ಬೆಂಗಳೂರು: ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಶಯದಡಿ ಕರ್ನಾಟಕದಾದ್ಯಂತ ಮತ್ತಷ್ಟು ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ರಾಮ್ರಾಜ್ ಕಾಟನ್ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದು ರಾಮ್ರಾಜ್ ಕಾಟನ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್. ನಾಗರಾಜನ್ ಹೇಳಿದರು.

ನಗರದ ಕೆಂಪೇಗೌಡ ರಸ್ತೆಯಲ್ಲಿ ಭಾನುವಾರ ನಡೆದ ಹೊಸ ಮಳಿಗೆಯ ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಸಂಸ್ಥೆಯು ಸ್ಥಾಪನೆಗೊಂಡು 42 ವರ್ಷಗಳಾಗಿವೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿ ದೇಶದ ವಿವಿಧೆಡೆ ಮತ್ತು ವಿದೇಶಗಳಲ್ಲೂ ಮಳಿಗೆ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

ಇಲ್ಲಿಯವರೆಗೆ ಸಂಸ್ಥೆಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ಕಲ್ಪಿಸಲಾಗಿದೆ. ಪರೋಕ್ಷವಾಗಿ ಇಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗ ಸಿಕ್ಕಿದೆ. ಪ್ರಸ್ತುತ ದೇಶದಾದ್ಯಂತ 350 ಮಳಿಗೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ 65 ಮಳಿಗೆಗಳಿವೆ ಎಂದು ವಿವರಿಸಿದರು.

ಸಂಸ್ಥೆಯಿಂದ ತಯಾರಿಸುವ ಉಡುಪುಗಳನ್ನು ಶ್ರೀಲಂಕಾ, ಸಿಂಗಪುರ, ಮಲೇಷ್ಯಾ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು.

ರಾಮ್ರಾಜ್ ದೇಶದ ನಂಬಿಕೆಯ ಬ್ರ್ಯಾಂಡ್ ಆಗಿದೆ. ಮಹಾತ್ಮಗಾಂಧಿ ಅವರು ಧೋತಿ ಧರಿಸುವ ಮೂಲಕ ಸ್ವದೇಶಿ ಉಡುಪಿನ ಮಹತ್ವ ಸಾರಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ದ್ಯೋತಕ ಆಗಿದೆ. ಈ ಪರಂಪರೆಯನ್ನು ಬೆಳೆಸಲು ಸಂಸ್ಥೆಯು ಒತ್ತು ನೀಡುತ್ತಿದೆ ಎಂದು ತಿಳಿಸಿದರು.

ಈ ಬಾರಿಯ ಯುಗಾದಿ ಹಬ್ಬಕ್ಕೆ ಆಕರ್ಷಕ ಧೋತಿಗಳು ಹಾಗೂ ಹಲವು ಬಗೆಯ ಉಡುಪುಗಳಿವೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಆನ್ಲೈನ್ನಲ್ಲೂ ಖರೀದಿಸಬಹುದಾಗಿದೆ ಎಂದು ಹೇಳಿದರು.

ಮಳಿಗೆ ಉದ್ಘಾಟಿಸಿದ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೇಶೀಯ ಸಂಸ್ಕೃತಿಯು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ರಾಮ್ರಾಜ್ ಕೊಡುಗೆಯು ದೊಡ್ಡದಿದೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.