ನವದೆಹಲಿ: ಷೇರುಗಳಾಗಿ ಪರಿವರ್ತಿಸಲಾಗದ ಸಾಲಪತ್ರದ (ಎನ್ಸಿಡಿ) ಹಂಚಿಕೆ ಮೂಲಕ ₹1 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಅದಾನಿ ಸಮೂಹದ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ನಿರ್ಧರಿಸಿದೆ.

ಹಂಚಿಕೆಯು ಜುಲೈ 9ರಂದು ಆರಂಭವಾಗಲಿದ್ದು, 22ರಂದು ಮುಕ್ತಾಯಗೊಳ್ಳಲಿದೆ. ಎನ್ಸಿಡಿಯ ಮುಖಬೆಲೆ ₹1 ಸಾವಿರವಾಗಿದೆ. ಕನಿಷ್ಠ 10 ಎನ್ಸಿಡಿಗಳನ್ನು ಖರೀದಿಸಬೇಕು. ವಾರ್ಷಿಕ ಬಡ್ಡಿ ದರವು ಶೇ 9.30ರಷ್ಟಿದೆ. ಎನ್ಸಿಡಿ, 24 ತಿಂಗಳು, 36 ತಿಂಗಳು ಮತ್ತು 60 ತಿಂಗಳ ಅವಧಿ ಹೊಂದಿದೆ.

ಸಂಗ್ರಹಿಸಿದ ಬಂಡವಾಳದ ಪೈಕಿ ಶೇ 75ರಷ್ಟನ್ನು ಬಾಕಿ ಪಾವತಿಗೆ ಬಳಸಲಾಗುವುದು. ಉಳಿದ ಶೇ 25ರಷ್ಟನ್ನು ಕಂಪನಿಯ ಸಾಮಾನ್ಯ ಉದ್ದೇಶಕ್ಕೆ ಬಳಸಲಾಗುವುದು ಎಂದು ಕಂಪನಿ ಭಾನುವಾರ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮೊದಲ ಬಾರಿಗೆ ಎನ್ಸಿಡಿ ಹಂಚಿಕೆ ಮೂಲಕ ₹800 ಕೋಟಿ ಬಂಡವಾಳ ಸಂಗ್ರಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.