ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗುತ್ತಿದೆ ಸಾಲದ ಪ್ರಮಾಣ: ಗೌತಮ್ ಅದಾನಿ

Last Updated 6 ಸೆಪ್ಟೆಂಬರ್ 2022, 14:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು, ನಿವ್ವಳ ಸಾಲ ಹಾಗೂ ಕಾರ್ಯಾಚರಣೆ ಲಾಭದ ಅನುಪಾತ ಸುಧಾರಿಸಿದೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೊತ್ತವು ಶೇಕಡ 50ಕ್ಕಿಂತ ಕಡಿಮೆ ಆಗಿದೆ ಎಂದು ಹೇಳಿದೆ.

ಸಮೂಹವು ಹೆಚ್ಚು ಸಾಲದಲ್ಲಿದೆ ಎಂದು ಕ್ರೆಡಿಟ್‌ಸೈಟ್ಸ್ ಸಂಸ್ಥೆಯ ವರದಿಯೊಂದು ಈಚೆಗೆ ಹೇಳಿತ್ತು. ಈ ವರದಿಗೆ ಸಮೂಹವು 15 ಪುಟಗಳ ಪ್ರತಿಕ್ರಿಯೆ ನೀಡಿದೆ. ಸಮೂಹದ ಕಂಪನಿಗಳು ನಿರಂತರವಾಗಿ ಸಾಲವನ್ನು ಕಡಿಮೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದೆ.

‘ಕಂಪನಿಗಳ ವಹಿವಾಟು ಸರಳವೂ ಬಲಿಷ್ಠವೂ ಆದ ನೆಲೆಯಲ್ಲಿ ನಡೆಯುತ್ತಿದೆ’ ಎಂದು ಅದು ಹೇಳಿದೆ. ಈ ವರ್ಷದ ಮಾರ್ಚ್‌ ವೇಳೆಗೆ ಸಮೂಹದ ಒಟ್ಟು ಸಾಲವು ₹ 1.88 ಲಕ್ಷ ಕೋಟಿ ಆಗಿತ್ತು, ನಿವ್ವಳ ಸಾಲವು ₹ 1.61 ಲಕ್ಷ ಕೋಟಿ ಆಗಿತ್ತು ಎಂದು ಹೇಳಿದೆ.

2015–16ರಲ್ಲಿ ಸಮೂಹ ಪಡೆದ ಒಟ್ಟು ಸಾಲದಲ್ಲಿ ಸರ್ಕಾರಿ ಬ್ಯಾಂಕ್‌ಗಳ ಪಾಲು ಶೇಕಡ 55ರಷ್ಟು ಇತ್ತು. ಇದು 2021–22ರಲ್ಲಿ ಶೇ 21ಕ್ಕೆ ಇಳಿಕೆಯಾಗಿದೆ ಎಂದು ಸಮೂಹ ವಿವರಿಸಿದೆ. 2015–16ರಲ್ಲಿ ಒಟ್ಟು ಸಾಲದಲ್ಲಿ ಖಾಸಗಿ ಬ್ಯಾಂಕ್‌ಗಳ ಪಾಲು ಶೇ 31ರಷ್ಟು ಇದ್ದಿದ್ದು ಈಗ ಶೇ 11ಕ್ಕೆ ಇಳಿಕೆಯಾಗಿದೆ. ಬಾಂಡ್‌ಗಳ ಮೂಲಕ ಸಂಗ್ರಹಿಸಿರುವ ಸಾಲದ ಪ್ರಮಾಣವು ಹಿಂದೆ ಶೇ 14ರಷ್ಟು ಇದ್ದಿದ್ದು ಈಗ ಶೇ 50ಕ್ಕೆ ಹೆಚ್ಚಳವಾಗಿದೆ.

ಹಾಲಿ ಹಾಗೂ ಹೊಸ ಉದ್ದಿಮೆಗಳಲ್ಲಿ ಹೂಡಿಕೆ ಮಾಡಲು ಸಮೂಹವು ಸಾಲವಾಗಿ ಪಡೆದ ಹಣವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದೆ ಎಂದು ಕ್ರೆಡಿಟ್‌ಸೈಟ್ಸ್‌ ವರದಿಯು ಹೇಳಿತ್ತು.

ಅದಾನಿ ಸಮೂಹ ನೀಡಿರುವ ಅಂಕಿ–ಅಂಶಗಳು ಕ್ರೆಡಿಟ್‌ಸೈಟ್ಸ್‌ ವರದಿಯಲ್ಲಿ ಇರುವ ಅಂಕಿ–ಅಂಶಗಳಿಗಿಂತ ಭಿನ್ನವಾಗಿವೆ. ಸಮೂಹದ ಸಾಲದ ‍ಪ್ರಮಾಣವು ಆರೋಗ್ಯಕರ ಮಟ್ಟದಲ್ಲಿ ಇದೆ, ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಸಮೂಹ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT