ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್–10 ಕಂಪನಿಗಳ ಸಾಲಿಗೆ ಸೇರಿದ ಅದಾನಿ ಟ್ರಾನ್ಸ್‌ಮಿಷನ್

Last Updated 30 ಆಗಸ್ಟ್ 2022, 15:07 IST
ಅಕ್ಷರ ಗಾತ್ರ

ನವದೆಹಲಿ: ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ದೇಶದ ಅತ್ಯಂತ ಮೌಲ್ಯಯುತ ಹತ್ತು ಕಂಪನಿಗಳ ಪಟ್ಟಿಯಲ್ಲಿ ಅದಾನಿ ಟ್ರಾನ್ಸ್‌ಮಿಷನ್ ಕಂಪನಿ ಹೊಸದಾಗಿ ಸೇರಿಕೊಂಡಿದೆ. ಈಗ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 4.43 ಲಕ್ಷ ಕೋಟಿ ಆಗಿದ್ದು, ಟಾಪ್–10 ಪಟ್ಟಿಯಲ್ಲಿ ಒಂಭತ್ತನೆಯ ಸ್ಥಾನ ಪಡೆದಿದೆ.

ಮಂಗಳವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಮೌಲ್ಯವು ಶೇಕಡ 3.05ರಷ್ಟು ಹೆಚ್ಚಳವಾಗಿದೆ. ಷೇರು ಮೌಲ್ಯವು ಈ ವರ್ಷದಲ್ಲಿ ಇದುವರೆಗೆ ಶೇಕಡ 129.19ರಷ್ಟು ಏರಿಕೆ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಇನ್ಫೊಸಿಸ್‌ ಮತ್ತು ಹಿಂದುಸ್ತಾನ್ ಯುನಿಲಿವರ್ ನಾಲ್ಕು ಮತ್ತು ಐದನೆಯ ಸ್ಥಾನಗಳಲ್ಲಿವೆ.

ಟಾಪ್–10 ಪಟ್ಟಿಯಲ್ಲಿನ ಸ್ಥಾನವನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಕಳೆದುಕೊಂಡಿದೆ. ಎಲ್‌ಐಸಿ ಈಗ ಹನ್ನೊಂದನೆಯ ಸ್ಥಾನಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT