ನವದೆಹಲಿ: ನಾಗರಿಕ ವಿಮಾನಗಳ ಬಿಡಿಭಾಗಗಳನ್ನು ಜೋಡಿಸಿ, ವಿಮಾನ ತಯಾರಿಸುವ ಘಟಕವನ್ನು (ಎಫ್ಎಎಲ್) ದೇಶದಲ್ಲಿ ಸ್ಥಾಪಿಸುವ ಕುರಿತು ಅದಾನಿ ಸಮೂಹ ಮತ್ತು ಬ್ರೆಜಿಲ್ನ ವಿಮಾನಯಾನ ಕಂಪನಿ ಎಂಬ್ರೇರ್ ಮುಂದಿನ ವಾರ ಘೋಷಣೆ ಮಾಡಲಿವೆ.

ಕೇಂದ್ರ ವಿಮಾನಯಾನ ಸಚಿವ ಕೆ.ರಾಮ್ಮೋಹನ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಮತ್ತು ಎಂಬ್ರೇರ್ ಕಂಪನಿಯ ಪ್ರತಿನಿಧಿಗಳು ಜನವರಿ 27ರಂದು ನವದೆಹಲಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಿದ್ದಾರೆ.

ದೇಶದಲ್ಲಿ ಎಂಬ್ರೇರ್ ಕಂಪನಿಯು ಜೆಟ್ ವಿಮಾನಗಳನ್ನು ತಯಾರಿಸಲು, ಅಂತಿಮ ಜೋಡಣಾ ಘಟಕವನ್ನು ಸ್ಥಾಪಿಸುವ ಯೋಜನೆ ಇದಾಗಿದೆ. ಎಂಬ್ರೇರ್ 150 ಆಸನದವರೆಗಿನ ವಾಣಿಜ್ಯ ವಿಮಾನಗಳನ್ನು ತಯಾರಿಸುತ್ತದೆ.

ಎಫ್ಎಎಲ್ ಕಾರ್ಯರೂಪಕ್ಕೆ ಬಂದ ಬಳಿಕ, ಅದಾನಿ ಸಮೂಹವು ವಿಮಾನದ ಬಿಡಿಭಾಗಗಳ ತಯಾರಿಕೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಮೂಲವೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.