ದೇಶದ ಆಸ್ತಿಯನ್ನು ಬಂಡವಾಳಶಾಹಿ ಗೆಳೆಯರಿಗೆ ಹಸ್ತಾಂತರಿಸಲು ಮೋದಿ ಹುನ್ನಾರ: ರಾಹುಲ್

ನವದಹೆಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ದೇಶದ ಆಸ್ತಿಯನ್ನು ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಪ್ರಧಾನಿ ನರೇಂದ್ರ ಮೋದಿ ಹುನ್ನಾರವಾಗಿದೆ ಎಂದು ಟೀಕೆ ಮಾಡಿದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜನರ ಕೈಗಳಿಗೆ ಹಣವನ್ನು ನೀಡುವುದನ್ನು ಮೆರೆತುಬಿಡಿ. ನರೇಂದ್ರ ಮೋದಿ ಸರ್ಕಾರ ಭಾರತದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪ ಮಾಡಿದರು.
ಬಜೆಟ್ 2021ರಲ್ಲಿ ಏನೆಲ್ಲ ಇರಲೇಬೇಕು?– ರಾಹುಲ್ ಗಾಂಧಿ ನೀಡಿದ 3 ಅಂಶಗಳು
ಫೆಬ್ರವರಿ 1 ಸೋಮವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಮೊದಲ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ಮಂಡಿಸಿದ್ದರು.
Forget putting cash in the hands of people, Modi Govt plans to handover India's assets to his crony capitalist friends.#Budget2021
— Rahul Gandhi (@RahulGandhi) February 1, 2021
ಈ ಮೊದಲು ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಮೂರು ಅಂಶಗಳ ಸಲಹೆಯನ್ನು ರಾಹುಲ್ ಗಾಂಧಿ ಮುಂದಿಟ್ಟಿದ್ದರು.
ಕಿರು, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯಗಳಿಗೆ (ಎಂಎಸ್ಎಂಇ) ಬೆಂಬಲದ ಮೂಲಕ ಉದ್ಯೋಗವನ್ನು ಸೃಷ್ಟಿಸುವುದು, ಜೀವಗಳ ರಕ್ಷಣೆಗಾಗಿ ಆರೋಗ್ಯ ವಲಯದಲ್ಲಿ ಖರ್ಚು ಹೆಚ್ಚಿಸುವುದು ಮತ್ತು ದೇಶದ ಗಡಿ ರಕ್ಷಣೆಗಾಗಿ ರಕ್ಷಣಾ ವಲಯದಲ್ಲಿ ವೆಚ್ಚು ಹೆಚ್ಚಿಸಬೇಕು ಎಂಬ ಸಲಹೆ ಮಾಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.