ಮಂಗಳವಾರ, ಜೂನ್ 28, 2022
21 °C

ರಾಜಸ್ಥಾನ: ₹ 100ರ ಸನಿಹ ಬಂದ ಡೀಸೆಲ್ ಬೆಲೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೋಮವಾರ ಹೆಚ್ಚಳ ಆಗಿದ್ದು ರಾಜಸ್ಥಾನದಲ್ಲಿ ಲೀಟರ್ ಡೀಸೆಲ್ ಬೆಲೆ ₹ 100ರ ಸನಿಹ ಬಂದಿದೆ.

ಪೆಟ್ರೋಲ್ ಬೆಲೆ 28 ಪೈಸೆ, ಡೀಸೆಲ್ ಬೆಲೆ 27 ಪೈಸೆ ಹೆಚ್ಚಾಗಿದೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್‌ನಲ್ಲಿ ಪೆಟ್ರೋಲ್ ದರವು ಈಗಾಗಲೇ ₹ 100ರ ಗಡಿಯನ್ನು ದಾಟಿದೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ₹ 106.39 ಆಗಿದೆ. ಇದು ದೇಶದಲ್ಲಿಯೇ ಅತಿಹೆಚ್ಚು. ಇಲ್ಲಿ ಡೀಸೆಲ್ ದರ ಈಗ ₹ 99.24ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹ 98.55, ಡೀಸೆಲ್ ಬೆಲೆ ₹ 91.46 ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 72 ಅಮೆರಿಕನ್ ಡಾಲರ್‌ಗೆ ಸಮೀಪಿಸುತ್ತಿದೆ. ಇದು ಎರಡು ವರ್ಷಗಳ ಗರಿಷ್ಠ ಬೆಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು