ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅದಾನಿ ತೆಕ್ಕೆಗೆ ಪೆನ್ನಾ ಸಿಮೆಂಟ್‌

Published 13 ಜೂನ್ 2024, 13:59 IST
Last Updated 13 ಜೂನ್ 2024, 13:59 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್‌ ಕಂಪನಿಯು, ಆಂಧ್ರಪ್ರದೇಶದ ಪೆನ್ನಾ ಸಿಮೆಂಟ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅನ್ನು (ಪಿಸಿಐಎಲ್) ₹10,422 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಪಿಸಿಐಎಲ್‌ ವಾರ್ಷಿಕವಾಗಿ 1.4 ಕೋಟಿ ಟನ್‌ ಸಿಮೆಂಟ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಸ್ವಾಧೀನದಿಂದಾಗಿ ಅದಾನಿ ಸಮೂಹದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 8.9 ಕೋಟಿ ಟನ್‌ಗೆ ಹೆಚ್ಚಳವಾಗಲಿದೆ.

ಪಿಸಿಐಎಲ್‌ನ ಪ್ರವರ್ತಕ ಪಿ. ಪ್ರತಾಪ್‌ ರೆಡ್ಡಿ ಮತ್ತು ಅವರ ಕುಟುಂಬದ ಒಡೆತನದಲ್ಲಿರುವ ಕಂಪನಿಯ ಶೇ 100ರಷ್ಟು ಷೇರುಗಳನ್ನು ಖರೀದಿಸಲಾಗುವುದು.  ಈ ಸ್ವಾಧೀನದಿಂದಾಗಿ ದೇಶದ ಸಿಮೆಂಟ್‌ ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಪಾಲು ಶೇ 2ರಷ್ಟು ಮತ್ತು ದಕ್ಷಿಣ ಭಾರತದ ಮಟ್ಟದಲ್ಲಿ ಶೇ 8ರಷ್ಟು ಇರಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT