ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಬರೆ

Last Updated 31 ಜನವರಿ 2021, 18:04 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಬಿಟ್ಟುರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳ (ಮಹಾನಗರಪಾಲಿಕೆಗಳು, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿಗಳು) ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಹೆಚ್ಚಳ (ದರಪಟ್ಟಿ, ಹೊಸ ಪಟ್ಟಿ) ಮಾಡಿ ಸರ್ಕಾರ ಜನವರಿ 19ರಂದು ಸುಗ್ರೀವಾಜ್ಞೆ ಹೊರಡಿಸಿದೆ. ಇದಕ್ಕಾಗಿ ಕರ್ನಾಟಕಪುರಸಭೆಗಳ ಕಾಯ್ದೆ-1964 ಹಾಗೂ ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ 1976ಕ್ಕೆ ತಿದ್ದುಪಡಿಗಳನ್ನು ಮಾಡಿದೆ.

ಇದೀಗ, ಪುರಸಭೆಗಳ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು,ಸೋಮವಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ನಗರ ಪಾಲಿಕೆಗಳ ತಿದ್ದುಪಡಿ ಅಧಿನಿಯಮದಮಸೂದೆಯು ಮಂಡನೆಯಾಗಲಿದೆ.

ಸ್ಥಳೀಯ ಸಂಸ್ಥೆಗಳ ಬಲವರ್ಧನೆಯ ನೆಪದಲ್ಲಿಸರ್ಕಾರವು ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹೆಚ್ಚಳಮಾಡುತ್ತಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಎಂಬುದೇದೊಡ್ಡ ಗೊಂದಲದ ಗೂಡು. ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರವು2002-03ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಈ ವ್ಯವಸ್ಥೆಪೌರಾಡಳಿತ ಇಲಾಖೆಯಲ್ಲಿನ ಬಹುಪಾಲು ಅಧಿಕಾರಿಗಳಿಗೆ ಇಂದಿಗೂಅರ್ಥವಾಗಿಲ್ಲ. 2005–06ರಲ್ಲಿ, ಆಸ್ತಿಗಳ(ನಿವೇಶನ, ಕಟ್ಟಡಗಳು) ಆ ವರ್ಷದಮಾರ್ಗಸೂಚಿ (ನೋಂದಣಾಧಿಕಾರಿನಿರ್ಧರಿಸಿದ ಮೊತ್ತ) ದರಗಳನ್ನುಆಧಾರವಾಗಿಟ್ಟುಕೊಂಡು ತೆರಿಗೆ ಲೆಕ್ಕಾಚಾರ ಮಾಡುವ ಪದ್ಧತಿ ಜಾರಿಗೆ ಬಂತು.ಇದರ ಪ್ರಕಾರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶವಾರು ನಿವೇಶನಗಳಬೆಲೆ ನಿರ್ಧರಿಸಿ ಪ್ರತಿ ಚದರಡಿಗೆ ಅವುಗಳ ಬೆಲೆಯನ್ನುತಹಶೀಲ್ದಾರ್‌ ಅಧ್ಯಕ್ಷತೆಯ ಸಮಿತಿ ನಿಗದಿಪಡಿಸಬೇಕು.

ಈ ಬೆಲೆಯ ಅರ್ಧದಷ್ಟು ಮೊತ್ತವನ್ನುಆಧಾರವಾಗಿಟ್ಟುಕೊಂಡು ಕಟ್ಟಡದ ಬೆಲೆ ನಿರ್ಧರಿಸಬೇಕು. 3ವರ್ಷದಿಂದ 60 ವರ್ಷ ಹಳೆಯ ಕಟ್ಟಡಗಳಿಗೆ ಸವಕಳಿ ದರನಿಗದಿ ಮಾಡಿದ್ದು, ಕಟ್ಟಡದ ಬೆಲೆಯಲ್ಲಿ ಸವಕಳಿಮೊತ್ತವನ್ನು ಕಳೆಯಬೇಕು. ಇದು ಕಟ್ಟಡದ ಒಟ್ಟು ಮೌಲ್ಯ. ವಸತಿಉದ್ದೇಶದ ಕಟ್ಟಡಗಳಾಗಿದ್ದರೆ ಶೇ 0.3ದಿಂದ 0.6 (₹1 ಲಕ್ಷಮೌಲ್ಯಕ್ಕೆ ₹300ರಿಂದ ₹600), ವಾಣಿಜ್ಯ ಕಟ್ಟಡಗಳಾಗಿದ್ದರೆಶೇ 0.6ರಿಂದ 0.9ರ ಪರಿಮಿತಿಯೊಳಗೆಸ್ಥಳೀಯ ಸಂಸ್ಥೆಗಳು ತೆರಿಗೆ ದರವನ್ನು ನಿಗದಿಮಾಡಬೇಕು.

ಆದರೆ, ಮಾರ್ಗಸೂಚಿ ದರಗಳ ನಿರ್ಧಾರದಲ್ಲಿ ಬಹಳಅವಾಂತರಗಳು ನಡೆದಿವೆ. 20ರಿಂದ 40 ಕಿ.ಮೀ. ಅಂತರದಲ್ಲಿರುವ ಸ್ಥಳೀಯ ಸಂಸ್ಥೆಗಳ ಕಟ್ಟಡಗಳ ತೆರಿಗೆ ದರದಲ್ಲಿ ಭಾರಿ ವ್ಯತ್ಯಾಸಗಳಿದ್ದವು. ಇಲ್ಲಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಮೈಸೂರು ಪಾಲಿಕೆಗಳ ಕಟ್ಟಡಗಳ ಮಾರ್ಗಸೂಚಿ ಬೆಲೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳುಂಟು. ಕಾರವಾರ, ಶಿರಸಿ, ಯಾದಗಿರಿ, ಇಂಡಿ, ಬೀದರ್, ರಾಣೆಬೆನ್ನೂರು, ಹಾವೇರಿ, ಗದಗ, ಚಿಕ್ಕೋಡಿ, ಬಾಗಲಕೋಟೆ,ಗುಳೇದಗುಡ್ಡ, ಜಮಖಂಡಿ, ಇಳಕಲ್ ನಗರಸಭೆಗಳ ದರಗಳು ಮಹಾನಗರ ಪಾಲಿಕೆ ದರಕ್ಕಿಂತಲೂ ಹೆಚ್ಚಾಗಿದ್ದು ಪ್ರತಿ ಚದರಡಿಗೆ ಸುಮಾರು ₹50ರಿಂದ ₹400ರವರೆಗೆ ವ್ಯತ್ಯಾಸಗಳುಂಟು. ಕೆಲವು ಸ್ಥಳೀಯ ಸಂಸ್ಥೆಗಳು ಸರಕಾರದ ಮಾರ್ಗಸೂಚಿಗಳನ್ನೇ ತಪ್ಪಾಗಿ ಅರ್ಥೈಸಿಕೊಂಡು ಮನಸೋ ಇಚ್ಛೆ ತೆರಿಗೆ ವಸೂಲಿ ಮಾಡಿದ ಉದಾಹರಣೆಗಳಿವೆ.

ಮಾರ್ಗಸೂಚಿ ದರಗಳ ನಿಗದಿಯು ಸ್ಥಳೀಯ ಸಂಸ್ಥೆಗಳವರ್ಗೀಕರಣಕ್ಕೆ ಅನುಸಾರವಾಗಿರಬೇಕು ಎನ್ನುವ ಬೇಡಿಕೆಗೆಸರ್ಕಾರ ಸ್ಪಂದಿಸುತ್ತಿಲ್ಲ. ಇದೀಗ ಕಾಯ್ದೆಗಳ ತಿದ್ದುಪಡಿಯಿಂದಾಗಿ 2021-22ನೇ ಆರ್ಥಿಕವರ್ಷದಿಂದ ಅದೇ ವರ್ಷದ ಮಾರ್ಗಸೂಚಿ ದರಗಳ ಮೊತ್ತದಶೇ 25ರಷ್ಟು ಮೊತ್ತವನ್ನು ಆಧರಿಸಿ ತೆರಿಗೆ ಲೆಕ್ಕಾಚಾರಹಾಕಬೇಕು. ತೆರಿಗೆ ದರವನ್ನು ಶೇ 0.2ರಿಂದ ಶೇ 1.5ರವರೆಗೆ (₹1 ಲಕ್ಷಕ್ಕೆ ₹200ರಿಂದ ₹1,500)ಹೆಚ್ಚಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆಪ್ರತಿ ವರ್ಷವೂ ಶೇ 0.3ರಿಂದ 0.5ರವರೆಗೆ ತೆರಿಗೆ ಹೆಚ್ಚಳಮಾಡಬೇಕು ಎಂಬ ನಿಯಮವನ್ನು ತರಲಾಗಿದೆ. ಅಂದರೆ ಪ್ರತಿವರ್ಷವೂ ಹೆಚ್ಚೆಚ್ಚು ತೆರಿಗೆ ಪಾವತಿಸಬೇಕು.

2005-06ರ ಮಾರ್ಗಸೂಚಿ ದರಗಳಿಗೆ ಹೋಲಿಸಿದರೆ 2021-22ರ ಮಾರ್ಗಸೂಚಿ ದರಗಳು (ಇಷ್ಟರಲ್ಲಿಯೇಪ್ರಕಟವಾಗಲಿವೆ) ಎಂಟರಿಂದ ಹತ್ತು ಪಟ್ಟು ಅಧಿಕವಾಗಬಹುದು.ಉದಾಹರಣೆಗೆ ₹220 ಇದ್ದ ದರವು ₹2,100ಕ್ಕೆ ಹೆಚ್ಚಬಹುದು. ಅಂದರೆ ರಾಜ್ಯದಲ್ಲಿನ ವಿವಿಧ ಸ್ಥಳೀಯ ಸಂಸ್ಥೆಗಳವ್ಯಾಪ್ತಿಯಲ್ಲಿ ತೆರಿಗೆ ಪ್ರಮಾಣ ಎರಡರಿಂದ 10 ಪಟ್ಟುಅಧಿಕವಾಗಬಹುದು. ಈಚೆಗಷ್ಟೇ ಪಟ್ಟಣ ಪಂಚಾಯ್ತಿಗಳಾಗಿ ಬಡ್ತಿಪಡೆದ ಸ್ಥಳೀಯ ಸಂಸ್ಥೆಗಳಲ್ಲಂತೂ ತೆರಿಗೆ ಏರಿಕೆ ಅತಿಹೆಚ್ಚಾಗಲಿದೆ.

ಒಟ್ಟಾರೆ ಈ ತೆರಿಗೆ ವ್ಯವಸ್ಥೆ ಜನ ಸ್ನೇಹಿಯಲ್ಲ.ಹಾಗಾಗಿ, ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಈ ಕರಾಳ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ಶಾಸಕರೆಲ್ಲ ಪಕ್ಷಭೇದ ಬದಿಗಿಟ್ಟು ವಿರೋಧಿಸಬೇಕಿದೆ. ಜನಸ್ನೇಹಿ ತೆರಿಗೆ ವ್ಯವಸ್ಥೆ ರೂಪಿಸುವ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖ ಆಗಬೇಕಿದೆ.

(ಲೇಖಕ ಸಾಮಾಜಿಕ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT