ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಟಿವಿ ಸ್ವಾಧೀನಕ್ಕೆ ಸಜ್ಜಾದ ಅದಾನಿ

Last Updated 23 ಆಗಸ್ಟ್ 2022, 16:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿಗಳಲ್ಲಿ ಒಂದಾಗಿರುವ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್‌ನ (ಎನ್‌ಡಿಟಿವಿ) ಬಹುಪಾಲು ಷೇರುಗಳನ್ನು ಖರೀದಿಸುತ್ತಿರುವುದಾಗಿ ಗೌತಮ್ ಅದಾನಿ ಒಡೆತನದ ಸಮೂಹವು ಮಂಗಳವಾರ ಹೇಳಿದೆ.

ಅದಾನಿ ಸಮೂಹವು ವಿಸ್ತರಣಾ ಯೋಜನೆಯ ಭಾಗವಾಗಿ ಮಾಧ್ಯಮಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅದಾನಿ ಸಮೂಹದ ಅದಾನಿ ಮೀಡಿಯಾ ವೆಂಚರ್ಸ್‌ ಲಿಮಿಟೆಡ್‌ (ಎಎಂವಿಎಲ್‌), ವಿಶ್ವಪ್ರಧಾನ್ ಕಮರ್ಷಿಯಲ್‌ ಪ್ರೈ.ಲಿ. ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು. ಈ ಕಂಪನಿಯು ಎನ್‌ಡಿಟಿವಿಗೆ ಸಾಲ ನೀಡಿತ್ತು. ಅದಾನಿ ಸಮೂಹವು, ಈ ಕಂಪನಿ ನೀಡಿದ್ದ ಸಾಲವನ್ನು ಎನ್‌ಡಿಟಿವಿಯ ಶೇ 29.18ರಷ್ಟು ಷೇರುಗಳನ್ನಾಗಿ ಪರಿವರ್ತನೆ ಮಾಡುವ ಅವಕಾಶವನ್ನು ಬಳಸಿಕೊಂಡಿದೆ.

ಇದಾದ ನಂತರ ಅದಾನಿ ಸಮೂಹವು, ಎನ್‌ಡಿಟಿವಿಯ ಇನ್ನೂ ಶೇ 26ರಷ್ಟು ಷೇರುಗಳನ್ನು ಒಟ್ಟು ₹ 493 ಕೋಟಿಗೆ ಮುಕ್ತವಾಗಿ ಖರೀದಿಸುವ ಪ್ರಕಟಣೆ ಹೊರಡಿಸಿದೆ.

ಅದಾನಿ ಸಮೂಹದ ಮಾಧ್ಯಮ ಕಂಪನಿಯಾಗಿರುವ ಅದಾನಿ ಮೀಡಿಯಾ ವೆಂಚರ್ಸ್‌ ಲಿಮಿಟೆಡ್‌ ಕಳೆದ ವರ್ಷದಲ್ಲಿ ಕ್ವಿಂಟಿಲಿಯನ್ ಬ್ಯುಸಿನೆಸ್ ಮೀಡಿಯಾ ಪ್ರೈ.ಲಿ. ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಎನ್‌ಡಿಟಿವಿ ಕಂಪನಿಯು ಮೂರು ಸುದ್ದಿ ವಾಹಿನಿಗಳನ್ನು ಮುನ್ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT