ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಆರ್ಥಿಕ ಸಮೀಕ್ಷೆ? ವರದಿ ಪಡೆಯುವುದು ಹೇಗೆ? 

Last Updated 31 ಜನವರಿ 2020, 6:29 IST
ಅಕ್ಷರ ಗಾತ್ರ
ADVERTISEMENT
""

ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯು ಪ್ರಸಕ್ತ ಹಣಕಾಸು ವರ್ಷದಲ್ಲಿನ ಏರಿಳಿತ, ಅಡೆತಡೆಗಳು ಹಾಗೂ ಯೋಜನೆಗಳು, ಅಭಿವೃದ್ಧಿ ಸೇರಿದಂತೆ ದೇಶದ ವಿದ್ಯಮಾನಗಳಿಗೆ ಕೈಗನ್ನಡೆಯಾಗಿರಲಿದೆ. ಅತ್ಯಗತ್ಯವಾಗಿ ಯಾವ ಕ್ಷೇತ್ರಗಳಿಗೆ ಗಮನ ಹರಿಸಬೇಕಿದೆ ಎಂಬುದೂ ಆರ್ಥಿಕ ಸಮೀಕ್ಷೆಯಿಂದ ತಿಳಿಯಲು ಸಾಧ್ಯವಾಗುತ್ತದೆ.

ಮುಖ್ಯ ಆರ್ಥಿಕ ಸಲಹೆಗಾರ ನೇತೃತ್ವದ ತಂಡದವು ಆರ್ಥಿಕ ಸಮೀಕ್ಷೆ ವರದಿ ಸಿದ್ಧಪಡಿಸುತ್ತದೆ ಹಾಗೂ ಹಣಕಾಸು ಸಚಿವರ ಅನುಮೋದನೆಯ ಬಳಿಕ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ಕೆ.ವಿ.ಸುಬ್ರಮಣಿಯನ್ ಅವರು 2019–20ರ ಆರ್ಥಿಕ ಸಮೀಕ್ಷೆಯ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಚರ್ಚಿಸುತ್ತಾರೆ. ಅದಕ್ಕೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿ ಸಮೀಕ್ಷಾ ವರದಿ ಮಂಡಿಸುತ್ತಾರೆ.

ಆರ್ಥಿಕ ಸಮೀಕ್ಷೆ ಎಂದರೆ?

ಬಜೆಟ್‌ಪೂರ್ವದ 12 ತಿಂಗಳಲ್ಲಿ ಆರ್ಥಿಕ ವಲಯದಲ್ಲಿ ಆದ ಬದಲಾವಣೆಗಳು ಹಾಗೂ ಜಾರಿಗೆ ತರಲಾದ ಸರ್ಕಾರದ ಯೋಜನೆಗಳು, ಸರ್ಕಾರದ ಅಭಿವೃದ್ಧಿ ಆಶಯಗಳು, ಯೋಜನೆಗಳು ಹಾಗೂ ಭಾರತದ ಆರ್ಥಿಕತೆಯ ಮುನ್ನೋಟವನ್ನು ವರದಿ ವಿವರಿಸುತ್ತದೆ.

ಕೇಂದ್ರ ಹಣಕಾಸು ಸಚಿವಾಲಯ ನಡೆಸುವ ವಾರ್ಷಿಕ ಆರ್ಥಿಕ ಸಮೀಕ್ಷೆಯು ಬಜೆಟ್‌ ನಂತರದ ಎರಡನೇ ಅತಿ ಮುಖ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.

ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳು ತೋರಿದ ಕಾರ್ಯಕ್ಷಮತೆ, ಸರ್ಕಾರ ರೂಪಿದ ನೀತಿಗಳು ಹಾಗೂ ಅದರ ಪರಿಣಾಮಗಳನ್ನು ಉಲ್ಲೇಖಿಸಲಾಗುತ್ತದೆ. ಹಣಕಾಸು ಸ್ಥಿತಿಗತಿ, ಹಣದುಬ್ಬರ, ಬೃಹತ್‌ ಆರ್ಥಿಕತೆ ಹಾಗೂ ಆರ್ಥಿಕತೆಯ ಅಂಶಗಳನ್ನು ವಿವರಿಸಲಾಗುತ್ತದೆ.

ಹವಾಮಾನ ಬದಲಾವಣೆ, ಕೃಷಿ ವಲಯ ಹಾಗೂ ಉದ್ಯೋಗ ಪ್ರಮಾಣಗಳಿಂದ ದೇಶದ ಆರ್ಥಿಕತೆಯ ಮೇಲೆ ಆಗಿರುವ ಪರಿಣಾಮಗಳ ಬಗ್ಗೆಯೂ ತಿಳಿಸುತ್ತದೆ. ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿತಕ್ಕೆ ಕಾರಣವಾಗಿರುವ ಅಂಶಗಳು ಹಾಗೂ ಆರ್ಥಿಕತೆಗೆ ಎದುರಾಗಿರುವ ಸವಾಲುಗಳು, ಚೇತರಿಕೆಯ ಹಾದಿಯ ಬಗ್ಗೆಯೂ ಪ್ರಸ್ತಾಪಿಸಲಾಗುತ್ತದೆ.

ಇಲ್ಲಿಂದ ವರದಿ ಪಡೆಯಬಹುದು

ಆರ್ಥಿಕ ಸಮೀಕ್ಷೆ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ. ಪಿಐಬಿ ವೆಬ್‌ಸೈಟ್‌ನಲ್ಲಿ (https://pib.gov.in/indexd.aspx) ಆರ್ಥಿಕ ಸಮೀಕ್ಷೆ 2020 ಪಡೆಯಬಹುದು ಹಾಗೂ ಹಿಂದಿನ ಆರ್ಥಿಕ ಸಮೀಕ್ಷೆ ವರದಿಗಳನ್ನು ಇಂಡಿಯನ್‌ ಬಜೆಟ್‌ ವೆಬ್‌ಸೈಟ್‌ನಿಂದ (https://www.indiabudget.gov.in/economicsurvey/) ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT