2035ರ ವೇಳೆಗೆ ಏನಾಗಬಹುದು?:
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ 2030ರ ವೇಳೆಗೆ 10 ಗ್ರಾಂಗೆ ₹1.8 ಲಕ್ಷದಿಂದ ₹2.25 ಲಕ್ಷದವರೆಗೆ ಮತ್ತು 2035ರ ವೇಳೆಗೆ ₹2.5 ಲಕ್ಷದವರೆಗೆ ಏರಿಕೆ ಕಾಣುವ ಸಾಧ್ಯತೆಯಿದೆ. ಆದರೆ ಬೆಲೆ ಏರಿಕೆಯು, ಹಣದುಬ್ಬರ ಪ್ರಮಾಣ, ವಾರ್ಷಿಕ ರೂಪಾಯಿ ಮೌಲ್ಯ ಕುಸಿತ, ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಭರಾಟೆ ಮುಂತಾದ ಅಂಶಗಳನ್ನು ಅವಲಂಬಿಸಿದೆ.