ನವದೆಹಲಿ: ಭಾರತವು ಕೋವಿಡ್ ಪರಿಸ್ಥಿತಿ ನಿಭಾಯಿಸಿದ ಬಗೆಯನ್ನು ಸಮರ್ಥಿಸಿಕೊಂಡಿರುವ ಉದ್ಯಮಿ ಗೌತಮ್ ಅದಾನಿ, ‘ಮಾಧ್ಯಮ ವರದಿಗಳು ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಪಕ್ಷಪಾತಿಯಾಗಿ ಇರಬಾರದು, ದೇಶದ ಘನತೆಗೆ ಕುಂದುತರುವಂತೆಯೂ ಇರಬಾರದು’ ಎಂದು ಹೇಳಿದ್ದಾರೆ.
ಯುರೋಪ್, ಉತ್ತರ ಅಮೆರಿಕಾ ಮತ್ತು ಓಷ್ಯಾನಿಯಾಗಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶವು ಕೋವಿಡ್ ಬಿಕ್ಕಟ್ಟನ್ನು ಎಷ್ಟು ಸಮರ್ಥವಾಗಿ ನಿಭಾಯಿಸಿತು ಎಂಬುದನ್ನು ತಪ್ಪು ಹುಡುಕುವ ಭರದಲ್ಲಿ ಅಲಕ್ಷಿಸಲಾಯಿತು ಎಂದು ಅವರು ಹೇಳಿದ್ದಾರೆ.
‘ಕೆಲವು ವಿಚಾರಗಳಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬಹುದಿತ್ತೇನೋ. ಆದರೆ ಈ ದೇಶದ ಜನಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ, ಕೋವಿಡ್ ಸಾಂಕ್ರಾಮಿಕವು ಭಾರತಕ್ಕೆ ತಂದಿತ್ತ ಸವಾಲು ಇತರ ದೇಶಗಳಿಗೆ ಎದುರಾದ ಸವಾಲಿಗಿಂತ ದೊಡ್ಡದಾಗಿತ್ತು’ ಎಂದು ಅದಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದಾನಿ ಅವರು ತಮ್ಮ ಸಮೂಹದ ಮಾಧ್ಯಮ ಚಟುವಟಿಕೆಗಳನ್ನು ನಿಭಾಯಿಸಲು ಹಿರಿಯ ಪತ್ರಕರ್ತ ಸಂಜಯ್ ಪುಗಾಲಿಯಾ ಅವರನ್ನು ಈಚೆಗೆ ನೇಮಕ ಮಾಡಿಕೊಂಡಿದ್ದಾರೆ. ಅದಾನಿ ಸಮೂಹವು ಟಿ.ವಿ. ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಬಹುದು ಎಂಬ ಊಹಾಪೋಹಗಳು ಇದರಿಂದಾಗಿ ಸೃಷ್ಟಿಯಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.