರಾಜ್ಯಪಾಲರುಗಳ ನೆರವಿಗೆ ಮೀಸಲಾದ ಸಚಿವಾಲಯದ ವೆಚ್ಚಕ್ಕೆ ₹1.80 ಕೋಟಿ ನೀಡಿದೆ.

ಆತಿಥ್ಯ ಮತ್ತು ಮನರಂಜನೆಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ₹4 ಕೋಟಿ ಅನುದಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT