ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಸಾವಿರ ಮುಖಬೆಲೆಯ ಶೇ 97.69ರಷ್ಟು ನೋಟು ವಾಪಸ್‌

Published 1 ಏಪ್ರಿಲ್ 2024, 15:52 IST
Last Updated 1 ಏಪ್ರಿಲ್ 2024, 15:52 IST
ಅಕ್ಷರ ಗಾತ್ರ

ಮುಂಬೈ: ₹2 ಸಾವಿರ ಮುಖಬೆಲೆಯ ಶೇ 97.69ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿದ್ದು, ಇನ್ನೂ ₹8,202 ಕೋಟಿ ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ತಿಳಿಸಿದೆ.

ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ 2023ರ ಮೇ 19ರಂದು ಆರ್‌ಬಿಐ ಘೋಷಿಸಿತ್ತು. 

ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಹಾಗೂ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವುದಕ್ಕೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮೂಲಕವೂ ಈ ಪ್ರಾದೇಶಿಕ ಕಚೇರಿಗಳಿಗೆ ನೋಟುಗಳನ್ನು ಕಳುಹಿಸಿ ಬದಲಾಯಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT