ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌

Published 29 ಜೂನ್ 2023, 11:33 IST
Last Updated 29 ಜೂನ್ 2023, 11:33 IST
ಅಕ್ಷರ ಗಾತ್ರ

ನವದೆಹಲಿ: ಅನಿಲ ಪೂರೈಕೆ ಜಾಲವನ್ನು ವಿಸ್ತರಿಸಲು 8 ರಿಂದ 10 ವರ್ಷಗಳಲ್ಲಿ ₹ 18 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿಯವರೆಗೆ ಹೂಡಿಕೆ ಮಾಡಲು ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ ಮುಂದಾಗಿದೆ.

ವಾಹನಗಳಿಗೆ ಸಿಎನ್‌ಜಿ ಪೂರೈಕೆ ಮತ್ತು ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ಅನಿಲ ಪೂರೈಸಲು ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಈ ಹೂಡಿಕೆ ಮಾಡಲು ಉದ್ದೇಶಿಸಿರುವುದಾಗಿ ಕಂಪನಿಯ ಸಿಎಫ್‌ಒ ಪರಾಗ್ ಪಾರಿಖ್‌ ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ 124 ಜಿಲ್ಲೆಗಳಲ್ಲಿ ಕಂಪನಿಯು ಸೇವೆ ಒದಗಿಸುತ್ತಿದೆ. 460 ಸಿಎನ್‌ಜಿ ಕೇಂದ್ರಗಳನ್ನು ಹೊಂದಿದ್ದು, 7 ಲಕ್ಷ ಗ್ರಾಹಕರಿಗೆ ಕೊಳವೆ ಮಾರ್ಗದ ಮೂಲಕ ಅನಿಲ ಪೂರೈಸುತ್ತಿದೆ.

2022ರ ಏಪ್ರಿಲ್‌ನಿಂದ 2023ರ ಮಾರ್ಚ್ ಅವಧಿಯಲ್ಲಿ ₹1,150 ಕೋಟಿ ಹೂಡಿಕೆ ಮಾಡಿರುವುದಾಗಿ ಕಂಪನಿಯ ಈಚಿನ ವಾರ್ಷಿಕ ವರದಿಯಲ್ಲಿ ಪರಾಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT