ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‌ ಗ್ಲೋಬಲ್‌ ಸಿಇಒ, ಅದಾನಿ ಭೇಟಿ

Published 24 ಫೆಬ್ರುವರಿ 2024, 15:48 IST
Last Updated 24 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಉಬರ್‌ ಗ್ಲೋಬಲ್‌ ಸಿಇಒ ಡಾರಾ ಖೋಸ್ರೋವ್‌ಶಾಹಿ ಅವರನ್ನು ಉದ್ಯಮಿ ಗೌತಮ್‌ ಅದಾನಿ ಭೇಟಿ ಮಾಡಿದ್ದು, ಉಬರ್ ಜೊತೆಗೆ ಭವಿಷ್ಯದಲ್ಲಿನ ಸಹಯೋಗದ ಬಗ್ಗೆ ಸುಳಿವು ನೀಡಿದ್ದಾರೆ.

‘ಭಾರತದಲ್ಲಿ ಉಬರ್‌ನ ವಿಸ್ತರಣೆಗಾಗಿ ಡಾರಾ ಅವರ ದೃಷ್ಟಿಕೋನವು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಭಾರತೀಯ ಚಾಲಕರು ಮತ್ತು ಅವರ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಬದ್ಧತೆ ಇದೆ. ಡಾರಾ ಮತ್ತು ಅವರ ತಂಡದೊಂದಿಗೆ ಭವಿಷ್ಯದಲ್ಲಿನ ಸಹಯೋಗಕ್ಕಾಗಿ ಉತ್ಸುಕರಾಗಿದ್ದೇವೆ’ ಎಂದು ಅದಾನಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬೆಂಗಳೂರಲ್ಲಿ ಗುರುವಾರ ಡಿಜಿಟಲ್‌ ವಾಣಿಜ್ಯದ ಮುಕ್ತ ವ್ಯವಸ್ಥೆ (ಒಎನ್‌ಡಿಸಿ) ಕುರಿತು ಉಬರ್‌ ಕಂಪನಿಯು ಒಡಂಬಡಿಕೆಗೆ ಸಹಿ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT