ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದರಹಿತ ಡಿಜಿಟಲ್ ಬಜೆಟ್; ಟ್ಯಾಬ್ ಪ್ರದರ್ಶಿಸಿದ ನಿರ್ಮಲಾ ಸೀತಾರಾಮನ್

Last Updated 1 ಫೆಬ್ರುವರಿ 2021, 4:55 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಬಜೆಟ್ ಮಂಡನೆಯ ದಿನದಂದು ಹಣಕಾಸು ಸಚಿವರು ಬಜೆಟ್ ಪುಸ್ತಕಗಳನ್ನು ಹೊಂದಿರುವ ಸೂಟ್‌ಕೇಸ್‌ನೊಂದಿಗೆ ಬರುವುದು ವಾಡಿಕೆ. ಆದರೆ ಬಹಿ ಖಾತಾ (ಬಜೆಟ್ ಪುಸ್ತಕ) ಸಾಂಪ್ರದಾಯವನ್ನು ಮುರಿದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಚಿಕ್ಕದಾದ ಕೆಂಪು ಬ್ಯಾಗ್‌ನಲ್ಲಿಸುತ್ತಿರುವ ಟ್ಯಾಬ್ ಪ್ರಸ್ತುತಪಡಿಸಿದ್ದಾರೆ. ಇದರ ಹೊರ ಆವರಣದಲ್ಲಿ ಅಶೋಕ ಸ್ತಂಭ ಕಂಗೊಳಿಸುತ್ತಿದೆ.

ಭಾರತ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. 2019ನೇ ಇಸವಿಯಲ್ಲಿ ಕೆಂಪು ವಸ್ತ್ರದಲ್ಲಿ ಬಜೆಟ್ ಪ್ರತಿಗಳನ್ನು ತರುವ ಮೂಲಕ ಗಮನ ಸೆಳೆದಿದ್ದರು.

1947ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿತ್ತು. ಅಂದು ಹಣಕಾಸು ಸಚಿವರಾಗಿದ್ದ ಆರ್. ಕೆ. ಷಣ್ಮುಖಂ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪುಸ್ತಕವನ್ನು ತಂದಿದ್ದರು. 1958ನೇ ಇಸವಿಯಲ್ಲಿ ಮಾಜಿ ಪ್ರಧಾನಿ ಜವಹರ್‌ಲಾಲ್ ನೆಹರು ಕಪ್ಪು ಸೂಟ್‌ಕೇಸ್‌ನಲ್ಲಿ ಬಜೆಟ್ ಪುಸ್ತಕವನ್ನು ತಂದಿದ್ದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಸೂಟ್‌ಕೇಸ್ ಬದಲಿಗೆ ಬಜೆಟ್ ಪುಸ್ತಕವಿರುವ ಕಪ್ಪು ಬ್ಯಾಗ್ ಹಿಡಿದು ಸಂಸತ್ತಿಗೆ ಬಂದಿದ್ದರು.

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಕಂದು ಬಣ್ಣದ ಸೂಟ್‌ಕೇಸ್ ಹಿಡಿದು ಸಂಸತ್ತಿಗೆ ಬರುತ್ತಿದ್ದರು. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆಗೆ ಸೂಟ್‌ಕೇಸ್ ಹಿಡಿದು ಬರುತ್ತಿರುವುದರಿಂದ ಅದೊಂದು ಸಾಂಪ್ರದಾಯವಾಗಿ ರೂಢಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT