ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ತೀವ್ರ ಸಂಕಷ್ಟದ ಸಮಯವಿದು: ಅಭಿಜಿತ್‌‌ ಬ್ಯಾನರ್ಜಿ

ಭಾರತದ ಆರ್ಥಿಕತೆ 2019ರ ಹಂತಕ್ಕಿಂತ ಕೆಳಗಿಳಿದಿದೆ ಎಂದ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ
Last Updated 5 ಡಿಸೆಂಬರ್ 2021, 7:25 IST
ಅಕ್ಷರ ಗಾತ್ರ

ಅಹಮದಾಬಾದ್‌: ಭಾರತೀಯರು ತೀವ್ರ ಸಂಕಷ್ಟದಲ್ಲಿದ್ದಾರೆ ಮತ್ತು ಆರ್ಥಿಕತೆ ಈಗಲೂ 2019ರ ಹಂತಕ್ಕಿಂತ ಕೆಳಗಿದೆ. ಸಣ್ಣ ವ್ಯಾಪಾರಿಗಳು ಮತ್ತಷ್ಟು ಕುಸಿದಿದ್ದಾರೆ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಗುಜರಾತ್‌ ಅಹಮದಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಶನಿವಾರ ರಾತ್ರಿ ನಡೆಸಿದ ಆನ್‌ಲೈನ್‌ ಸಂವಾದದಲ್ಲಿ ಅಭಿಜಿತ್‌ ಬ್ಯಾನರ್ಜಿ ಮಾತನಾಡಿದರು. ವಿವಿಯ 11ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಮೆರಿಕದಿಂದಲೇ ಭಾಗವಹಿಸಿದ್ದರು.

ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭ ಗಮನಿಸಿದ ಅಂಶಗಳನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು. 'ಸಮಾಜಕ್ಕೆ ನಿಮ್ಮ (ವಿದ್ಯಾರ್ಥಿಗಳ) ಕೊಡುಗೆ ಬೇಕಿದೆ. ಭಾರತದಲ್ಲೀಗ ತೀವ್ರ ಸಂಕಷ್ಟದ ಸ್ಥಿತಿಯಿದೆ. ನಾನು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಕೆಲವು ಸಮಯ ಕಳೆದಿದ್ದೆ. ಅಭಿವೃದ್ಧಿಯ ಕನಸು ಕಟ್ಟಿಕೊಂಡವರು ಸಂಕಷ್ಟದಲ್ಲಿದ್ದಾರೆ. ಸಣ್ಣ ವ್ಯಾಪಾರಿಗಳು ಮತ್ತಷ್ಟು ಸಣ್ಣವರಾಗಿದ್ದಾರೆ' ಎಂದರು.

'ನಾವೀಗ ತೀವ್ರ ಸಂಕಷ್ಟದಲ್ಲಿದ್ದೇವೆ ಎಂದೆನಿಸುತ್ತಿದೆ. 2019ರಲ್ಲಿದ್ದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಅದಕ್ಕಿಂತ ಕೆಳಮಟ್ಟದಲ್ಲಿದ್ದೇವೆ. ಎಷ್ಟು ಕೆಳ ಮಟ್ಟಕ್ಕೆ ಇಳಿದಿದ್ದೇವೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ತೀವ್ರ ಕುಸಿತ ಕಂಡಿದ್ದೇವೆ. ಇದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ನಾನು ವಿಚಾರವನ್ನು ಹೇಳುತ್ತಿದ್ದೇನೆ ಅಷ್ಟೇ' ಎಂದು ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT