ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 101.9ರಷ್ಟು ಹೊಸ ವಿನ್ಯಾಸದ ₹500 ನಕಲಿ ನೋಟುಗಳ ಸಂಖ್ಯೆ ಹೆಚ್ಚಳ

Last Updated 31 ಮೇ 2022, 4:22 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದು, ಈ ಪೈಕಿ ಶೇ 101.9ರಷ್ಟು ಹೊಸ ವಿನ್ಯಾಸದ ₹500 ಮುಖಬೆಲೆಯ ನಕಲಿ ನೋಟುಗಳು ಏರಿಕೆಯಾಗಿವೆ.

₹2,000 ಮುಖಬೆಲೆಯ ನಕಲಿ ನೋಟು ಪತ್ತೆಯಲ್ಲಿ ಶೇ 54.6ರಷ್ಟು ಏರಿಕೆಯಾಗಿದೆ. ಈ ನೋಟುಗಳ ಚಲಾವಣೆ ಪ್ರಮಾಣವೂ ತೀರ ಇಳಿಕೆಯಾಗಿದೆ. ಹೊಸ ವಿನ್ಯಾಸದ ₹200 ಮುಖಬೆಲೆಯ ನಕಲಿ ನೋಟು ಪತ್ತೆಯಲ್ಲಿ ಶೇ 11.7ರಷ್ಟು ಏರಿಕೆಯಾಗಿದೆ.

ಈ ನಡುವೆ ₹50 ಮತ್ತು ₹100 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಇಳಿಕೆಯಾಗಿದೆ. ಕ್ರಮವಾಗಿ ಶೇ 28.7 ಹಾಗೂ ಶೇ 16.7ರಷ್ಟು ಕಡಿಮೆಯಾಗಿವೆ.

ನಕಲಿ ನೋಟುಗಳ ಪತ್ತೆ: ಏರಿಕೆ ಮತ್ತು ಇಳಿಕೆಯ ಅಂಕಿಅಂಶ
ನಕಲಿ ನೋಟುಗಳ ಪತ್ತೆ: ಏರಿಕೆ ಮತ್ತು ಇಳಿಕೆಯ ಅಂಕಿಅಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT