ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್ ಬೆನ್ನಲ್ಲೇ ಬೆಲೆ ಏರಿಕೆ ಘೋಷಿಸಿದ ವೊಡಾಫೋನ್ ಐಡಿಯಾ!

Last Updated 23 ನವೆಂಬರ್ 2021, 10:53 IST
ಅಕ್ಷರ ಗಾತ್ರ

ಬೆಂಗಳೂರು: ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್‌ಗಳ ದರ ಏರಿಕೆ ಮಾಡಿರುವ ಬೆನ್ನಲ್ಲೇ ವೊಡಾಫೋನ್ ಐಡಿಯಾ ಕೂಡ ದರ ಪರಿಷ್ಕರಿಸಿದೆ.

ವಿವಿಧ ಪ್ರಿಪೇಯ್ಡ್ ಪ್ಲ್ಯಾನ್‌ಗಳ ದರ ಪರಿಷ್ಕರಣೆ ಮಾಡಲಾಗಿದ್ದು, ನವೆಂಬರ್ 25ರಿಂದ ಜಾರಿಗೆ ಬರಲಿದೆ.

ಆರಂಭಿಕ ವಾಯ್ಸ್ ಪ್ಯಾಕ್ ದರ ₹79 ಇದ್ದು, ₹20 ಹೆಚ್ಚಳದ ಬಳಿಕ ₹99 ಆಗಿದೆ.

ದರ ಏರಿಕೆಗೆ ಏರ್‌ಟೆಲ್ ನೀಡಿರುವ ಕಾರಣವನ್ನೇ ವೊಡಾಫೋನ್ ಕೂಡ ನೀಡಿದ್ದು, ಉದ್ಯಮ ವೆಚ್ಚ ಮತ್ತು ಲಾಭಕ್ಕೆ ಅನುಗುಣವಾಗಿ ದರ ಪರಿಷ್ಕರಿಸಲಾಗಿದೆ ಎಂದು ಕಂಪನಿ ಹೇಳಿದೆ.

ಅಲ್ಲದೆ, ಪ್ರೀಮಿಯಂ ಪ್ಲ್ಯಾನ್ ₹2,399 ಇನ್ನು ಮುಂದೆ ₹2,899 ಇರಲಿದೆ.

ವಾಯ್ಸ್ ಮತ್ತು ಡೇಟಾ ಪ್ಲ್ಯಾನ್ ದರ ಏರಿಕೆ ಕುರಿತು ವೊಡಾಫೋನ್ ಐಡಿಯಾ ಪ್ರಕಟಿಸಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT