ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜಿಆರ್‌ ಬಾಕಿ ₹ 21,533 ಕೋಟಿ: ವೊಡಾಫೋನ್‌

Last Updated 7 ಮಾರ್ಚ್ 2020, 14:06 IST
ಅಕ್ಷರ ಗಾತ್ರ

ನವದೆಹಲಿ:ವೊಡಾಫೋನ್‌ ಐಡಿಯಾ ಕಂಪನಿಯು ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತವನ್ನು ಲೆಕ್ಕಾಚಾರ ಹಾಕಿದ್ದು, ಆ ಮೊತ್ತವು ಸರ್ಕಾರ ಅಂದಾಜು ಮಾಡಿರುವ ಮೊತ್ತದ ಅರ್ಧಕ್ಕಿಂತಲೂ ಕಡಿಮೆ ಇದೆ.

ದೂರಸಂಪರ್ಕ ಇಲಾಖೆಗೆ ನೀಡಬೇಕಿರುವ ಎಜಿಆರ್‌ ಬಾಕಿ ₹ 21,533 ಕೋಟಿ. ಇದರಲ್ಲಿ ಮೂಲ ಬಾಕಿ ಮೊತ್ತ ₹ 6,854 ಕೋಟಿ ಸೇರಿಕೊಂಡಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಸರ್ಕಾರದ ಅಂದಾಜಿನ ಪ್ರಕಾರ ಕಂಪನಿಯು ₹ 53 ಸಾವಿರ ಕೋಟಿ ಬಾಕಿ ನೀಡಬೇಕಾಗಿದೆ.

ತಾನು ಅಂದಾಜು ಮಾಡಿರುವ ಮೊತ್ತದಲ್ಲಿ ಈಗಾಗಲೇ ₹ 3,500 ಕೋಟಿ ಪಾವತಿಸಲಾಗಿದೆ ಎಂದೂ ಹೇಳಿದೆ.

ಕೇಂದ್ರ ಸರ್ಕಾರವು ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ನೆರವಾಗುವ ಪರಿಹಾರ ಕೊಡುಗೆ ರೂಪಿಸುತ್ತಿಲ್ಲ. ದೂರಸಂಪರ್ಕ ವಲಯದ ಬೆಳವಣಿಗೆಗೆ ಅನುಕೂಲ ಆಗುವಂತೆ ಯೋಜನೆ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಗಳು ವಹಿವಾಟು ನಡೆಸಲು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ, ಸುಪ್ರೀಂಕೋರ್ಟ್‌ ಆದೇಶದಂತೆ ಬಾಕಿ ಪಾವತಿಸುವ ಬದ್ಧತೆಯನ್ನು ಕಂಪನಿಗಳು ತೋರಿಸಬೇಕಿದೆ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT