ಮಂಗಳವಾರ, ಮಾರ್ಚ್ 9, 2021
31 °C

ಆ್ಯಪ್‌ ಮೂಲಕ ಸಾಲ: ನಿಯಮಾವಳಿ ರಚಿಸಿದ ಒಕ್ಕೂಟ

ಪಿಟಿಐ Updated:

ಅಕ್ಷರ ಗಾತ್ರ : | |

RBI

ಮುಂಬೈ: ಸಾಲ ಕೊಡುವುದಾಗಿ ಹೇಳುವ ಅನಧಿಕೃತ ಆ್ಯಪ್‌ಗಳ ವಿಚಾರದಲ್ಲಿ ಸಾರ್ವಜನಿಕರು ಜಾಗರೂಕರಾಗಿ ಇರಬೇಕು ಎಂದು ಆರ್‌ಬಿಐ ಎಚ್ಚರಿಕೆ ನೀಡಿದ ನಂತರ, ಕೆಲವು ಆ್ಯಪ್‌ ಕಂಪನಿಗಳು ಗ್ರಾಹಕರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ನಿಯಮಾವಳಿಗಳನ್ನು ರೂಪಿಸಿವೆ.

ಹಣಕಾಸು ಸೇವಾ ವಲಯದ ಐದು ಕಂಪನಿಗಳು ಸೇರಿಕೊಂಡು ‘ಗ್ರಾಹಕ ಸಬಲೀಕರಣಕ್ಕೆ ಫಿನ್‌ಟೆಕ್‌ ಒಕ್ಕೂಟ’ (ಎಫ್‌ಎಸಿಇ) ಎಂಬ ಸಂಘಟನೆಯನ್ನು ರಚಿಸಿಕೊಂಡಿವೆ. ಡಿಜಿಟಲ್‌ ವೇದಿಕೆಗಳ ಮೂಲಕವೇ ಸಾಲ ನೀಡುವ ವ್ಯವಸ್ಥೆಯಲ್ಲಿ ಅನಪೇಕ್ಷಿತ ಕ್ರಮಕ್ಕೆ ಯಾರೂ ಮುಂದಾಗದಂತೆ ತಡೆಯುವ ಉದ್ದೇಶ ಈ ನಿಯಮಗಳಿಗೆ ಇದೆ ಎಂದು ಸಂಘಟನೆ ಹೇಳಿದೆ.

ಆ್ಯಪ್‌ ಮೂಲಕ ಸಾಲ ನೀಡುವುದಾಗಿ ಹೇಳುವ ಹಣಕಾಸು ತಂತ್ರಜ್ಞಾನ ವಲಯದ ಅನಧಿಕೃತ ಕಂಪನಿಗಳ ಜಾಲದಲ್ಲಿ ಬೀಳದಂತೆ ಆರ್‌ಬಿಐ ಎಚ್ಚರಿಕೆ ನೀಡಿದೆ. ಇಂತಹ ಆ್ಯಪ್‌ಗಳ ಮೂಲಕ ಸಾಲ ಪಡೆದ ಕನಿಷ್ಠ ಮೂವರು, ಸಾಲ ವಸೂಲಿಗೆ ಆ್ಯಪ್‌ಗಳ ಪ್ರತಿನಿಧಿಗಳು ನೀಡಿದ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅರ್ಲಿಸ್ಯಾಲರಿ, ಕ್ರೆಡಿಟ್‌ಬೀ, ಕಿಶ್ತ್‌, ಕ್ಯಾಶ್‌ಇ ಮತ್ತು ಲೋನ್‌ಟ್ಯಾಪ್‌ ಕಂಪನಿಗಳು ಜೊತೆ ಸೇರಿ ಎಫ್‌ಎಸಿಇ ಒಕ್ಕೂಟ ರಚಿಸಿಕೊಂಡಿವೆ. ಸಾಲಕ್ಕೆ ಪ್ರತಿಯಾಗಿ ಪಡೆಯುವ ಎಲ್ಲ ಬಗೆಯ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು, ಸಾಲ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು, ಸಾಲ ವಸೂಲಿ ಮಾಡುವ ತಂಡದ ಸದಸ್ಯರು ಘನತೆಯಿಂದ ವರ್ತಿಸಬೇಕು ಎಂಬ ಅಂಶಗಳು ನಿಯಮಗಳಲ್ಲಿ ಉಲ್ಲೇಖವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು