ತುರುವೇಕೆರೆ: ಪ್ರತಿ ಬಾರಿಯ ಬಜೆಟ್ ವೇಳೆ ಕ್ಷೇತ್ರದ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರು ಹಲವು ನಿರೀಕ್ಷೆಗಳೊಂದಿಗೆ ಆಸೆಗಣ್ಣಿಂದ ನೋಡುತ್ತಿದ್ದರೂ ಯಾವುದೂ ಕೈಗೂಡಿಲ್ಲ. ಈ ಬಾರಿಯಾದರೂ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವುದೇ ಎಂಬ ಕುತೂಹಲ ಜನರಲ್ಲಿದೆ.

ತುರುವೇಕೆರೆ ಭೌಗೋಳಿಕವಾಗಿ ಸೀಮಿತ ಪ್ರದೇಶ ಹೊಂದಿದ್ದರೂ ಕೂಡ ಕಾಯಿಸೀಮೆ ನಾಡು ಎಂದು ಕರೆಯಿಸಿಕೊಳ್ಳುತ್ತದೆ. ಶಿಂಷಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಮತ್ತು ಕೃಷಿ ಚಟುವಟಿಕೆಗೆ ನೀರಿನ ಅಭಾವ ತಲೆದೋರುತ್ತಲೇ ಬಂದಿದೆ. ಹಾಗಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಅನುದಾನ ಘೋಷಿಸಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ತಾಲ್ಲೂಕಿನಲ್ಲಿ ಹೇಮಾವತಿ ನಾಲಾ ನೀರು ಹರಿಯುವುದರಿಂದ ವರ್ಷವಿಡೀ ನೀರು ಕೆರೆಯಲ್ಲಿ ಶೇಖರಣೆಯಾಗುತ್ತದೆ. ಈ ಯೋಜನೆಗೆ ಬಜೆಟ್ನಲ್ಲಿ ಅನುದಾನ ನೀಡಿದಲ್ಲಿ ಮಲ್ಲಾಘಟ್ಟ ಕೆರೆಯಿಂದ ಆನೇಕೆರೆ, ಬಾಣಸಂದ್ರ ಮತ್ತು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಂತೆಯೇ ಮಾಯಸಂದ್ರ ಕೆರೆಯಿಂದ ಸೊರವನಹಳ್ಳಿ, ಮುತ್ತಗದಹಳ್ಳಿ, ಮಾವಿನಕೆರೆ, ವಡವನಘಟ್ಟ, ಭೈತರ ಹೊಸಹಳ್ಳಿ, ಸಾರಿಗೆಹಳ್ಳಿ ಕೆರೆಯಿಂದ ಹುಲ್ಲೇಕೆರೆ, ಸಂಪಿಗೆ ಮತ್ತು ದಂಡಿನಶಿವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಜನರಿಗೆ ಒದಗಿಸಿದಂತಾಗುತ್ತದೆ.

ಕೆರೆಗಳ ಅಭಿವೃದ್ಧಿ: ಎನ್ಬಿಸಿ ಮತ್ತು ಟಿಬಿಸಿ ಹೇಮಾವತಿ ನಾಲೆಗಳಿಂದ ತಾಲ್ಲೂಕಿನ ಮಾಯಸಂದ್ರ, ಕಸಬಾ, ದಂಡಿನಶಿವರ ಮತ್ತು ದಬ್ಬೇಘಟ್ಟ ಹೋಬಳಿ ವ್ಯಾಪ್ತಿ ಸುಮಾರು 45 ಕೆರೆಗಳಿವೆ. ಆದರೆ ಇಲ್ಲಿಯ ತವಕವೂ ಯಾವ ಕೆರೆಗಳ ಹೂಳು ಎತ್ತುವ ಕೆಲಸವಾಗಿಲ್ಲ. ಅಲ್ಲದೆ ಗಿಡಗಂಟಿ ತೆರವು ಸೇರಿದಂತೆ ಕೆರೆ ಅಭಿವೃದ್ಧಿ ಕಾರ್ಯ ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಾಗಾಗಿ ಅನುದಾನ ನೀಡಿದರೆ ಕೆರೆಗಳ ಮರುಪೂರಣ ಆಗಲಿದೆ.

ಕೊಬ್ಬರಿಗೆ ವೈಜ್ಞಾನಿಕ ಧಾರಣೆ ಘೋಷಣೆಯಾಗಲಿ: ತಾಲ್ಲೂಕಿನಲ್ಲಿ 37,525.73 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಇಲ್ಲಿ 2551.75 ಲಕ್ಷ ತೆಂಗಿನಕಾಯಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದ ಪ್ರಧಾನ ವಾಣಿಜ್ಯ ಬೆಳೆಯು ಕೂಡ ಆಗಿದೆ. ತುರುವೇಕೆರೆ ಕ್ಷೇತ್ರದ ಜನರ ಜೀವನವೂ ಕೊಬ್ಬರಿಯೊಂದಿಗೆ ಅನುಸಂಧಾನಗೊಂಡಿದೆ. ಹಾಗಾಗಿ ಸರ್ಕಾರ ಬಜೆಟ್ನಲ್ಲಿ ತೋಟಗಾರಿಕಾ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು. ರೈತರಿಗೆ ಹನಿನೀರಾವರಿ, ಆಧುನಿಕ ಉಪಕರಣಗಳ ಸೌಲಭ್ಯ ಸಿಗುವಂತಾಗಬೇಕು.

ತುರುವೇಕೆರೆ ಮತ್ತು ತಿಪಟೂರಿಗೆ ಅನುಕೂಲವಾಗುವಂತೆ ತೆಂಗು ಸಂಶೋಧನಾ ಕೇಂದ್ರ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಘಟಕ ಸ್ಥಾಪಿಸಿ ಇಲ್ಲಿನ ತೆಂಗು ಮತ್ತು ಕೊಬ್ಬರಿ ಕೃಷಿ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯವಂತೆ ಆಗಬೇಕು ಎಂಬುದು ತೆಂಗು ಬೆಳೆಗಾರ ರೈತರ ಒತ್ತಾಯವಾಗಿದೆ. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ 36 ಕೆರೆಗಳಿಗೆ ಹೇಮಾವತಿ ನಾಲಾ ನೀರು ತುಂಬಿಸಬೇಕು. ಬಾಣಸಂದ್ರ ಗ್ರಾಮದ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸಲು ಸರ್ಕಾರ ಅನುದಾನ ನೀಡಲಿ.

ರಾಗಿಗೆ ಬೆಂಬಲ ಬೆಲೆ ಘೋಷಿಸಿ

ರಾಗಿಯನ್ನು 19,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವರ್ಷಕ್ಕೆ ಸುಮಾರು 2.85 ಲಕ್ಷ ಕ್ವಿಂಟಲ್ ರಾಗಿ ಉತ್ಪಾದನೆಯಾಗಲಿದೆ. ಸದ್ಯಕ್ಕೆ ಕ್ವಿಂಟಲ್ ರಾಗಿಗೆ ₹4,290 ಇದೆ. ಬೆಲೆಗಿಂತ ಖರ್ಚೇ ಹೆಚ್ಚಿದೆ. ಹಾಗಾಗಿ ಸರ್ಕಾರ ಬಜೆಟ್ನಲ್ಲಿ ಕನಿಷ್ಠ ₹6 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲಿನ ಎಪಿಎಂಸಿಯಲ್ಲೇ ಶಾಶ್ವತ ನಾಫೆಡ್ ಕೇಂದ್ರ ತೆರೆಯಬೇಕು. ರಾಗಿ ಉಪ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹ ಧನ ಘೋಷಣೆ ಮಾಡಲಿ.

-ಮಲ್ಲಿಕಾರ್ಜುನ್, ಮಾಚೇನಹಳ್ಳಿ ರೈತ

ತಜ್ಞ ವೈದ್ಯರ ನೇಮಕವಾಗಲಿ

ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಟ್ರಾಮಾ ಸೆಂಟರ್ ಮಾಡಲಿ, ಡಯಾಲಿಸಿಸ್ ಕೇಂದ್ರದಲ್ಲಿ ಈಗಿರುವ 3 ಬೆಡ್ನಿಂದ 6 ಬೆಡ್ವರೆಗೆ ಉನ್ನತೀಕರಿಸಬೇಕು. ತುರ್ತು ತಜ್ಞ ವೈದ್ಯರ ನೇಮಕವಾಗಲಿ. ತಾಲ್ಲೂಕಿನ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾಯಂ ವೈದ್ಯರ ನೀಡಿ, ಮೂಲ ಸೌಕರ್ಯ ಒದಗಿಸಬೇಕು. ತುರುವೇಕೆರೆ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿಗಳಿಗೆ ವಸತಿ ಗೃಹಗಳ ನಿರ್ಮಾಣ, ಎನ್.ಎಚ್ 4 ರಾಷ್ಟ್ರೀಯ ಹೆದ್ದಾರಿಯಿಂದ ಕದಬಳ್ಳಿ ವಯಾ ದಬ್ಬೇಘಟ್ಟ, ತುರುವೇಕೆರೆ, ಬಾಣಸಂದ್ರ ಮತ್ತು ಕೆ.ಬಿ.ಕ್ರಾಸ್ ರಸ್ತೆ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಸಿಗಲಿ.

-ಸಿದ್ದಲಿಂಗೇಗೌಡ, ವಿಶ್ವ ಮಾನವ ಹಕ್ಕುಗಳ ಸಂಸ್ಥಾಪಕ ಹೋರಾಟಗಾರ

ರಸ್ತೆ ಅಭಿವೃದ್ಧಿಗೆ ಹಣ ನೀಡಿ

ಮಲ್ಲಾಘಟ್ಟ ಕೆರೆಯಲ್ಲಿ ಟಿಬಿಎಲ್ ಮಟ್ಟದಲ್ಲಿ ವರ್ಷವಿಡೀ ನೀರು ಇರುವುದರಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಕೆರೆ ಸೇರಿಸಬೇಕು. ವಿಶಾಲ ಕೆರೆಯಾಗಿರುವುದರಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ಸೊಬಗನ್ನು ನೋಡಲು ಜಿಲ್ಲೆ, ಹೊರ ಜಿಲ್ಲೆಗಳಿಂದ ಪ್ರವಾಸಿಗರು ಬರುವುದರಿಂದ ಬೋಟಿಂಗ್ ವ್ಯವಸ್ಥೆ, ಪಾರ್ಕಿಂಗ್ ಮಾಡಿ ಪ್ರವಾಸಿತಾಣವಾಗಿ ಮಾರ್ಪಾಡು ಮಾಡಲಿ. ತಾಲ್ಲೂಕಿನ ಮೂಲಕ ಹಾದು ಹೋಗಿರುವ ಹೇಮಾವತಿ ನಾಲೆ ಮತ್ತು ಉಪ ಕಾಲುವೆಗಳಲ್ಲಿ ನೀರು ಪೋಲಾಗುತ್ತಿದೆ. ಇದನ್ನು ಆಧುನೀಕರಣ ಮಾಡಬೇಕು. ಶಾಲಾ ಕಟ್ಟಡ, ಶೌಚಾಲಯ ಮತ್ತು ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಹಣ ನೀಡಬೇಕು.

-ದೊಡ್ಡಾಘಟ್ಟ ಚಂದ್ರೇಶ್, ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ಅಧ್ಯಕ್ಷ

ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಿ

ತುರುವೇಕೆರೆ ನಾಲ್ಕು ಹೋಬಳಿಗಳಲ್ಲಿ 16 ಸರ್ಕಾರಿ ಪ್ರೌಢಶಾಲೆಗಳಿವೆ. ಅವುಗಳಲ್ಲಿ 153 ಸಹ ಶಿಕ್ಷಕರ ಪೈಕಿ 100 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 53 ವಿವಿಧ ವಿಷಯಗಳ ಶಿಕ್ಷಕರ ಹುದ್ದೆ ಖಾಲಿ ಇವೆ. 24 ಅನುದಾನಿತ ಪ್ರೌಢಶಾಲೆಗಳಲ್ಲಿ 214 ಶಿಕ್ಷಕರ ಪೈಕಿ 103 ಶಿಕ್ಷಕರು ಮಾತ್ರ ಬೋಧನಾ ಕಾರ್ಯದಲ್ಲಿದ್ದು 111 ಶಿಕ್ಷಕರ ಹುದ್ದೆ ಖಾಲಿ ಇವೆ. 2016ರಿಂದ ಇಲ್ಲಿತನಕ ಶಿಕ್ಷಕರ ಹುದ್ದೆ ಖಾಲಿ ಇದ್ದು, ಶಿಕ್ಷಕರ ನೇಮಕಕ್ಕೆ ಅನುದಾನ ಘೋಷಣೆ ಮಾಡಲಿ.

-ನಂರಾಜು ಮುನಿಯೂರು, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ

ಕೆರೆ ಹೂಳು ತೆಗೆಯಿರಿ

ಇಂದು ಪಟ್ಟಣದ ಅನೇಕ ತ್ಯಾಜ್ಯ ಕೆರೆಯ ಒಡಲು ಸೇರಿ ನೀರು ಮಲಿನಗೊಂಡಿದೆ. ಕೆರೆ ಏರಿ ಮತ್ತು ಅದರ ಕೋಡಿಯ ಮುಂಭಾಗ ಗಿಡ ತುಂಬಿಕೊಂಡಿದೆ. ಕೆರೆಯ ಹೂಳನ್ನು ಎತ್ತಿಸಿ ಸಾವಿರಾರು ವರ್ಷಗಳೆ ಸಂದಿವೆ. ಈ ಕೆರೆ ನೀರಿನಿಂದ ಮುನಿಯೂರು, ತಾವರೇಕೆರೆ ಸೇರಿದಂತೆ ಅನೇಕ ಹಳ್ಳಿಗಳ ರೈತರು ಭತ್ತ, ರಾಗಿ ಬೆಳೆ ಬೆಳೆಯುತ್ತಾರೆ. ಕೆರೆಯ ಹೂಳನ್ನು ತೆಗೆಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗಲಿದೆ.

-ಬಿ.ಚೌದ್ರಿ ನಾಗೇಶ್, ತುರುವೇಕೆರೆ ಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷ

ಕಾನೂನು ಕಾಲೇಜು ಬೇಕು

ತುರುವೇಕೆರೆಗೆ ಕಾನೂನು ಕಾಲೇಜು, ಮೆಡಿಕಲ್ ಮತ್ತು ಎಂಜಿನಿಯರ್ ಕಾಲೇಜು ಸ್ಥಾಪನೆಯಾಗಬೇಕೆಂಬ ಕೂಗು ಹಲವು ವರ್ಷಗಳಿಂದ ಇದೆ. ತಾಲ್ಲೂಕಿನ ಸಂಪರ್ಕ ರಸ್ತೆಗಳ ನಿರ್ಮಾಣ, ಇಂದಿರಾಗಾಂಧಿ ಮತ್ತು ಅಂಬೇಡ್ಕರ್ ವಸತಿ ಶಾಲೆಗಳ ಕಟ್ಟಡ, ತೆಂಗು ಟೆಕ್ ಪಾರ್ಕ್ ಹಾಗೂ ತೆಂಗಿನ ಉಪ ಉತ್ಪನ್ನಗಳ ತಯಾರಿಕಾ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಿದರೆ ತುರುವೇಕೆರೆ ಅಭಿವೃದ್ಧಿ ಕಾಣಲಿದೆ.

-ಎಚ್.ಎಲ್.ರಾಘವೇಂದ್ರ, ಉಪನ್ಯಾಸಕ

ಕೊಬ್ಬರಿ ಮತ್ತು ತೆಂಗಿನಕಾಯಿ ಬೆಳೆದ ರೈತರು ತುರುವೇಕೆರೆ ಎಪಿಎಂಸಿಯಲ್ಲೇ ಆನ್ಲೈನ್ ಮೂಲಕ ಮಾರುವಂತೆ ಮಾರುಕಟ್ಟೆ ಉನ್ನತೀಕರಿಸಬೇಕು
ಎನ್.ಆರ್.ಜಯರಾಮ್, ತೆಂಗು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.