ಸೋಮವಾರ, ಫೆಬ್ರವರಿ 17, 2020
28 °C

ಯುವಜನತೆಯ ಸಹಾಯಕ್ಕೆ ಬರದ ಕೇಂದ್ರ ಬಜೆಟ್‌: ರಾಹುಲ್‌ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಹುಶಃ ಸುದೀರ್ಘ ಬಜೆಟ್‌ ಭಾಷಣ ಇದೇ ಆಗಿರಬೇಕು. ಆದರೆ, ಆ ಬಜೆಟ್‌ ಒಳಗೆ ಯಾವುದೇ ಉತ್ತಮ ಅಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟೀಕಿಸಿದರು.

ಸಂಸತ್‌ ಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾರ್ಯತಂತ್ರದ ಕಲ್ಪನೆ ಅಥವಾ ಯಾವುದೇ ಸದೃಢ ಅಂಶವನ್ನು ಈ ಬಜೆಟ್‌ ಹೊಂದಿಲ್ಲ. ಮುಖ್ಯವಾಗಿ ಯುವ ಜನತೆಗೆ ಹೆಚ್ಚು ಅಗತ್ಯವಿರುವ ಉದ್ಯೋಗ ಕುರಿತು ಏನೂ ಹೇಳಿಲ್ಲ’ ಎಂದರು.

‘ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದೆ. ಯುವಜನರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯಾವುದೇ ಗಟ್ಟಿ ಯೋಜನೆ ಈ ಬಜೆಟ್‌ನಲ್ಲಿ ಕಾಣಲಿಲ್ಲ. ಈ ದೇಶದ ಯುವಜನತೆಗೆ ನಿಖರವಾಗಿ ಗೊತ್ತಿದೆ. ಇಲ್ಲಿ ಯಾವುದೇ ಉದ್ಯೋಗಗಳು ಉಳಿದಿಲ್ಲ. ಅವರಿಗೆ ಸಹಾಯವಾಗುವಂತಹುದು ಏನು ನಡೆಯುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು