ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನ ಮುಂದ್ರದಲ್ಲಿ ಅದಾನಿ ತಾಮ್ರ ಘಟಕ ಕಾರ್ಯಾರಂಭ

Published 28 ಮಾರ್ಚ್ 2024, 15:23 IST
Last Updated 28 ಮಾರ್ಚ್ 2024, 15:23 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ಒಡೆತನಕ್ಕೆ ಸೇರಿದ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕದ ಮೊದಲ ಹಂತವು ಗುಜರಾತ್‌ನ ಮುಂದ್ರದಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ.

ಇದರಿಂದ ತಾಮ್ರದ ಆಮದಿಗಾಗಿ ವಿದೇಶಿ ಅವಲಂಬನೆ ತಗ್ಗಲಿದ್ದು, ಇಂಧನ ವಲಯದ ಪರಿವರ್ತನೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.

ಅದಾನಿ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯಾದ ಕಚ್‌ ಕಾಪರ್‌ ಲಿಮಿಟೆಡ್‌ ಈ ಘಟಕವು ಉಸ್ತುವಾರಿ ಹೊತ್ತಿದೆ. ಮೊದಲ ಹಂತಕ್ಕೆ ಸುಮಾರು ₹10 ಸಾವಿರ ಕೋಟಿ ವ್ಯಯಿಸಲಾಗಿದ್ದು, ವಾರ್ಷಿಕ 5 ಲಕ್ಷ ಟನ್‌ನಷ್ಟು ಸಂಸ್ಕರಿತ ತಾಮ್ರವನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

2029ರ ವೇಳೆಗೆ ಎರಡನೇ ಹಂತವು ಪೂರ್ಣಗೊಳ್ಳಲಿದ್ದು, ಉತ್ಪಾದನಾ ಸಾಮರ್ಥ್ಯವನ್ನು ಒಂದು ದಶಲಕ್ಷ ಟನ್‌ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಈ ಘಟಕದಿಂದ ನೇರವಾಗಿ ಎರಡು ಸಾವಿರ ಹಾಗೂ ಪರೋಕ್ಷವಾಗಿ ಐದು ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದೆ. 

ಪಳೆಯುಳಿಕೆ ಇಂಧನಗಳ ಪರಿವರ್ತನೆಯಲ್ಲಿ ತಾಮ್ರದ ಪಾತ್ರ ನಿರ್ಣಾಯಕವಾಗಿದೆ. ಎಲೆಕ್ಟ್ರಿಕ್‌ ವಾಹನಗಳು, ಚಾರ್ಜಿಂಗ್‌ ಸ್ಟೇಷನ್, ಸೌರ, ಪವನ ವಿದ್ಯುತ್‌ ಉತ್ಪತ್ತಿ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಈ ಲೋಹದ ಅಗತ್ಯ ಹೆಚ್ಚಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT