ಹಾರ್ಲೆ ಡೇವಿಡ್‌ಸನ್‌ಗೆ ಶೇ 50 ಸುಂಕ: ‌ಟ್ರಂಪ್‌ ಅಸಮಾಧಾನ

ಮಂಗಳವಾರ, ಜೂನ್ 25, 2019
22 °C

ಹಾರ್ಲೆ ಡೇವಿಡ್‌ಸನ್‌ಗೆ ಶೇ 50 ಸುಂಕ: ‌ಟ್ರಂಪ್‌ ಅಸಮಾಧಾನ

Published:
Updated:

ವಾಷಿಂಗ್ಟನ್‌: ‘ಹಾರ್ಲೆ ಡೇವಿಡ್‌ಸನ್‌ ಮೋಟರ್‌ಸೈಕಲ್‌ಗೆ ಭಾರತ ವಿಧಿಸುತ್ತಿರುವ ಶೇ 50ರಷ್ಟು ಆಮದು ಸುಂಕ ಸ್ವೀಕಾರಾರ್ಹವಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಉತ್ತಮ ಸ್ನೇಹಿತರು. ಆದರೆ ಅವರೂ ನಮ್ಮಲ್ಲಿ ತಯಾರಾಗುವ ಮೋಟರ್‌ಸೈಕಲ್‌ಗೆ ಶೇ 100ರಷ್ಟು ತೆರಿಗೆ ವಿಧಿಸುತ್ತಿ
ದ್ದರು. ಒಂದು ಪೋನ್‌ ಕರೆ ಮಾಡಿದ ಬಳಿಕ ಮೋದಿ ಅವರು ಆಮದು ಸುಂಕವನ್ನು ಶೇ 50ಕ್ಕೆ ತಗ್ಗಿಸಿದ್ದಾರೆ. ಇದನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವು ಶೇ 50ರಷ್ಟು ಪಾವತಿಸುತ್ತಿದ್ದರೆ ಅದಕ್ಕೆ ಪ್ರತಿಯಾಗಿ ನಮಗೆ ಏನೂ ಲಾಭ ಸಿಗುತ್ತಿಲ್ಲ. ಮೋಟರ್‌ಸೈಕಲ್‌ಗಳ ಮೇಲಿನ ಆಮದು ಸುಂಕ ಸಮಸ್ಯೆ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ’ ಎಂದು ಹೇಳಿದ್ದಾರೆ.

‘ನಾವು ಆರ್ಥಿಕವಾಗಿ ಪ್ರಭಲರ
ಲ್ಲದೇ ಹೋಗಿದ್ದರೆ, ನಮ್ಮಲ್ಲಿ ಸಂಪನ್ಮೂಲ
ಗಳು ಇಲ್ಲದೇ ಇದ್ದಿದ್ದರೆ ಯಾರೂ ನಮ್ಮನ್ನು ಪರಿಗಣಿಸುತ್ತಿರಲಿಲ್ಲ. ಬೇರೆ
ದೇಶಗಳ ಪಾಲಿಗೆ ಅಮೆರಿಕ ಖಜಾನೆ
ಯಾಗಿದೆ. ಹಾಗಾಗಿ ಎಲ್ಲರೂ ದೋಚಲು ಹವಣಿಸುತ್ತಿದ್ದಾರೆ. ಬಹಳ ಕಾಲದಿಂದಲೂ ಇದನ್ನೇ ಮುಂದು
ವರಿಸಿಕೊಂಡು ಬರುತ್ತಿದ್ದಾರೆ’ ಎಂದು ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !