Union Budget 2023 | ನಿರಾಶಾದಾಯಕ ಬಜೆಟ್‌ಗೆ ತಯಾರಾಗಿದ್ದೇನೆ: ಚಿದಂಬರಂ

ನವದೆಹಲಿ: ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಕುರಿತು ನಿರೀಕ್ಷೆಗಳಿವೆ. ಆದರೆ ಅದು ನಿರಾಶಾದಾಯಕವಾಗಿರಲೂ ಬಹುದು. ಅದಕ್ಕಾಗಿ ತಯಾರಾಗಿದ್ದೇನೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಆರ್ಥಿಕ ಅಭಿವೃದ್ಧಿಗೆ ವಿವಿಧ ಕ್ರಮಗಳು, ರಫ್ತು ಹೆಚ್ಚಳ, ಸಾಲದ ಹೊರೆ ಇಳಿಕೆಯಂತಹ ವಿವಿಧ ಆಶಾದಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ನಿರೀಕ್ಷೆಯಿದೆ. ಆದರೆ ಬಜೆಟ್ ಬಗ್ಗೆ ಇರುವ ನಿರೀಕ್ಷೆಯಂತೆಯೇ, ಅದು ನೀರಸವಾಗಿರಬಹುದು ಎನ್ನಿಸುತ್ತಿದೆ. ಅದಕ್ಕಾಗಿ ನಾನು ತಯಾರಾಗಿದ್ದೇನೆ ಎಂದು ಚಿದಂಬರಂ ತಿಳಿಸಿದ್ದಾರೆ.
ಬಜೆಟ್ ಅಧಿವೇಶನ | ಅದಾನಿ ಪ್ರಕರಣ: ಸೆಬಿ ತನಿಖೆಗೆ ಆಗ್ರಹ
ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ನಲ್ಲಿ ಜನರ ಜೀವನಮಟ್ಟ ಸುಧಾರಣೆಗೆ ಅಗತ್ಯ ಯೋಜನೆ ಘೋಷಿಸಬೇಕು. ಅಲ್ಲದೆ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ವಿವಿಧ ಕಂಪನಿಗಳಲ್ಲಿನ ಉದ್ಯೋಗ ಕಡಿತ ಜತೆಗೆ ಹಣದುಬ್ಬರದ ಕುರಿತು ಗಮನ ಹರಿಸುತ್ತದೆ ಎನ್ನುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ: ರಾಷ್ಟ್ರಪತಿ ದ್ರೌಪದಿ ಮುರ್ಮು ಚೊಚ್ಚಲ ಭಾಷಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.