ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ನೀಡಿದ ಸಾಲ ಎನ್‌ಪಿಎ!

Last Updated 28 ಮಾರ್ಚ್ 2022, 11:45 IST
ಅಕ್ಷರ ಗಾತ್ರ

ನವದೆಹಲಿ: ₹ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಾಲ ಹೊಂದಿರುವ 5,231 ಕಂಪನಿಗಳ ಖಾತೆಗಳನ್ನು ‘ಅನುತ್ಪಾದಕ ಸಾಲ’ (ಎನ್‌ಪಿಎ) ಎಂದು ವರ್ಗೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ. ಇದು 2021ರ ಡಿಸೆಂಬರ್ 31ರವರೆಗಿನ ಮಾಹಿತಿ.

ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಅಖಿಲ ಭಾರತ ಹಣಕಾಸು ಸಂಸ್ಥೆಗಳು ₹ 5 ಕೋಟಿಗಿಂತ ಹೆಚ್ಚು ಮೊತ್ತ ಸಾಲ ಪಡೆದಿರುವವರ ಕೆಲವು ಹಣಕಾಸಿನ ವಿವರಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸಲ್ಲಿಸುತ್ತವೆ. 2014ರ ಜೂನ್‌ ತ್ರೈಮಾಸಿಕದ ನಂತರದಲ್ಲಿ ಈ ಪದ್ಧತಿ ಶುರುವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.

ಬ್ಯಾಂಕ್‌ಗಳಿಂದ ಅಗತ್ಯ ಪ್ರಮಾಣದಲ್ಲಿ ಸಾಲ ಸಿಗದೆ ಇದ್ದುದಕ್ಕೆ, ಬಡ್ಡಿ ದರ ಹೆಚ್ಚಾಗಿದ್ದಕ್ಕೆ, ಅನಧಿಕೃತ ಸಾಲ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಜನ ಆತ್ಮಹತ್ಯೆ ಮಾಡಿಕೊಂಡ ವಿವರಗಳು ಇವೆಯೇ ಎಂಬ ಪ್ರಶ್ನೆಗೆ ಸಚಿವರು, ‘ದಿವಾಳಿ ಅಥವಾ ಸಾಲ ಹೆಚ್ಚಾದ ಕಾರಣದಿಂದಾಗಿ 2020ರಲ್ಲಿ ಒಟ್ಟು 5,213 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ’ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ನೀಡಿದ ಮಾಹಿತಿ ಆಧರಿಸಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT