ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2024 | ಖಾಸಗಿಯಾಗಿ ಆವಿಷ್ಕಾರ, ಸಂಶೋಧನೆಗೆ ಉತ್ತೇಜನಕ್ಕೆ ₹1 ಲಕ್ಷ ಕೋಟಿ

Published 1 ಫೆಬ್ರುವರಿ 2024, 14:31 IST
Last Updated 1 ಫೆಬ್ರುವರಿ 2024, 14:31 IST
ಅಕ್ಷರ ಗಾತ್ರ

ನವದೆಹಲಿ: ನವೀನ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಖಾಸಗಿ ವಲಯದವರಿಗೆ ಉತ್ತೇಜನ ನೀಡಲು 50 ವರ್ಷ ಅವಧಿಗೆ ಬಡ್ಡಿರಹಿತ ಉಚಿತ ಸಾಲ ಒದಗಿಸಲು ₹ 1 ಲಕ್ಷ ಕೋಟಿಯ ಆವರ್ತನಿಧಿ ಸ್ಥಾಪಿಸಲಾಗುತ್ತದೆ.

ಮಧ್ಯಂತರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಈ ವಿಷಯ ಪ್ರಕಟಿಸಿದರು. ‘ತಂತ್ರಜ್ಞಾನದತ್ತ ಒಲವುಳ್ಳ ಭಾರತದ ಯುವಜನರಿಗೆ ಇದು ಸುವರ್ಣಯುಗವಾಗಲಿದೆ’ ಎಂದು ಬಣ್ಣಿಸಿದರು.

ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಕೈಗೊಳ್ಳಲು ಈ ಕ್ರಮವು ಖಾಸಗಿ ವಲಯದಲ್ಲಿ ಉತ್ತೇಜನ ನೀಡಲಿದೆ. ಯವಶಕ್ತಿ ಮತ್ತು ತಂತ್ರಜ್ಞಾನ ಒಗ್ಗೂಡಿಸುವ ಕಾರ್ಯಕ್ರಮಗಳು ಈಗಿನ ಅಗತ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT