ಬುಧವಾರ, ಆಗಸ್ಟ್ 17, 2022
27 °C

ಕಾರ್ಪೊರೇಟ್‌ ತೆರಿಗೆ: ಮುಂಗಡ ಪಾವತಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಮುಂಗಡ ತೆರಿಗೆ ಪಾವತಿಯು ಶೇಕಡ 49ರಷ್ಟು ಹೆಚ್ಚಾಗಿದ್ದು, ₹ 1.09 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮೂಲಗಳು ತಿಳಿಸಿವೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಾರ್ಪೊರೇಟ್ ಮುಂಗಡ ತೆರಿಗೆ ಪಾವತಿ ಮೊತ್ತವು ₹73,126 ಕೋಟಿ ಆಗಿತ್ತು. ಕಾರ್ಪೊರೇಟ್‌ ತೆರಿಗೆ ದರ ಕಡಿತ ಮಾಡಿರುವುದು ಕಂಪನಿಗಳ ಮುಂಗಡ ತೆರಿಗೆ ಪಾವತಿಯಲ್ಲಿನ ಏರಿಕೆಗೆ ಕಾರಣ ಎಂಬುದು ಮೂಲಗಳು ನೀಡಿರುವ ವಿವರಣೆ.

ಸರಾಸರಿ ತೆರಿಗೆ ಸಂಗ್ರಹ ₹ 7.33 ಲಕ್ಷ ಕೋಟಿಗಳಷ್ಟಾಗಿದೆ. ಮರುಪಾವತಿ ಮೊತ್ತವು ₹ 1.46 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮರುಪಾವತಿ ಮಾಡಿದ್ದ ₹ 1.58 ಲಕ್ಷ ಕೋಟಿಗಳಿಗೆ ಹೋಲಿಸಿದರೆ ಶೇ 8.1ರಷ್ಟು ಕಡಿಮೆ ಆಗಿದೆ.

ಈ ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಕಾರ್ಪೊರೇಟ್‌ ಮುಂಗಡ ತೆರಿಗೆಯು ₹ 2.39 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿದ್ದ ₹ 2.51 ಲಕ್ಷ ಕೋಟಿಗಳಿಗೆ ಹೋಲಿಸಿದರೆ ಶೇ 4.9ರಷ್ಟು ಇಳಿಕೆ ಆಗಿದೆ.

ವೈಯಕ್ತಿಕ ಆದಾಯ ತೆರಿಗೆಯ ಮುಂಗಡ ಪಾವತಿಯು ಮೂರನೇ ತ್ರೈಮಾಸಿಕದಲ್ಲಿ ಶೇ 5.6ರಷ್ಟು ಇಳಿಕೆ ಆಗಿದ್ದು ₹ 31,054 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 32,910 ಕೋಟಿ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು