ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸರ್‌: ಬೆಂಗಳೂರಿನಲ್ಲಿ ಎಕ್ಸ್‌ಪೀರಿಯನ್ಸ್‌ ಸೆಂಟರ್‌

Last Updated 26 ಫೆಬ್ರುವರಿ 2021, 17:36 IST
ಅಕ್ಷರ ಗಾತ್ರ

ಬೆಂಗಳೂರು: ವಹಿವಾಟು ವಿಸ್ತರಣೆಯ ಅಂಗವಾಗಿ ಪ್ರಸಕ್ತ ಸಾಲಿನಲ್ಲಿ ದೇಶದಾದ್ಯಂತ 200 ಬ್ರ್ಯಾಂಡ್‌ ಮಳಿಗೆಗಳನ್ನು ಆರಂಭಿಸಲು ಏಸರ್‌ ಇಂಡಿಯಾ ಉದ್ದೇಶಿಸಿದೆ.

‘ಡಿಜಿಟಲ್ ಜೀವನಶೈಲಿಗೆ ನೆರವಾಗುವ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಕಂಪನಿಯು ಗ್ರಾಹಕರಿಗೆ ವಿಶಿಷ್ಟ ಬಗೆಯ ಖರೀದಿ ಅನುಭವ ನೀಡಲು ದೇಶದ ಪ್ರಮುಖ ನಗರಗಳಲ್ಲಿ ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳನ್ನು ಆರಂಭಿಸಲಿದೆ. ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಕೆಲ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿಯೂ ಕಂಪನಿಯ ಸ್ಥಳೀಯ ವಹಿವಾಟು ಪಾಲುದಾರರ ಸಹಯೋಗದಲ್ಲಿ ಇಂತಹ ವಿಶಿಷ್ಟ ಬಗೆಯ ಮಳಿಗೆಗಳನ್ನು ಈ ವರ್ಷಾಂತ್ಯದ ಒಳಗೆ ಆರಂಭಿಸಲಾಗುವುದು’ ಎಂದು ಏಸರ್‌ ಇಂಡಿಯಾದ ಮುಖ್ಯ ವಹಿವಾಟು ಅಧಿಕಾರಿ (ಸಿಬಿಒ) ಸುಧೀರ್‌ ಗೋಯೆಲ್‌ ಅವರು ತಿಳಿಸಿದ್ದಾರೆ.

ಡೆಸ್ಕಟಾಪ್‌, ಲ್ಯಾಪ್‌ಟಾಪ್‌, ನೋಟ್‌ಬುಕ್‌, ಮಾನಿಟರ್‌, ಗೇಮಿಂಗ್‌ ಲ್ಯಾಪ್‌ಟಾಪ್‌ ಮತ್ತು ಹೊಸ ಜೀವನಶೈಲಿಗೆ ನೆರವಾಗುವ ವೈವಿಧ್ಯಮಯ ಗ್ಯಾಜೆಟ್‌ಗಳನ್ನು ತಯಾರಿಸುವ ಏಸರ್‌ ಇಂಡಿಯಾ ಕಂಪನಿಯು ನಗರದ ಕೋರಮಂಗಲದಲ್ಲಿ ದೇಶದಲ್ಲಿಯೇ ಅತಿದೊಡ್ಡದಾದ ಎಕ್ಸ್‌ಪೀರಿಯನ್ಸ್‌ ಸ್ಟೋರ್‌ಗೆ ಶುಕ್ರವಾರ ಚಾಲನೆ ನೀಡಿದೆ.

ಕಂಪನಿಯ ಬ್ರ್ಯಾಂಡ್ ಮಳಿಗೆಯಾಗಿರುವ ಈ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ, ಗ್ರಾಹಕರು ಏಸರ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಭೌತಿಕವಾಗಿ ಸ್ಪರ್ಶಿಸಿ, ಬಳಸಿ ನೋಡಿ ಖರೀದಿ ನಿರ್ಧಾರಕ್ಕೆ ಬರಬಹುದಾಗಿದೆ. ಇಲ್ಲಿ ಒಂದೇ ಚಾವಣಿಯಡಿ ಏಸರ್‌ ಬ್ರ್ಯಾಂಡ್‌ನ ಎಲ್ಲ ಉತ್ಪನ್ನಗಳು ದೊರೆಯಲಿವೆ. ಪ್ರೊಜೆಕ್ಟರ್‌ನಿಂದ ಹಿಡಿದು ಕಂಪನಿಯು ಹೊಸದಾಗಿ ಪರಿಚಯಿಸಿರುವ ಆಡಿಯೊ ಉತ್ಪನ್ನಗಳೂ ಇಲ್ಲಿ ಲಭ್ಯ ಇವೆ. ಗೇಮಿಂಗ್‌ ಉತ್ಸಾಹಿಗಳಿಗೆ, ವೈವಿಧ್ಯಮಯ ಲ್ಯಾಪ್‌ಟಾಪ್‌ಗಳಿಗೆ ಪ್ರತ್ಯೇಕ ವಲಯ ಇಲ್ಲಿದೆ. 8 ಇಂಚಿನ ಲ್ಯಾಪ್‌ಟಾಪ್‌ನಿಂದ ಹಿಡಿದು ಗೇಮಿಂಗ್‌ ಲ್ಯಾಪ್‌ಟಾಪ್‌ವರೆಗೆ ಕಂಪನಿಯ ಸಂಪೂರ್ಣ ಶ್ರೇಣಿಯ ಉತ್ಪನ್ನಗಳ ನೇರ ಅನುಭವ ಪಡೆಯಲು ಇಲ್ಲಿ ಗ್ರಾಹಕರಿಗೆ ಅವಕಾಶ ಇದೆ.

ಕಂಪನಿಯ ಉತ್ಪನ್ನಗಳ ಶ್ರೇಣಿಗೆ ಈಗ ಏರ್‌ ಪ್ಯೂರಿಫೈಯರ್‌ಗಳೂ ಸೇರ್ಪಡೆಯಾಗಿವೆ. ವಿದ್ಯಾರ್ಥಿಗಳೂ ಸೇರಿದಂತೆ ವಿಭಿನ್ನ ವಯೋಮಾನದವರ, ಡಿಜಿಟಲ್‌ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಸಾಮರ್ಥ್ಯದ ಉತ್ಪನ್ನಗಳನ್ನು ಏಸರ್ ತಯಾರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT