ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಡನ್‌ಬರ್ಗ್‌ ವಿರುದ್ಧ ಕ್ರಮ: ಅದಾನಿ ಸಮೂಹ ಪರಿಶೀಲನೆ

Last Updated 26 ಜನವರಿ 2023, 11:29 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಅದಾನಿ ಸಮೂಹ ಗುರುವಾರ ಹೇಳಿದೆ.

ಸಂಸ್ಥೆಯ ಆರೋಪವು, ತನ್ನ ಪ್ರಮುಖ ಕಂಪನಿಯೊಂದರ ಷೇರು ಮಾರಾಟ ಪ್ರಕ್ರಿಯೆಯನ್ನು (ಎಫ್‌ಪಿಒ) ಹಾಳುಮಾಡುವ ಬೇಜವಾಬ್ದಾರಿಯ ಯತ್ನ ಎಂದು ಸಮೂಹವು ಆರೋಪಿಸಿದೆ.

‘ಕೇಡುಬುದ್ಧಿಯಿಂದ ಕೂಡಿರುವ, ಹಾನಿ ಮಾಡುವ ಉದ್ದೇಶದ, ಅಧ್ಯಯನವನ್ನೇ ನಡೆಸದೆ ಸಿದ್ಧಪಡಿಸಿದ ವರದಿಯು ಅದಾನಿ ಸಮೂಹ, ಅದರ ಹೂಡಿಕೆದಾರರು ಹಾಗೂ ಷೇರುದಾರರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿದೆ. ಈ ವರದಿಯಿಂದಾಗಿ ಭಾರತದ ಷೇರುಪೇಟೆಗಳಲ್ಲಿ ಉಂಟಾದ ಅನಿಶ್ಚಿತತೆಯು ಕಳವಳಕಾರಿಯಾದುದು ಹಾಗೂ ದೇಶದ ಪ್ರಜೆಗಳಿಗೆ ಅನಗತ್ಯವಾಗಿ ನೋವು ಉಂಟುಮಾಡುವಂಥದ್ದು’ ಎಂದು ಅದಾನಿ ಸಮೂಹದ ಮುಖ್ಯಸ್ಥ ಜತಿನ್ ಜಲುಂಧ್ವಾಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವರದಿ ಹಾಗೂ ಅದರಲ್ಲಿ ಇರುವ ಆಧಾರರಹಿತ ಹೇಳಿಕೆಗಳು ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವಂತಿವೆ. ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ತಾನೇ ಒಪ್ಪಿಕೊಂಡಿರುವಂತೆ ಅದಾನಿ ಷೇರುಗಳ ಬೆಲೆ ಇಳಿಕೆಯಿಂದ ಲಾಭ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇದೆ ಎಂದು ಜಲುಂಧ್ವಾಲಾ ವಿವರಿಸಿದ್ದಾರೆ.

ಅಮೆರಿಕ ಹಾಗೂ ಭಾರತದ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವ ಕುರಿತು ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಬಹಿರಂಗವಾದ ನಂತರದಲ್ಲಿ, ಸಮೂಹದ ಪ್ರಮುಖ ಕಂಪನಿಗಳ ಷೇರು ಮೌಲ್ಯವು ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT