ನವದೆಹಲಿ: ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ₹95,522 ಕೋಟಿ ಸೇರ್ಪಡೆಯಾಗಿದೆ.
ರಿಲಯನ್ಸ್ ಇಂಡಸ್ಟ್ರಿಸ್ ಎಂ–ಕ್ಯಾಪ್‌ಗೆ ₹29,634 ಕೋಟಿ ಸೇರ್ಪಡೆಯಾಗಿದ್ದು, ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹20.29 ಲಕ್ಷ ಕೋಟಿಗೆ ತಲುಪಿದೆ.
ಟಿಸಿಎಸ್ ₹17,167 ಕೋಟಿ, ಹಿಂದುಸ್ತಾನ್ ಯೂನಿಲಿವರ್ ₹15,225 ಕೋಟಿ, ಭಾರ್ತಿ ಏರ್‌ಟೆಲ್ ₹12,268 ಕೋಟಿ, ಐಸಿಐಸಿಐ ಬ್ಯಾಂಕ್ ₹11,524 ಕೋಟಿ, ಐಟಿಸಿ ₹3,965 ಕೋಟಿ, ಎಸ್‌ಬಿಐ ₹2,498 ಕೋಟಿ, ಎಲ್‌ಐಸಿ ₹1,992 ಕೋಟಿ ಮತ್ತು ಇನ್ಫೊಸಿಸ್ ಮಾರುಕಟ್ಟೆ ಮೌಲ್ಯಕ್ಕೆ ₹1,245 ಕೋಟಿ ಸೇರ್ಪಡೆಯಾಗಿದೆ.